ಮಗನ ಸಾವಿಗೆ ಸೊಸೆಯೇ ಕಾರಣ ಎಂದು ದೂರು ಕೊಟ್ಟ ತಂದೆ!

Father blames daughter-in-law for son's death

ಮಗನ ಸಾವಿಗೆ ಸೊಸೆಯೇ ಕಾರಣ ಎಂದು ದೂರು ಕೊಟ್ಟ ತಂದೆ!

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಶಿವಮೊಗ್ಗ / ಮಗನ ಸಾವಿಗೆ ಸೊಸೆ ಕಾರಣ ಎಂದು ಸೊಸೆಯ ವಿರುದ್ಧ ದೂರು ನೀಡಿದ ಪ್ರಸಂಗ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂಧ ಐಪಿಸಿ ಸೆಕ್ಷನ್​ : IPC 1860 (U/s-306)  ಅಡಿಯಲ್ಲಿ ಕೇಸ್​ ದಾಖಲಿಸಲಾಗಿದೆ. 

ಗಜಪ್ರಸವ ಹೇಗಿರುತ್ತೆ ಗೊತ್ತ! ತನ್ನ ಹೆರಿಗೆ, ಬಾಣಂತನಕ್ಕಾಗಿ ಹೆಣ್ಣಾನೆಯೊಂದು ಹಿರಿಯಾನೆಯ ಸಹವಾಸ ಮಾಡುತ್ತೆ ಅನ್ನೋದು ಗೊತ್ತಾ!? ವನ್ಯಜೀವಿ ವಿಶೇಷತೆ! By JP

ನಡೆದಿದ್ದೇನು? 

ಈ ಪೊಲೀಸ್ ಸ್ಟೇಷನ್​ ಲಿಮಿಟ್​ನ ನಿವಾಸಿಯೊಬ್ಬರು ಈ ಸಂಬಂಧ ದೂರು ನೀಡಿದ್ದು, ಅವರು ನೀಡಿರುವ ದೂರಿನಂತೆ ಎಫ್​ಐಆರ್ ದಾಖಲಾಗಿದೆ. ಸೊಸೆಯು ದೂರುದಾರರು ಹಾಗೂ ಅವರ ಮಗ ವಿರುದ್ಧ ಆಗಾಗ ಪೊಲೀಸ್​ ಕಂಪ್ಲೆಂಟ್​  ಕೊಡುತ್ತಿದ್ದಳಂತೆ. ಹಲವು ಬಾರಿ ಪಂಚಾಯಿತಿ ಈ ಸಂಬಂಧ ನಡೆದಿದೆ ಎನ್ನಲಾಗಿದ್ದು, ಅಲ್ಲದೆ ಪದೇ ಪದೇ ತಮ್ಮ ಮಗನ ಸಾವಿಗೆ ಪ್ರಚೋದನೆ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಇದೇ ಕಾರಣ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸಾವಿಗೆ ಆತನ ಹೆಂಡತಿಯೇ ಕಾರಣ ಎಂದು ದೂರಿದ್ಧಾರೆ.