#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿಕೊಳ್ಳುವ ಸಿಎಂ ಬಸವರಾಜ್​ ಬೊಮ್ಮಾಯಿ ಮಹತ್ವದ ಹೇಳಿಕೆ

#SAVEVISL: Chief Minister Basavaraj Bommai has said that a crucial meeting will be held in Bengaluru to decide on the retention of Bhadravathi VISL factory.

#SAVEVISL :  ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿಕೊಳ್ಳುವ ಸಿಎಂ ಬಸವರಾಜ್​ ಬೊಮ್ಮಾಯಿ ಮಹತ್ವದ ಹೇಳಿಕೆ
#SAVEVISL : ಭದ್ರಾವತಿ ವಿಐಎಸ್​ಎಲ್​ ಕಾರ್ಖಾನೆ ಉಳಿಸಿಕೊಳ್ಳುವ ಸಿಎಂ ಬಸವರಾಜ್​ ಬೊಮ್ಮಾಯಿ ಮಹತ್ವದ ಹೇಳಿಕೆ

ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ  ಬಸವರಾಜ ಬೊಮ್ಮಾಯಿ (Basavaraja Bommai)  ಇವತ್ತು ಹೆಲಿಪ್ಯಾಡ್​ನಲ್ಲಿ ಸುದ್ದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಈ ವೇಳೆ ವಿಐಎಸ್​ಎಲ್ ಕಾರ್ಖಾನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,  ವಿಐಎಸ್ಎಲ್ ಕಾರ್ಖಾನೆ (VISL) ಪುನಶ್ಚೇತನ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ ಎಂದರು. 

ಹರ್ಷನ ಹತ್ಯೆಗೆ ಒಂದು ವರ್ಷ! ವಾರ್ಷಿಕ ಪುಣ್ಯಸ್ಮರಣೆಗೆ ಆಹ್ವಾನ!

ಅಲ್ಲದೆ ಈ ಸಂಬಂಧ  ಕೇಂದ್ರ ಸರ್ಕಾರಕ್ಕೆ ಕಾರ್ಖಾನೆಯನ್ನು ಉಳಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ವಿಐಎಸ್ಎಲ್ ಕಾರ್ಮಿಕರ ಮುಷ್ಕರ ತಮ್ಮ ಗಮನದಲ್ಲಿದೆ. ಇವತ್ತು ಕಾರ್ಮಿಕರ ನಿಯೋಗದೊಂದಿಗೆ ಭೇಟಿಯಾಗುತ್ತೇನೆ ಎಂದ ಅವರು,  ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಇನ್ನಿತರರ ಜೊತೆಯಲ್ಲಿ ಸಭೆ ನಡೆಸಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಾಗುತ್ತದೆ.

#SAVEVISL ಗೆ ಡಿಕೆಶಿ ಬಲ! ಕಾರ್ಖಾನೆಯನ್ನು ಉಳಿಸ್ತೀವಿ ಎಂದ ಕೆಪಿಸಿಸಿ ಅಧ್ಯಕ್ಷರು ಭದ್ರಾವತಿಯಲ್ಲಿ ಎಲೆಕ್ಷನ್​ಗೆ ನಿಲ್ಲೋಣ ಅಂತಿದ್ದೀನಿ ಎಂದಿದ್ದೇಕೆ!?

ಆನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಡುತ್ತೇವೆ. ಅಲ್ಲದೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದರು. ಇನ್ನೂ ಇದೇ ವೇಳೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ರಾಜಕಾರಣ ಸರಿಯಲ್ಲ, ಫ್ಯಾಕ್ಟರಿ ಮತ್ತೆ ಆರಂಭವಾಗಬೇಕು , ಮತ್ತೆ ಲಾಭದಲ್ಲಿ ನಡೆಯಬೇಕು ಎಂಬುದು ನನ್ನ ಉದ್ಧೇಶ ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com