ವಿಸಿ ನಾಲೆಗೆ ಬಿದ್ದ ಭದ್ರಾವತಿ ಮೂಲದ ಕಾರು! ಐವರ ಸಾವು! ಏನಾಯ್ತು ಅಲ್ಲಿ?

Here is the details of the tragedy that happened in the VC canal of Mandya ಮಂಡ್ಯದ ವಿಸಿ ನಾಲೆಯಲ್ಲಿ ನಡೆದ ದುರಂತದ ವಿವರ ಇಲ್ಲಿದೆ

ವಿಸಿ ನಾಲೆಗೆ ಬಿದ್ದ ಭದ್ರಾವತಿ ಮೂಲದ ಕಾರು! ಐವರ ಸಾವು! ಏನಾಯ್ತು ಅಲ್ಲಿ?

KARNATAKA NEWS/ ONLINE / Malenadu today/ Nov 8, 2023 SHIVAMOGGA NEWS

mandya |  ಮಂಡ್ಯ ತಾಲ್ಲೂಕಿನ ಪಾಂಡವಪುರದಲ್ಲಿರುವ ವಿಸಿ ನಾಲೆಗೆ ಬಿದ್ದ ಕಾರೊಂದರಲ್ಲಿ ಐವರು ಸಾವನ್ನಪ್ಪಿದ್ದಾರೆ. ಮೈಸೂರಿಗೆ ಹೋಗಿದ್ದವರು ವಾಪಸ್ ಹೋಗುತ್ತಿದ್ದ ವೇಳೆ ಈ ಘಟನೆ  ನಡೆದಿದೆ. 

ಬೈಕ್​ವೊಂದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿದ್ದ ಮಾರುತಿ ಸ್ವಿಫ್ಟ್ ಕಾರು ನಾಲೆಗೆ ಬಿದ್ದಿದೆ. ಡ್ಯಾಂನಿಂದ ನೀರು ಬಿಟ್ಟಿರುವ ಕಾರಣಕ್ಕೆ ಚಾನಲ್​ನಲ್ಲಿ ವೇಗವಾಗಿ ನೀರು ಹರಿಯುತ್ತಿತ್ತು. ಹೀಗಾಗಿ ನೀರಿನಿಂದ ಬಚಾವ್ ಆಗಿ ಬರಲಾಗದೇ ಐವರು ಸಾವನ್ನಪ್ಪಿದ್ದಾರೆ. 

READ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿಎತ್ತಂಗಡಿ! ಎಲ್ಲಿಗೆ ಗೊತ್ತಾ? ಕಾರಣ?

ಇನ್ನೂ  ಕಾರನ್ನ ನೀರಿನಿಂದ ಮೇಲಕ್ಕೆತ್ತುವ ಸಂದರ್ಭದಲ್ಲಿ ಕೆಳಕ್ಕೆ ಬಿದ್ದ ಮೊಬೈಲ್​ವೊಂದು ರಿಂಗ್​ ಆಗಿದೆ. ತಕ್ಷಣವೇ ಅದನ್ನ ರಿಸೀವ್ ಮಾಡಿದ ಪೊಲೀಸ್ ಅಧಿಕಾರಿಗಳು ನೀರಿನಲ್ಲಿ ಬಿದ್ದವರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಓರ್ವನ ಮಾಹಿತಿ ಲಭ್ಯವಾಗಿದ್ದು, ಮೂಲಗಳ ಪ್ರಕಾರ, ಐವರು ಬೇರೆ ಬೇರೆ ಕಡೆಯವರು ಎನ್ನಲಾಗುತ್ತಿದೆ. 

ಮೃತರು ಚಂದ್ರಪ್ಪ(61), ಕೃಷ್ಣಪ್ಪ (60) ಧನಂಜಯ್ಯ (55), ಬಾಬು, ಜಯಣ್ಣ ಎಂದು ಗೊತ್ತಾಗಿದ್ದು, ಇವರು   ತಿಪಟೂರು, ಚನ್ನರಾಯಪಟ್ಟಣ, ಭದ್ರಾವತಿ, ಶಿವಮೊಗ್ಗದವರು ಎನ್ನಲಾಗ್ತಿದೆ.ಈ ಬಗ್ಗೆ ಇಂದು ಸ್ಪಷ್ಟತೆ ಹೊರಬೀಳಲಿದೆ. ಕಾರು ಭದ್ರಾವತಿಯ ಚಂದ್ರಪ್ಪ ಎಂಬವರಿಗೆ ಸೇರಿದ್ದು ಎಂದು ಗೊತ್ತಾಗಿದೆ