ಶಿವಮೊಗ್ಗ ನಾಗರಿಕರ ಗಮನಕ್ಕೆ | ನಗರದಲ್ಲಿ ಎರಡು ದಿನ ತುಂಗಾ ವಾಟರ್‌ ಬರೋದಿಲ್ಲ

Karnataka Urban Water Supply and Drainage Board has announced that there will be a disruption in the drinking water supply in Shivamogga city on June 30 and July 1, 2024. 

ಶಿವಮೊಗ್ಗ ನಾಗರಿಕರ ಗಮನಕ್ಕೆ | ನಗರದಲ್ಲಿ ಎರಡು ದಿನ ತುಂಗಾ ವಾಟರ್‌ ಬರೋದಿಲ್ಲ
water supply in Shivamogga city ,Karnataka Urban Water Supply and Drainage Board

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗದಲ್ಲಿ ಎರಡು ದಿನ ನೀರು ಬರಲ್ಲ ಅಂತಾ  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ /ಪ್ರಕಟಣೆ/ ನೀಡಿದೆ. ಪ್ರಕಟಣೆಯ ವಿವರ ಹೀಗಿದೆ. 

ಎರಡು ದಿನ ನೀರು ಬರಲ್ಲ

ಮೆಸ್ಕಾಂ ಇಲಾಖೆಯಿಂದ ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ಸರಬರಾಜಾಗುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ದುರಸ್ಥಿ ಮತ್ತು ನಿರ್ವಹಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನಾಂಕ:30-6-2024 ರಂದು ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ದಿನಾಂಕ:30-6-2024 ಮತ್ತು ದಿನಾಂಕ:1-7-2024 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ಕಾರಣಕ್ಕೆ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.

Karnataka Urban Water Supply and Drainage Board has announced that there will be a disruption in the drinking water supply in Shivamogga city on June 30 and July 1, 2024.