ಶಿವಮೊಗ್ಗ ಪೊಲೀಸರ ಒಳ್ಳೆ ಕೆಲಸ | ಶಾರ್ಟ್‌ ಸರ್ಕಿಟ್‌, ಬೆಂಕಿ | ಅಧಿಕಾರಿಗಳ ರೇಡ್‌ ಹಾಗೂ ಇನ್ನಷ್ಟು ಸುದ್ದಿ TODAY NEWS

Shimoga News, Malnad Today News Of Shivamogga

ಶಿವಮೊಗ್ಗ ಪೊಲೀಸರ ಒಳ್ಳೆ ಕೆಲಸ | ಶಾರ್ಟ್‌ ಸರ್ಕಿಟ್‌, ಬೆಂಕಿ | ಅಧಿಕಾರಿಗಳ ರೇಡ್‌ ಹಾಗೂ ಇನ್ನಷ್ಟು ಸುದ್ದಿ TODAY NEWS
Shimoga News, Malnad Today, News Of Shivamogga

 

SHIVAMOGGA | MALENADUTODAY NEWS | Jun 18, 2024  ಮಲೆನಾಡು ಟುಡೆ 

 

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸವಾರ್ ಲೈನ್‌ ರೋಡ್‌ನಲ್ಲಿ ಪಾರ್ಕಿಂಗ್‌ ಸಮಸ್ಯೆ ಸರಿಪಡಿಸುವ ಸಲುವಾಗಿ ಪಾಳುಬಿದ್ದಿದ್ದ ಕನ್ಸರ್ವೆನ್ಸಿ ರಸ್ತೆಯನ್ನು ಸ್ವಚ್ಚ ಮಾಡಿಸಿದ್ದಾರೆ. ಇದೀಗ ಅಲ್ಲಿ ಈ ಭಾಗದಲ್ಲಿ ಓಡಾಡುವ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ  ಸಾರ್ವಜನಿಕರು ಪಶ್ಚಿಮ ಸಂಚಾರಿ ಪೊಲೀಸರ ಕಾರ್ಯವನ್ನು ಮೆಚ್ಚಿದ್ದಾರೆ. 

ಪುಡ್‌ಕೋರ್ಟ್‌ ಮೇಲೆ ಅಧಿಕಾರಿಗಳ ರೇಡ್‌

ಶಿವಮೊಗ್ಗದ ಪುಡ್‌ಕೋರ್ಟ್‌ ನಲ್ಲಿನ ಅಂಗಡಿಗಳ ಮೇಲೆ ಇವತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಈ ವೇಳೆ 15 ಅಂಗಡಿಗಳಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅನಧಿಕೃತ ಬಣ್ಣ ಹಾಗೂ ಸ್ವಚ್ಚತೆ ಮತ್ತು ಲೈಸೆನ್ಸ್‌ ವಿಚಾರಕ್ಕೆ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.  

 

ಶಿರಸಿಯಲ್ಲಿ ಶಂಕಿತನ ಬಂಧನ

ಶಿವಮೊಗ್ಗ ತೀರ್ಥಹಳ್ಳಿ ಐಸಿಸ್‌ ಮಾಡ್ಯುಲ್‌ಗೆ ಒಂದು ಇತ್ಯರ್ಥ ನೀಡಿರುವ ಎನ್‌ಐಎ ಇದೀಗ ಶಿರಸಿಯಲ್ಲಿ ಓರ್ವನನ್ನ ಬಂಧಿಸಿದೆ.  ಬನವಾಸಿಯ ದಾಸನಕೊಪ್ಪದ ಓರ್ವ ಶಂಕಿತನ್ನ ಬಂದಿಸಿರುವ ಎನ್‌ಐಎ ಆತ ವಿದೇಶದಿಂದ ವಾಪಸ್‌ ಬರುವುದನ್ನ ಕಾಯುತ್ತಿತ್ತು. ಹಬ್ಬಕ್ಕಾಗಿ ಊರಿಗೆ ಬಂದ ಸಂದರ್ಭದಲ್ಲಿ ಆತನನ್ನ ವಶಕ್ಕೆ ಪಡೆಯಲಾಗಿದ್ದು, ಆತ ನಕಲಿ ದಾಖಲೆ ನೀಡಿ ಪಾಸ್‌ಪೋರ್ಟ್‌ ಪಡೆದಿರುವ ಬಗ್ಗೆ ಅನುಮಾನಗಳಿವೆ ಎನ್ನಲಾಗಿದೆ. ಇನ್ನೂ ಈತ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

ಶಾರ್ಟ್‌ ಸರ್ಕಿಟ್‌ನಿಂದ ಮನೆಗೆ ಬೆಂಕಿ

ಇತ್ತ ಶಿವಮೊಗ್ಗದ ಇಲಿಯಾಜ್‌ ನಗರದಲ್ಲಿ ಮನೆಯೊಂದರಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿಹೊತ್ತಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಹಲವು ಸಾಮಗ್ರಿಗಳು ನಷ್ಟವಾಗಿದ್ದು, ಮನೆಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.