ತಂದೆ ಮತ್ತು ಅಣ್ಣನ ಸಾಧನೆ ಕೊಂಡಾಡಿದ ವಿಜಯೇಂದ್ರ ರಾಹುಲ್ ಗಾಂಧಿ ಬಗ್ಗೆ ‘ಉಗ್ರ’ ಮಾತನ್ನ ಆಡಿದ್ದೇಕೆ? ಚುನಾವಣೆಗೆ ಇನ್ನೆರಡು ತಿಂಗಳಿದೆ ಎಂದಿದ್ದೇಕೆ

Byjayendra praises father and elder brother's achievements

MALENADUTODAY.COM  |SHIVAMOGGA| #KANNADANEWSWEB

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕ್ಷೇತ್ರ ಬಿಜೆಪಿಯ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗ್ತಿದೆ ಯುವ ಮೋರ್ಚಾದ ಕಾರ್ಯ ಇನ್ನಷ್ಟೆ ಪ್ರಮುಖವಾಗಿ ಆರಂಭವಾಗಿದೆ. ಬಿಜೆಪಿ ಭದ್ರ ಕೋಟೆಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿಯು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಬೇಕಿದೆ. ಒಬ್ಬ ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಆಲೊಚನೆ ಮಾಡಿದ್ರೆ ಒಬ್ಬ ರಾಜಕೀಯ ಮುತ್ಸದ್ದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡುತ್ತಿರುತ್ತಾರೆ. ಅಂತಹ ಮುತ್ಸದ್ದಿ ನರೇಂದ್ರ ಮೋದಿ ಎಂದು ಬಿವೈ ವಿಜಯೇಂದ್ರ ಹೇಳಿದ್ಧಾರೆ. ನಮ್ಮ ದೇಶದ ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗಬಹುದು ಎಂದು ತೋರಿಸಿಕೊಟ್ಟವರು ನರೇಂದ್ರ ಮೋದಿಯವರು.

ಆರ್ಟಿಕಲ್​ 370 ಕಾಂಗ್ರೆಸ್ ಪಕ್ಷದ ಪಾಪದ ಕೂಸು ಎಂದ ವಿಜಯೇಂದ್ರರವರು ಸ್ವಾತಂತ್ರ್ಯದ ನಂತರ ಹಿಂದೂ ಕುಟುಂಬಗಳನ್ನು ಬೀದಿಗೆ ತಂದಿತ್ತು. ಇಷ್ಟರವರೆಗೂ ಆರ್ಟಿಕಲ್​ 370 ನ್ನ ಕಿತ್ತೊಗೆಯಲು ಸಾಧ್ಯವಾಗಿರಲಿಲ್ಲ. ಆದರೆ ಅದನ್ನ ಕಿತ್ತುಹಾಕಿ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆಯನ್ನು ಮಟ್ಟಹಾಕಿದವರು ನರೇಂದ್ರ ಮೋದಿಯವರು. ಮಾನ್ಯ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯಲ್ಲಿ ಲಾಲ್​ ಚೌಕ್​ನಲ್ಲಿ ಭಾರತದ ಧ್ವಜ ಹಾರಿಸುತ್ತಿದ್ದಾರೆ. ಅದನ್ನ ಸಾಧ್ಯವಾಗಿಸಿದ್ದು ನರೇಂದ್ರ ಮೋದಿಯವರು. ಈ ಕಾರಣಕ್ಕೆ ಕಾಂಗ್ರೆಸ್​ನವರು ಸಹ ಬಿಜೆಪಿ ಸರ್ಕಾರವನ್ನು ಸ್ಮರಿಸಬೇಕು. ಹಿಂದೆ ನಕ್ಸಲಿಸಂ ಹತ್ಯೆಯ ಬಗ್ಗೆ ಸುದ್ದಿ ಬರುತ್ತಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ನಕ್ಸಲಿಸಂನ ದುಷ್ಕೃತ್ಯಗಳು ಕಡಿಮೆಯಾಗಿವೆ. ಬಿಜೆಪಿ ಸರ್ಕಾರದಲ್ಲಿ ದಿನಕ್ಕೆ 30 ಕಿಲೋಮೀಟರ್ ವರೆಗೂ ರಸ್ತೆಗಳು ನಿರ್ಮಾಣವಾಗುತ್ತಿದೆ. ಭಾರತೀಯ ಜನತಾ ಪಕ್ಷದ ಗುರಿ ಮುಂದಿನ ಎರಡು ವರ್ಷಗಳಲ್ಲಿ ಮೂರು ಲಕ್ಷ ಕಿಲೋಮೀಟರ್​ ರಸ್ತೆ ಸಿದ್ಧವಾಗಬೇಕು ಎಂಬುದಾಗಿದೆ. ಇನ್ನೂ ಏರ್ ಪೋರ್ಟ್​ ಉದ್ಘಾಟನೆ ದಿನ ನಾವು 2 ಲಕ್ಷ ಜನರ ನಿರೀಕ್ಷೆಯಿಟ್ಟಿದ್ದೀವಿ. ಆದರೆ ನಾಲ್ಕೈದು ಲಕ್ಷ ಜನರು ಸೇರಿದ್ದು ನರೇಂದ್ರ ಮೋದಿಯವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು. ಸಂಸದ ರಾಘವೇಂದ್ರರವರು ರೈಲ್ವೆಯೋಜನೆ ಹಾಗೂ ಸಿಗಂಧೂರು ಬ್ರಿಡ್ಜ್​​ ಸೇರಿದಂತೆ ಹಲವಾರು ಯೋಜನೆಗಳನ್ನು ಜಿಲ್ಲೆಗೆ ತರುತ್ತಿದ್ಧಾರೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾಗಿದೆ ಎಂದರೆ, ಬಿಎಸ್​ ಯಡಿಯೂರಪ್ಪ, ಸಂಸದರ ಬಿವೈ ರಾಘವೇಂದ್ರ, ಕೆ.ಎಸ್​.ಈಶ್ವರಪ್ಪನವರು ಕಾರಣ ಎಂದು ವಿಜಯೇಂದ್ರ. ರಾಜ್ಯದಲ್ಲಿಯೇ ಅಭಿವೃದ್ದಿಯಾಗಿರುವ ಜಿಲ್ಲೆ ಶಿವಮೊಗ್ಗ ಜಿಲ್ಲೆ ಎಂದರು. 

READ |  ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಆಯನೂರು ಮಂಜುನಾಥ್​ರೇ ರೆಬೆಲ್​?! ಟಿಕೆಟ್​ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ!?

ನರೇಂದ್ರ ಮೋದಿ ಹಾಗು ಬಸವರಾಜ ಬೊಮ್ಮಾಯಿ ಸರ್ಕಾರದ ನೇತೃತ್ವದಲ್ಲಿ ನಡೆದ ಗ್ಲೋಬಲ್ ಮೀಟ್ 8-10 ಲಕ್ಷ ಕೋಟಿ ರೂಪಾಯಿ ಹೂಡಿಕೆ ನಿಕ್ಕಿಯಾಗಿದೆ. ಇದರಿಂದ ಎಷ್ಟು ಲಕ್ಷ ಯುವಕರಿಗೆ ಉದ್ಯೋಗ ಸಿಗಬಹುದು ನೀವೆ ಯೋಚಿಸಿ ಎಂದ ವಿಜಯೇಂದ್ರ ಕಾಂಗ್ರೆಸ್ ಪಕ್ಷ ಆರುವ ದೀಪವಾಗಿದೆ. ಅದನ್ನು ಮುಗಿಸುವ ಕೆಲಸವನ್ನು ದೇಶದ ಜನತೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಅಮೇಥಿಯಲ್ಲಿ ಆಯ್ಕೆಯಾಗುತ್ತಿದ್ದವರು. ದೇಶದ ಪ್ರಧಾನಿಯಾಗುವ ಹಗಲು ಕನಸ್ಸು ಕಾಣುತ್ತಿದ್ದ ರಾಹುಲ್ ಗಾಂಧಿಯವರು ಅಮೇಥಿ ಬಿಟ್ಟು ವೈನಾಡಿನಿಂದ ಆಯ್ಕೆಯಾಗಿ ಬರುತ್ತಿದ್ದಾರೆ. ಅಲ್ಲಿ ಶೇಕಡಾ 50 ಮುಸ್ಲಿಮ್ ಮತದಾರರು ಶೇಕಡಾ 15 ರಷ್ಟು ಕ್ರಿಶ್ಚಿಯನ್​ ಮತದಾರರು ಇದ್ದಾರೆ. ಅಲ್ಲಿ ಬಹುಸಂಖ್ಯಾತರಾಗಿರುವ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆದ್ದು ಬಂದಿದ್ದಾರೆ. ಅಂದರೆ, ಯಾವ ರೀತಿಯಲ್ಲಿ ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತುಕೊಳ್ಳುತ್ತಾರೋ ಅದೇ ರೀತಿಯಲ್ಲಿ ರಾಹುಲ್ ಗಾಂದಿ ವೈನಾಡಿನಲ್ಲಿ ಓಡೋಗಿ ಕುಳಿತುಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ದೂರಿದರು. 

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ, ದೇಶದ ಅಲ್ಪಸಂಖ್ಯಾತ ಮಹಿಳೆಯರಿಗೆ ಸ್ವಾಭಿಮಾನದ ಹಕ್ಕನ್ನು ಕೊಡಬೇಕು ಎಂದುಕೊಂಡು ತ್ರಿಬ್ಬಲ್ ತಲಾಖನ್ನ ಮೋದಿ ಸರ್ಕಾರ ಹೊಡೆದಾಕಿದರು. ಇನ್ನೂ ಭ್ರಷ್ಟಚಾರದ ವಿಚಾರದ ಬಗ್ಗೆ ಕಾಂಗ್ರೆಸ್​ನವರು ಮಾತನಾಡ್ತಾರೆ. ಅವರು ಇಡೀ ದೇಶವನ್ನು ಕೊಳ್ಳೆಹೊಡೆದವರು. ಇವತ್ತು ಕಾಂಗ್ರೆಸ್​ ಮುಖಂಡರ ಅಕ್ಕಪಕ್ಕ ನಿಂತವರನ್ನ ನೀವು ನೋಡಿದರು ಸಾಕು. ಹತ್ತು ತಲೆಮಾರಿಗೆ ಆಗುವಷ್ಟು ಕೊಳ್ಳೆಹೊಡೆದವರು ಕಾಣ ಸಿಗುತ್ತಾರೆ. ಅಂತಹವರಿಂದ ಭ್ರಷ್ಟಾಚಾರದ ಪಾಠ ಕೇಳುವ ಅಗತ್ಯವಿಲ್ಲ ಎಂದು ವಿಜಯೇಂದ್ರ ಆರೋಪಿಸಿದ್ರು.ಫ್ರೀ ವಿದ್ಯುತ್ ಅಕ್ಕಿಯನ್ನು ನೀಡುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಇಷ್ಟು ವರ್ಷ ಆಡಳಿತ ನಡೆಸ್ತಿದ್ದವರು ಇನ್ನೂ ಪುಕ್ಸಟ್ಟೆ ಅಕ್ಕಿ ಕೊಡ್ತೀವಿ ಎನ್ನುವವರರು ದೇಶದಲ್ಲಿ ಬಡತನ ನಿರ್ಮೂಲನೆ ಏಕೆ ಮಾಡಲಿಲ್ಲ. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ, ಅಲ್ಪಸಂಖ್ಯಾತರನ್ನ ಓಲೈಕೆ ಮಾಡಿಕೊಂಡು ಬಂದಿದ್ದೀರಿ. ಅದಕ್ಕಾಗಿ ಇವತ್ತು ಕಾಂಗ್ರೆಸ್​ಗೆ ಈ ಪರಿಸ್ಥಿತಿ ಬಂದಿದೆ. ಬಿಎಸ್​ವೈ ನಾನು ಮನೆಯಲ್ಲಿ ಮಲಗುವ ಪ್ರಶ್ನೆಯಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರುತ್ತೇವೆ ಎಂದಿದ್ದಾರೆ. 130- 140 ಸ್ಥಾನವನ್ನು ಗೆಲ್ಲುವುದಕ್ಕಾಗಿ ಹೋರಾಡಬೇಕಿದೆ. ಆ ಹೋರಾಟ ಶಿವಮೊಗ್ಗದಿಂದಲೇ ಆರಂಭವಾಗಬೇಕು, ಗೆಲುವಿನ ಪಣತೊಟ್ಟು ನರೇಂದ್ರ ಮೋದಿಯವರ ಕೈ ಬಲ ಪಡಿಸಬೇಕು ಎಂದು ಕೋರಿದರು. 

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : by vijayendra,by vijayendra news,by vijayendra speech,by vijayendra latest news,by vijayendra interview,vijayendra,news hour with by vijayendra,by vijayendra wife,by vijayendra family,by vijayendra today news,by vijayendra mla,by vijayendra craze,by vijayendra photos,news hour by vijayendra,byvijayendra,vijayendra news   #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga  #Malenadu #ShivamoggaLatestNews #Malnadutoday #malenaduTimes #ಶಿವಮೊಗ್ಗ #Congress #ShivamoggaNews #Shivamogga #KannadaNewsLive #KannadaNewsChannel #KannadaNews#Hosanagara #Malenadu #Ripponpete #ShivamoggaLatestNews #  #ಶಿವಮೊಗ್ಗlive  #ShivamoggaNewstoday #Shivamoggatoday #KannadaNewsLive #KannadaNewsChannel #KannadaNews#Lokayuktha #BJP #HomeMinister #Thirthahalli #Malenadu #HarathaluHalappa #MalnadTimes #ಶಿವಮೊಗ್ಗ #AragaJnanendra #KannadaNewsLive #KannadaNewsChannel #KannadaNews