Be Positive : ಸಾಗರದ ಹುಡುಗನ ಶಾರ್ಟ್​ ಮೂವಿಗೆ ಸಿಕ್ಕಿತು ಅಂತಾರಾಷ್ಟ್ರೀಯ ಪ್ರಶಸ್ತಿ

Be Positive : sagara taluk boy's short movie won international award Be+ve (Be Positive) | Kannada Short Film 2K | Veera | Rakesh | Dharan

MALENADUTODAY.COM | SHIVAMOGGA NEWS

Be Positive : ಟೆಕ್ನಾಲಿಜಿ ಪೀಕ್​ನಲ್ಲಿರುವ ಈ ಕಾಲದಲ್ಲಿ ಲೋಕಲ್​ ಟ್ಯಾಲೆಂಟ್​ಗಳ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದರ ಸಾಲಿಗೆ  ಕೊರೊನಾ ಕಾಲಘಟ್ಟದಲ್ಲಿ ನಡೆದಂತಹ ನೈಜ ಘಟನಾವಳಿಗಳ ಆಧರಿಸಿದ ಚಿತ್ರ ಕನ್ನಡದ 'ಬಿ- ಪಾಸಿಟಿವ್' ಶಾರ್ಟ್ ಮೂವಿ ಥೈಲ್ಯಾಂಡ್ ನ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿಯೊಂದನ್ನ ಭಾಚಿಕೊಂಡಿದೆ.

SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

ಥಾಯ್ಲೆಂಡ್ ನ ಪಾಲ್ ನರುಲಾ ಅಕಾಡೆಮಿ ಹಾಗೂ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಜಂಟಿಯಾಗಿ ಬ್ಯಾಂಕಾಕ್ ನಲ್ಲಿ ಅಂತಾರಾಷ್ಟ್ರೀಯ ಚಲನಚಿತೋತ್ಸವವನ್ನು ಆಯೋಜಿಸಿತ್ತು. ಈ ಚಿತ್ರೋತ್ಸವದಲ್ಲಿ ಸಾಗರ ಮೂಲದ 'ಧರಣ್'  ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ಧಾರೆ.  ಥಾಯ್ಲೆಂಡ್ ನ ಮಾಜಿ ಉಪಪ್ರಧಾನಿ ಕೊರ್ನ್ ದಬ್ಬರಾನ್ಸಿ ಈ ಪ್ರಶಸ್ತಿಯನ್ನ ಪ್ರಧಾನ ಮಾಡಿದ್ದಾರೆ. 

ಧರುಣ್​, ಚಿತ್ರದಲ್ಲಿ  ಮಾರ್ಷಲ್‌ ಪಾತ್ರಕ್ಕೆ ಜೀವ ತುಂಬಿದ್ದು, ಕೊರೊನಾ ಕಾಲದಲ್ಲಿ ಸಂಭವಿಸಿದ ಘಟನೆಗಳನ್ನು ಮೂವಿ ಮರಳಿ ನೆನಪುಮಾಡ್ತಿದೆ.  ಮಪ್ತಿ' ಚಿತ್ರ ಖ್ಯಾತಿಯ ಸಹ ನಿರ್ದೇಶಕ ವೀರ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇನ್ನೂ ಶಿವಮೊಗ್ಗ ಸಾಗರದ ಎಸ್. ರಾಕೇಶ್ ಚಿತ್ರ ನಿರ್ಮಾಪಕರಾಗಿದ್ದು,  ಭರಾಟೆ ಚಿತ್ರ ಖ್ಯಾತಿಯ ವಿಜಯತ್ ಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  ಅಂದಹಾಗೆ  ಈ ಶಾರ್ಟ್​ ಸಿನಿಮಾ ಆನಂದ್ ಆಡಿಯೋ (@AnandAudioEvergreen) ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್ ಆಗಿದೆ. 

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com