ಭಾನುಪ್ರಕಾಶ್ ಇನ್ನಿಲ್ಲ | ಸಾವಿಗೂ ಮುನ್ನ ಕೊನೆ ಕ್ಷಣದಲ್ಲಿ ನಡೆದಿದ್ದೇನು? |

Shivamogga BJP leader, Bhanuprakash, passed away from a heart attack shortly after participating in a protest against petrol and diesel price hikes

ಭಾನುಪ್ರಕಾಶ್  ಇನ್ನಿಲ್ಲ | ಸಾವಿಗೂ ಮುನ್ನ ಕೊನೆ ಕ್ಷಣದಲ್ಲಿ ನಡೆದಿದ್ದೇನು? |
Shivamogga BJP leader Bhanuprakash

SHIVAMOGGA | MALENADUTODAY NEWS | Jun 17, 2024  ಮಲೆನಾಡು ಟುಡೆ 

ಶಿವಮೊಗ್ಗ ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್‌ರವರು ಇವತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಸಾಯುವುದಕ್ಕೂ ಕೆಲವೇ ಹೊತ್ತಿಗೂ ಮೊದಲು ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಪ್ರತಿಭಟನೆಯಲ್ಲಿನ ದೃಶ್ಯಗಳನ್ನ ಹಂಚಿಕೊಂಡು ಬಿಜೆಪಿ ಮುಖಂಡರು ದುಃಖ ವ್ಯಕ್ತಪಡಿಸುತ್ತಿದ್ದಾರೆ. 

ಇವತ್ತು ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಏರಿಕೆ ವಿರುದ್ಧ ಶಿವಮೊಗ್ಗ ಬಿಜೆಪಿ ಪ್ರತಿಭಟನೆಯನ್ನ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಹಿರಿಯ ನಾಯಕರಾದ ಭಾನುಪ್ರಕಾಶ್‌ ಹಾಗೂ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಭಾನುಜಿ ಪ್ರತಿಭಟನೆಯ ಅನಿವಾರ್ಯತೆಯನ್ನು ಕಾರ್ಯಕರ್ತರ ಮುಂದೆ ತೆರೆದಿಟ್ಟಿದ್ದರು. ಬೆಲೆ ಏರಿಕೆಯ ವಿರುದ್ಧ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ ಅವರು ರಘುಪತಿ ರಾಘವ ರಾಜಾರಾಮ, ಪತೀತ ಪಾವನ ಸೀತಾರಾಮ ಎಂದು ಹಾಡಿ ಹಾಗೂ ಹಾಡಿಸಿ ಸೀತಾರಾಮಚಂದ್ರನಿಗೆ ಜೈ ಎಂದು ಘೋಷಣೆ ಕೂಗಿದ್ದರು. ಅಲ್ಲದೆ ಕೊನೆಯಲ್ಲಿ ಗೋವಿಂದ ಗೋವಿಂದ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಅವರು, ಅಲ್ಲಿಂದ ಮನೆಗೆ ಹೊರಟಿದ್ದಾರೆ. ಮಾರ್ಗ ಮಧ್ಯೆದಲ್ಲಿಯೇ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಪ್ತರು ಅವರನ್ನ ಮ್ಯಾಕ್ಸ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವಿಶೇಷ ವೈದ್ಯರ ತಂಡ ಅವರನ್ನು ಉಳಿಸಿಕೊಳ್ಳಲು ಮುಂದಾಗಿದೆ. ಆದರೆ ಮಾನವ ಪ್ರಯತ್ನಕ್ಕೆ ಸ್ಪಂದಿಸುವ ಮೊದಲೇ ಭಾನುಪ್ರಕಾಶ್‌ರವರು ಇಹಲೋಕ ತ್ಯಜಿಸಿದ್ದರು. 

ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಎಸ್‌ ಅರುಣ್‌, ಎಂಬಿ ಭಾನುಪ್ರಕಾಶ್‌ರವರು ಹಾಗೂ ನಾವು ಶಿವಪ್ಪನಾಯಕ ವೃತ್ತದಿಂದ ಅಣಕು ಶವಯಾತ್ರೆ ನಡೆಸಿದವರು, ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆ ಮುಗಿಸಿದ ಅವರು ಕಾರು ಹತ್ತುವಾಗ ಸುಸ್ತಾದಂತೆ ಕಂಡುಬಂದರು, ಆ ಬಳಿಕ ಕೆಲವೇ ನಿಮಿಷದಲ್ಲಿ ಕಾರಿನಲ್ಲಿ ಕುಸಿದು ಬಿದ್ದರು. ಅವರನ್ನ ತಕ್ಷಣವೇ ಮ್ಯಾಕ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಅವರನ್ನ ಪರೀಕ್ಷಿಸಿದ ವೈದ್ಯರು ಭಾನುಪ್ರಕಾಶ್‌ ನಿಧನರಾಗಿದ್ದಾರೆ ಎಂದು ತಿಳಿಸಿದರು. 

Shivamogga BJP leader, Bhanuprakash, passed away from a heart attack shortly after participating in a protest against petrol and diesel price hikes. He addressed the crowd, expressing his concerns and leading chants against the price increase. After leaving for home, he experienced severe chest pain and was rushed to Max Hospital, where doctors were unable to save him.