ಶಿವಮೊಗ್ಗ ಪಾಲಿಕೆ ಆಯುಕ್ತ ವಿಚಾರಕ್ಕೆ ಕ್ಲೈಮ್ಯಾಕ್ಸ್‌ | ಅಧಿಕಾರ ಸ್ವೀಕರಿಸಿದ ಡಾ|| ಕವಿತಾ ಯೋಗಪ್ಪನವರ್

Shivamogga City Corporation Commissioner, Dr. Kavita Yogappanvar has officially assumed office.Malenadu Today

ಶಿವಮೊಗ್ಗ ಪಾಲಿಕೆ ಆಯುಕ್ತ ವಿಚಾರಕ್ಕೆ ಕ್ಲೈಮ್ಯಾಕ್ಸ್‌ | ಅಧಿಕಾರ ಸ್ವೀಕರಿಸಿದ ಡಾ|| ಕವಿತಾ ಯೋಗಪ್ಪನವರ್
Shivamogga City Corporation Commissioner, Dr. Kavita Yogappanvar

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ|| ಕವಿತಾ ಯೋಗಪ್ಪನವರ್, ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಡಾ|| ಶಿವರಾಮಕಾರಂತ ಬಡಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರನ್ನು ಆಯ್ಕೆಮಾಡಿರುವ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. 

ಆನಂತರ ಕೆಲವೊಂದು ಬೆಳವಣಿಗೆಗಳು ಪಾಲಿಕೆಯಲ್ಲಿ ನಡೆದಿದ್ದವು. ಇದೀಗ ಗಾಳಿಸುದ್ದಿಗಳು ಸೇರಿದಂತೆ ಎಲ್ಲದಕ್ಕೂ ಕ್ಲೈಮ್ಯಾಕ್ಸ್‌ ಸಿಕ್ಕಿದ್ದು ಪಾಲಿಕೆ ಆಯುಕ್ತರಾಗಿ ಕವಿತಾ ಯೋಗಪ್ಪನವರ್‌ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಆಯುಕ್ತ ಮಾಯಣ್ಣಗೌಡ ಹೂಗುಚ್ಚ ನೀಡಿ ಕವಿತಾರವರನ್ನ ಸ್ವಾಗತಿಸಿದ್ದಾರೆ. 

ಇನ್ನೂ ವರ್ಗಾವಣೆಗೊಂಡಿರುವ ಮಾಯಣ್ಣಗೌಡರು ಸ್ಥಳ ನಿರೀಕ್ಷಣೆಯಲ್ಲಿದ್ದು ಅವರಿಗೆ  ಮುಂದಿನ ಸ್ಥಳ ನಿಯುಕ್ತಿಗಾಗಿ ತಮ್ಮ ಮಾತೃ ಇಲಾಖೆಯಲ್ಲಿ ಕಾರ್ಯ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 

Shivamogga City Corporation Commissioner, Dr. Kavita Yogappan, has officially assumed office.Malenadu Today had previously reported on Dr. Yogappan's selection for the role.The outgoing commissioner, Mayanna Gowda, welcomed Dr. Yogappan and presented her with a bouquet. Mayanna Gowda is currently awaiting his next appointment and has been instructed to report to his parent department