Public Nuisance | ಶಿವಮೊಗ್ಗ ಸಿಟಿ ಸೇರಿದಂತೆ ಹಲವೆಡೆ ಪೊಲೀಸ್‌ ಬೀಟ್‌ | 19 +1 ಕೇಸ್‌

Public Nuisance Police Beat Including Shivamogga City | 19+1 case

Public Nuisance  | ಶಿವಮೊಗ್ಗ ಸಿಟಿ ಸೇರಿದಂತೆ ಹಲವೆಡೆ ಪೊಲೀಸ್‌ ಬೀಟ್‌ | 19 +1 ಕೇಸ್‌
Public Nuisance, Police Beat , Shivamogga City

SHIVAMOGGA | MALENADUTODAY NEWS | Jun 19, 2024  ಮಲೆನಾಡು ಟುಡೆ 

ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಆರ್ ಎಸ್ ಪಾರ್ಕ್, ಕೋಟೆ ರಸ್ತೆ, ಬಿ ಬಿ ರಸ್ತೆ, ಸಿ ಎಲ್ ರಾಮಣ್ಣ ರಸ್ತೆ, ಸೂಳೆ ಬೈಲು ಪ್ರದೇಶಗಳಲ್ಲಿ ನಿನ್ನೆ ಪೊಲೀಸರು ಕಾಲ್ನಡಿಗೆ ಗಸ್ತು ಕೈಗೊಂಡಿದ್ದಾರೆ.

ಈಭಾಗದಲ್ಲಿ ಅಷ್ಟೆ ಅಲ್ಲದೆ ಅತ್ತ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ  ಬೆಂಕಿ ನಗರ, ಕೆ ಕೆ ನಗರ, ಚಿಕ್ಕಲ್, ಆಯನೂರು, 

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಶಿವಾನಿ ಕ್ರಾಸ್, ಕೊಡಿಹಳ್ಳಿ, ಬಾಬಳ್ಳಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಮಲ್ಲಂದೂರು,  

ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಆನವಟ್ಟಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು Area Domination ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ ವಿಶೇಷ ಗಸ್ತು  (Foot Patrolling)  ಮಾಡಿದೆ

ಈ ವೇಳೆ  Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 19 ಲಘು ಪ್ರಕರಣಗಳನ್ನು ದಾಖಲಿಸಿದೆ. 

ಅಲ್ಲದೆ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ವ್ಯಕ್ತಿಯೊಬ್ಬನನ್ನು ವೈಧ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಆತ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ NDPS ಕಾಯ್ದೆಯಡಿ 01 ಪ್ರಕರಣವನ್ನು  ದಾಖಲಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.