ನನ್ನ ನೀನು ಗೆಲ್ಲಲಾರೆ ಅಂತಿದೆ ತೀರ್ಥಹಳ್ಳಿ ಕಾಡಾನೆ/ ದೇವಂಗಿ ಕಾಡಲ್ಲಿ ಹನಿಟ್ರ್ಯಾಪ್​ಗೂ ಬಗ್ಗದ ಸಲಗ/

Elephants and forest staff of Sakrebailu elephant camp are trying to catch the elephant in the forest near Devangi in Thirthahalli. The honeytrap plan has also failed

ನನ್ನ ನೀನು ಗೆಲ್ಲಲಾರೆ ಅಂತಿದೆ ತೀರ್ಥಹಳ್ಳಿ ಕಾಡಾನೆ/ ದೇವಂಗಿ ಕಾಡಲ್ಲಿ  ಹನಿಟ್ರ್ಯಾಪ್​ಗೂ ಬಗ್ಗದ ಸಲಗ/

ನನ್ನ ನೀನು ಗೆಲ್ಲಲಾರೆ ಎನ್ನುತ್ತಿದೆ ತೀರ್ಥಹಳ್ಳಿಯ ಕಾಡಿನ ಪರಿಸರದಲ್ಲಿ ಬೀಡು ಬಿಟ್ಟಿರುವ ಕಾಡಾನೆ. ಇದು ನಿಜಕ್ಕೂ ಅರಣ್ಯ ಇಲಾಖೆಗೆ ಹಾಗೂ ಸಕ್ರೆಬೈಲು ಮಾವುತ ಕಾವಾಡಿಗಳಿಗೆ ಸವಾಲ್ ಆಗಿರುವಂತ ಕೆಲಸ. ಕಳೆದ ಆರು ದಿನಗಳಿಂದ ದೇವಂಗಿ ಸಮೀಪದ ಕಾಡಿನಲ್ಲಿ ಬಿಡು ಬಿಟ್ಟಿರುವ 8 ವರ್ಷದ ಆನೆಯು, ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಟಕ್ಕರ್ ಕೊಟ್ಟಿದೆ

ನೆಂಟರ ಮನೆಯನ್ನಾಗಿಸಿಕೊಂಡ ಕಾಡಾನೆ

ಯಾವುದೇ ಕಾಡಾನೆಗಳನ್ನು ಕೇವಲ ಎರಡರಿಂದ ಮೂರು ದಿನಗಳಲ್ಲಿ ಹಿಡಿದು ಬಿಡಾರಕ್ಕೆ ತರುತ್ತಿದ್ದ ಸಕ್ರೆಬೈಲು  ಮಾವುತ ಕಾವಾಡಿಗಳು ಈ ಬಾರಿ ಹರಸಾಹಸ ಪಟ್ಟರು ಕಾಡಾನೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಕಾರಣ  ಕಳೆದ ಮೂರು ತಿಂಗಳಿನಿಂದ ಕಾಡಾನೆಯು  ಆ ದೇವಂಗಿ ಕಾಡಿನ ಪರಿಸರವನ್ನು ಆವಾಸ ಸ್ಥಳವಾಗಿ ಪರಿವರ್ತಿಸಿಕೊಂಡಿರುವುದು. 

ಆಗುಂಬೆ ಆನೆ ಹಿಡಿಯಲು ಸಿಗದ ಪರ್ಮಿಶನ್ ತೀರ್ಥಹಳ್ಳಿ ಆನೆ ಸೆರೆಗೆ ಸಿಕ್ಕಿದ್ದೇಗೆ! 4 ದಿನದ ಆಪರೇಷನ್ ನಲ್ಲಿ ಉದ್ಭವವಾಗಿದೆ 5 ಪ್ರಶ್ನೆಗಳು! JP Story

ಮನುಷ್ಯರನ್ನ ಕಂಡರೆ ಸಾಕು,,, ಓಡು..ಓಡು..ಓಡಲೇ

ಜನರನ್ನು ಕಂಡೊಡನೆ ಕಾಡಾನೆಯು ಬೆದರಿ ಓಡುವಂತಹ ಪವೃತ್ತಿಯನ್ನು ಬೆಳೆಸಿಕೊಂಡಿದೆ. ಇನ್ನೊಂದೆಡೆ ಜನರು ಕೂಡ ಪಟಾಕಿಯನ್ನು ಸಿಡಿಸಿ ಆನೆಯನ್ನು ಓಡಿಸುವ ಕೆಲಸವನ್ನು ಮಾಡುತ್ತಿದ್ದ ಹಿನ್ನೆಲೆ, ಆನೆಯು ಮಾನವನ ಹೆಜ್ಜೆ ಗುರುತು ಕಂಡರು ಸಾಕು, ಇದ್ದ ಜಾಗದಿಂದ ಮಾಯವಾಗುತ್ತಿದೆ. 

ಭಾನುಮತಿ ಮೋಹಕ್ಕೆ ಬಿದ್ದ ಸಲಗ, ಅರಣ್ಯ ಸಿಬ್ಬಂದಿಗೆ  ಕೊಟ್ಟಿತು ಕೈ

ಬಿಡಾರದ ಹೆಣ್ಣು ಸಾಕಾನೆ ಭಾನುಮತಿಯನ್ನು ಬಿಟ್ಟು  ಕಾಡಾನೆಯನ್ನು ಆಕರ್ಷಿಸಲು ಮಾವುತರು ಮತ್ತು ಕಾವಾಡಿಗಳು ನಡೆಸಿದ ಪ್ರಯತ್ನವೂ ಸಹ ವಿಫಲವಾಗಿದೆ. ನಿನ್ನೆಯು  ಕೂಡ ಆನೆಯನ್ನು ಕ್ಯಾಪ್ಚರ್ ಮಾಡಲು ಹೋದಂತ ಸಂದರ್ಭದಲ್ಲಿ ಅರಣ್ಯ  ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡಾನೆ ಎಸ್ಕೇಪ್​ ಆಗಿದೆ.  ಹನಿ ಟ್ರ್ಯಾಪ್​ಗಾಗಿ ಭಾನುಮತಿಯನ್ನು ಕಾಡಿನ ನಿಗದಿತ ಸ್ಥಳದಲ್ಲಿ ಕಟ್ಟಿ ಹಾಕಲಾಗಿತ್ತು ಭಾನುಮತಿಯೊಂದಿಗೆ ಸುಮಾರು ಒಂದು ಗಂಟೆ ಕಾಲ ಇದ್ದಂತಹ ಕಾಡಾನೆಯನ್ನು ಡಾರ್ಡ್​ ಮಾಡಲು ವನ್ಯಜೀವಿ ವೈದ್ಯರು ಮುಂದಾದರು. ಅಂದುಕೊಂಡಂತೆ ಡಾರ್ಟ್ ಸಹ ಮಾಡಿದ್ರು, ಆದರೆ ಅದನ್ನ ಲೆಕ್ಕಿಸದೇ ಕಾಡಾನೆ ಅಲ್ಲಿಂದ ಪರಾರಿಯಾಗಿದೆ.  

ಕಾರ್ಯಾಚರಣೆಗೆ ಇನ್ನೂ ಹಿಡಿಯುತ್ತೆ ಸಮಯ

ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಸುಮಾರು 15ರಿಂದ 18 ಕಿಲೋಮೀಟರ್ ಪ್ರಯಾಣಿಸುತ್ತ ಚಲಿಸುತ್ತಾ ಆನೆಯ ಹಾದಿಯ ಬೆನ್ನುಬಿದ್ದಿರುವ ಅರಣ್ಯ ಸಿಬ್ಬಂದಿಗೆ ಕಾಡಿನ ಪ್ರತಿಕೂಲ ಪರಿಸರವೂ ಸಹ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.  ಹೀಗಾಗಿ ಕಾಡಾನೆ ಹಿಡಿಯುವುದು ಸಿಬ್ಬಂದಿಗಳಿಗೆ ಸವಾಲಿನ ಕೆಲಸವಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS/ 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport​,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news today