ಶಿವಮೊಗ್ಗದಲ್ಲಿ ವಿಮಾನ ಹಾರದಿದ್ದರೆ ಪ್ರಧಾನಿಯವರು ಏರ್​ಪೋರ್ಟ್​ನ್ನ ಅದಾನಿಗೋ ಅಂಬಾನಿಗೋ ಮಾರೋದು ಗ್ಯಾರಂಟಿ

If a flight doesn't fly in Shimoga, the Prime Minister can sell the airport to Adani or Ambani. : Madhu Bangarappa's allegations

ಶಿವಮೊಗ್ಗದಲ್ಲಿ ವಿಮಾನ ಹಾರದಿದ್ದರೆ ಪ್ರಧಾನಿಯವರು ಏರ್​ಪೋರ್ಟ್​ನ್ನ  ಅದಾನಿಗೋ ಅಂಬಾನಿಗೋ ಮಾರೋದು ಗ್ಯಾರಂಟಿ
ಶಿವಮೊಗ್ಗದಲ್ಲಿ ವಿಮಾನ ಹಾರದಿದ್ದರೆ ಪ್ರಧಾನಿಯವರು ಏರ್​ಪೋರ್ಟ್​ನ್ನ ಅದಾನಿಗೋ ಅಂಬಾನಿಗೋ ಮಾರೋದು ಗ್ಯಾರಂಟಿ

MALENADUTODAY.COM  |SHIVAMOGGA| #KANNADANEWSWEB

shivamogga airport : ಶಿವಮೊಗ್ಗ : ವಿಮಾನ ನಿಲ್ದಾಣ ಉದ್ಗಾಟನೆಗೆ ದೇಶಧ ಪ್ರಧಾನಿಗಳು ನಮ್ಮ ಜಿಲ್ಲೆಗೆ ಬರುತ್ತಾರೆಂದರೆ ಅದು ಖುಷಿ ಪಡುವ ವಿಚಾರ. ವಿಮಾನ ನಿಲ್ದಾಣವೇನೋ ಆಯಿತು. ವಿಮಾನಗಳೇ ಬರದಿದ್ದರೆ, ಇನ್ನೆರಡು ವರ್ಷ ಹೀಗೆ ಇದ್ರೆ ಈ ವಿಮಾನ ನಿಲ್ದಾಣವನ್ನು ಅದಾನಿಗೋ ಅಂಬಾರಿಗೋ ಮಾರಿ ಹೋಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪರವರು ಭವಿಷ್ಯ ನುಡಿದಿದ್ದಾರೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ಏರ್ ಪೋರ್ಟ್​ಗೆ ವಿಮಾನ ಲ್ಯಾಂಡ್ ಮಾಡಿ ದೇಶಕ್ಕೆ ತೋರಿಸಿದ್ರು. ಆದ್ರೆ ಏರ್ ಪೋರ್ಟ್​ಗೆ ವಿಮಾನ ನಿಲ್ದಾಣ ದಾನ ಮಾಡಿದ ಸಂತ್ರಸ್ಥರಿಗೆ ಕೊಟ್ಟ ಮಾತನ್ನು ಈಡೇರಿಸಿಲ್ಲ. ಅವರಿಗೆ ಉದ್ಯೋಗ ನೀಡಿದ ಭರವಸೆ, ಸೈಟುಗಳು ಕೊನೆಗೂ ದಕ್ಕಲಿಲ್ಲ. ಈ ಸಂಭ್ರಮ ಅವರಿಗೆ ಚುನಾವಣೆ ಸಂದರ್ಭದಲ್ಲಿ ಶಾಪವಾಗಿ ಪರಿಣಮಿಸುತ್ತೆ. ಈ ಬಾರಿ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಏನೋ ಅನುಕೂಲವಾಗುತ್ತೆ ಅಂದುಕೊಂಡಿದ್ವಿ..ಆದ್ರೆ ಈ ಸರ್ಕಾರದಲ್ಲಿ ಅದು ಆಗಲಿಲ್ಲ.

ಆದ್ರೆ ನರೇಂದ್ರ ಮೋದಿಯವರು ಡ್ಯಾಂ ಕಟ್ಟಿಸಲಿಲ್ಲ. ಹಕ್ಕು ಪತ್ರವನ್ನು ನೀಡಲಿಲ್ಲ. ಅಂದು ಮೈಕ್ ನಲ್ಲಿ ಮಾತನಾಡಿದ್ದು ಕೂಡ ಶರಾವತಿ ಸಂತ್ರಸ್ಥರು ತ್ಯಾಗ ಮಾಡಿದ ಕರೆಂಟ್ ನಿಂದಲೇ..ಯಡಿಯೂರಪ್ಪರ ಹುಟ್ಟಹಬ್ಬಕ್ಕೆ ಮೊಬೈಲ್ ಟಾರ್ಚ್ ನಿಂದ ಶುಭ ಕೋರಿದ್ದು ಶರಾವತಿ ಮುಳುಗಡೆ ಸಂತ್ರಸ್ಥರ ತ್ಯಾಗದ ಕರೆಂಟ್ ನಿಂದಲೇ ಎಂಬುದನ್ನು ಬಿಜೆಪಿಯವರು ಮರೆಯಬಾರದು. ಭಾಷಣದಲ್ಲಿ ಶರಾವತಿ ಸಂತ್ರಸ್ಥರ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಕೂಡ ಆಡಲಿಲ್ಲ ಎಂದು ಟೀಕಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ 449 ಕೋಟಿ ಅಷ್ಟೆ ಅಲ್ಲಾ. ಇನ್ನು ಹೆಚ್ಚಿನ ಮೊತ್ತ ವ್ಯಯವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. 2008 ರಿಂದ 23 ರವರೆಗೆ ಬಿ.ಎಸ್.ಯಡಿಯೂರಪ್ಪ ಎಷ್ಟು ಬಾರಿ ಸಿಎಂ ಆಗಿಲ್ಲ..ಆವಾಗಲೇ ಮಾಡಬಹುದಿತ್ತು. ಆದರೆ ಪರ್ಸೆಂಟೇಜ್ ಹೆಚ್ಚಿಗೆ ಮಾಡಿಕೊಳ್ಳವ ಸಲುವಾಗಿ ಯೋಜನೆ ಮುಂದೂಡುತ್ತಾ ಬರಲಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

ಶಿವಮೊಗ್ಗ ರಾಣೆಬೆನ್ನೂರು ರೈಲ್ವೆ ಯೋಜನೆ ಘೋಷಣೆಯಾಗಿದೆ. ಭೂಸ್ವಾಧೀನ ಪಡಿಸಿಕೊಳ್ಳುವ ಮೊದಲು ರೈತರಿಗೆ ಪರಿಹಾರ ನೀಡಿ. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲು ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕು ಪತ್ರ ನೀಡಿ. ಏರ್ ಪೋರ್ಟ್ ಗಿಂತ ಮೊದಲು ವಿ.ಐ.ಎಸ್.ಎಲ್ ಉಳಿಸುವ ಕೆಲಸವಾಗಬೇಕಿತ್ತು ಆದ್ರೆ ಆಗಲಿಲ್ಲ. ವಿ.ಐ.ಎಸ್.ಎಲ್ ಗೆ ಕೊನೆ ಮೊಳೆ ಹೊಡೆಯಲು ಬಿಜೆಪಿ ಮುಖಂಡರೇ ಕಾರಣ ಎಂದ ಅವರು, ಕಾಂಗ್ರೆಸ್​  ಪ್ರಣಾಳಿಕೆ ಉಪಾಧ್ಯಕ್ಷನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಸಣ್ಣ ಕೈಗಾರಿಕೋಧ್ಯಮಿಗಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅವರ ನೆರವಿಗೆ ನಿಲ್ಲಲಿದೆ. ಉಚಿತ ವಿದ್ಯುತ್ ,ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಎರಡು ಸಾವಿರ ಮನೆ ಖರ್ಚಿಗೆ ನೀಡಲಾಗುತ್ತದೆ.ಅದರ ಜೊತೆಗೆ ಹತ್ತು ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದರು.

READ | Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #