ನೀರೊಲೆಯಲ್ಲಿ ಅವಿತು ಕುಳಿತ ಕಾಳಿಂಗ | ಮನೆಯವರಿಗೆ ಶಾಕ್‌ | ಸರ್ಪರಾಜ ಸಿಕ್ಕಿಬಿದ್ದಿದ್ದೇಗೆ ನೀವೆ ನೋಡಿ

In Agumbe, Thirthahalli taluk, Shivamogga district, an ARSS team rescued a king cobra

ನೀರೊಲೆಯಲ್ಲಿ ಅವಿತು ಕುಳಿತ ಕಾಳಿಂಗ | ಮನೆಯವರಿಗೆ ಶಾಕ್‌ | ಸರ್ಪರಾಜ ಸಿಕ್ಕಿಬಿದ್ದಿದ್ದೇಗೆ ನೀವೆ ನೋಡಿ
ARSS team, Agumbe, Thirthahalli taluk, Shivamogga district, Agumbe Rainforest Research Center

SHIVAMOGGA | MALENADUTODAY NEWS | Jun 17, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ಎ ಆರ್‌ಎಸ್‌ಎಸ್‌ನ ಟೀಂ ಮತ್ತೊಂದು ಕಾಳಿಂಗ ಸರ್ಪವೊಂದನ್ನ ರಕ್ಷಣೆ ಮಾಡಿದ್ದಾರೆ. ರಸ್ತೆ ದಾಟುತ್ತಿದ್ದ ಕಾಳಿಂಗವೊಂದು ನಾಯಿಗಳಿಗೆ ಹೆದರಿ ಮನೆಯೊಂದರ ಹಂಡೆ ಒಲೆಯಲ್ಲಿ ಅಡಗಿ ಕುಳಿತಿತ್ತು. ಆ ಬಳಿಕ ಅದನ್ನ ರಕ್ಷಣೆ ಮಾಡಲಾಗಿದೆ. 

ಆಗುಂಬೆ ಬಳಿ 12 ಅಡಿ ಉದ್ದದ ಕಾಳಿಂಗವೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ಅಲ್ಲಿದ್ದ ನಾಯಿಗಳು ಕಾಳಿಂಗವನ್ನು ಬೆದರಿಸಿವೆ. ಇದರಿಂದ ಭಯಗೊಂಡ ಕಾಳಿಂಗ ಅಲ್ಲಿಯೇ ಇದ್ದ ಮನೆಯೊಂದರ ಬಚ್ಚಲು ಒಲೆಯೊಳಗೆ ಅಡಗಿಕೊಂಡಿದೆ. ಕಾಳಿಂಗ ಅಲ್ಲಿಂದಲೇ ನೋಡುತ್ತಾ ಬುಸುಗುಟುತ್ತಿತ್ತು. ಇನ್ನೂ ರೋಡಲ್ಲಿ ಹೋಗುತ್ತಿದ್ದ ಕಾಳಿಂಗ ಮನೆಗೆ ಮನೆಯವರಿಗೆ ನಿದಿರೆ ಬರುವುದುಂಟೆ. ಹಾಗಾಗಿ ಆತಂಕ ಗೊಂಡ ಸ್ಥಳೀಯರು ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರದ ಅಜಯ್‌ ಗಿರಿಯವರಿಗೆ ವಿಷಯ ಗಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅವರು ಸುರಕ್ಷಿತವಾಗಿ ಕಾಳಿಂಗವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂಬಂಧ ಅಜಯ್‌ ಗಿರಿಯವರು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೋ ದೃಶ್ಯ ಇಲ್ಲಿದೆ 

View this post on Instagram

A post shared by Ajay Giri (@ajay_v_giri)

In Agumbe, Thirthahalli taluk, Shivamogga district, an ARSS team rescued a king cobra.  Ajay Giri of the Agumbe Rainforest Research Center.