ಸರ್ಕಾರ ಉಳಿಯುತ್ತಾ? ಉರುಳುತ್ತಾ?|ಬೇಳೂರು ಗೋಪಾಲಕೃಷ್ಣ ಮತ್ತು ಆರಗ ಜ್ಞಾನೇಂದ್ರರವರ ನಡುವೆ ಭವಿಷ್ಯದ ಚರ್ಚೆ !

debate between Belur Gopalakrishna and Araga jnanendra ಸರ್ಕಾರ ಉಳಿಯುತ್ತಾ? ಉರುಳುತ್ತಾ?|ಬೇಳೂರು ಗೋಪಾಲಕೃಷ್ಣ ಮತ್ತು ಆರಗ ಜ್ಞಾನೇಂದ್ರರವರ ನಡುವೆ ಭವಿಷ್ಯದ ಚರ್ಚೆ !

ಸರ್ಕಾರ ಉಳಿಯುತ್ತಾ? ಉರುಳುತ್ತಾ?|ಬೇಳೂರು ಗೋಪಾಲಕೃಷ್ಣ ಮತ್ತು ಆರಗ ಜ್ಞಾನೇಂದ್ರರವರ ನಡುವೆ ಭವಿಷ್ಯದ ಚರ್ಚೆ !

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS

 SHIVAMOGGA |  ಸದ್ಯ ಶಿವಮೊಗ್ಗ ರಾಜಕಾರಣದಲ್ಲಿ ಭಿನ್ನರಾಗವನ್ನು ಬೇಳೂರು ಗೋಪಾಲಕೃಷ್ಣರವರು ಹಾಡಿದ್ದಾರೆ. ಹಾಗಾಗಿ ಅವರ ಮಾತುಗಳ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಮಾಜಿ ಸಚಿವ ಆರಗ ಜ್ಞಾನೇಂದ್ರರವರ ಜೊತೆಗೆ ಅವರು ಆಡಿದ ಮಾತಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. 

ಹೊಸನಗರ ತಾಲ್ಲೂಕಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣರವರು ಪಾಲ್ಗೊಂಡಿದ್ದರು. ಹೊಸನಗರ ತಾಲ್ಲೂಕನ್ನ ಅರ್ಧ ತೀರ್ಥಹಳ್ಳಿಗೆ ಇನ್ನರ್ಧ ಸಾಗರ ಕ್ಷೇತ್ರಕ್ಕೆ ಹಂಚಿರೋ ಕಾರಣಕ್ಕೆ ಇಲ್ಲಿನ ಸಭೆಯಲ್ಲಿ ಇಬ್ಬಿಬ್ಬರು ಶಾಸಕರು ಪಾಲ್ಗೊಳ್ಳುತ್ತಾರೆ. ಅದೇರೀತಿಯಲ್ಲಿ ಪಾಲ್ಗೊಂಡಿದ್ದ ಆರಗ ಜ್ಞಾನೇಂದ್ರ ಹಾಗೂ ಬೇಳೂರು ಗೋಪಾಲಕೃಷ್ಣರ ನಡುವೆ ಭವಿಷ್ಯದ ಚರ್ಚೆಯಾಗಿದೆ. ಈ ಚರ್ಚೆ ಕೇಳಿದ ಅಧಿಕಾರಿಗಳು ತಮ್ಮ ತಮ್ಮೊಳಗೆ ನಕ್ಕು ಸುಮ್ಮನಾದ ಘಟನೆ ನಡೆದಿದೆ. 

ಏನದು ಭವಿಷ್ಯದ ಚರ್ಚೆ 

ಸಭೆಯಲ್ಲಿ ಯಾವುದೋ ಒಂದು ಮಾತಿನ ನಡುವೆ ಭವಿಷ್ಯದ ಚರ್ಚೆ ಆರಂಭಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಈ ಭಾರಿ ಮಳೆ ಬರುತ್ತೆ ಅಂತಾ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎಂದರು. 

ಇದಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ   ಅವರ ಮಾತು ನಿಜವಾಗಲಿ ಎಂದರು. 

ತಕ್ಷಣವೇ ಅವರು ಹೇಳಿದ್ದೆಲ್ಲಾ ಸತ್ಯವಾಗಿದೆ, ಕಳೆದ ಬಾರಿ ಸರ್ಕಾರ ಬದಲಾವಣೆ ಆಗುತ್ತೆ ಎಂದು ಭವಿಷ್ಯ  ನುಡಿದಿದ್ದರು. ಅದರಂತೆ ಸರ್ಕಾರ ಬದಲಾಗಿದೆ ಎಂದು GKB ಹೇಳಿದರು

ಮರುಕ್ಷಣವೇ ಆರಗ ಜ್ಞಾನೇಂದ್ರ ಈ ಬಾರಿನೂ ಹೇಳಿದ್ದಾರೆ, ಮಧ್ಯದಲ್ಲೇ ಹೋಗುತ್ತೆ ಎಂದು ಶ್ರೀಗಳು ಹೇಳಿದ್ದಾರೆ ಎಂದು ಉತ್ತರಿಸಿದ್ರು.  

ಇದಕ್ಕೂ ಉತ್ತರಿಸಿದ ಬೇಳೂರು ಗೋಪಾಲಕೃಷ್ಣ ಯಾವ ಸರ್ಕಾರ ಅಂತಾ ಹೇಳಿಲ್ಲ. ಅದು ಪ್ರಶ್ನೆಯಾಗಿ ಉಳಿದಿದೆ ಎಂದದರು. 

ಹೀಗೆ ತಾವೇ ಆರಂಭಿಸಿದ ಸಂಭಾಷಣೆಯನ್ನು ಬೇಳೂರು ಗೋಪಾಲಕೃಷ್ಣರೇ ಅಂತ್ಯಗೊಳಿಸಿ, ಇರಲಿ ಮುಂದಕ್ಕೆ ಹೋಗೋಣ ಅಂತಾ ಸಭೆಯ ವಿವರಗಳನ್ನ ಗಮನಿಸಿದರು.