2 ದಿನದಲ್ಲಿ ವೈರಲ್​ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್​ಐಆರ್​ ದಾಖಲಿಸುವಂತೆ ಶಿವಮೊಗ್ಗ ಎಸ್​ಪಿಗೆ ಕಂಪ್ಲೆಂಟ್​ / ಏನಿದು? ಇಲ್ಲಿದೆ ಓದಿ

ಶಿವಮೊಗ್ಗದ ಎನ್​ಇಎಸ್​ ಮೈದಾನದಲ್ಲಿ ಕಳೆದ 25 ನೇ ತಾರೀಖು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ತ್ರೈ ವಾರ್ಷಿಕ ಸಮ್ಮೆಳನ ನಡೆದಿತ್ತು. ಈ ವೇಳೆ ಸಂಸದೆ ಹಾಗೂ ಸಾದ್ವಿ ಪ್ರಗ್ಯಾ ಸಿಂಗ್​ ಠಾಕೂರ್ ಪಾಲ್ಗೊಂಡಿದ್ದರು

ಹಿಂದೂ ಜಾಗರಣ ವೇದಿಕೆಯ ಯಶಸ್ವಿ ಸಮ್ಮೇಳನ ಸಮಾಪ್ತಿಗೊಂಡು ಎರಡೇ ದಿನಗಳಲ್ಲಿ ದೇಶದಲ್ಲೆಡೆ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್​ (sadvi pragya singh takur)  ಆಡಿರುವ ಮಾತುಗಳು  ವೈರಲ್ ಆಗಿವೆ. ಅಷ್ಟೆಅಲ್ಲದೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಹಾರ ಆಗಿವೆ. 

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಶಿವಮೊಗ್ಗದಲ್ಲಿ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸುಮಾರು 45 ನಿಮಿಷ ಮಾತನಾಡಿದ್ದ ಸಾದ್ವಿ ಸೊಪ್ಪು ಹೆಚ್ಚುವ ಚಾಕುವಿನ ಬಗ್ಗೆ ಹೇಳಿದ್ದರು. ಲವ್​ ಜಿಹಾದ್​ನ ಬಗ್ಗೆ ಮಾತನಾಡ್ತಾ ಮನೆಯಲ್ಲಿರುವ ಸೊಪ್ಪು ಹೆಚ್ಚುವ ಚಾಕುವನ್ನ ಹೆಚ್ಚು ಶಾರ್ಪ್​ ಆಗಿಟ್ಟಿರಿ ಎಂದಿದ್ದರು. ಇದು ಉತ್ತರ ಭಾರತದಲ್ಲಿ ಸಾಕಷ್ಟು ಸಂಚಲನ ಮೂಡಿಸ್ತಿದೆ. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಇದೇ ವಿಚಾರವಾಗಿ ಸಾದ್ವಿ ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ. ಅವರು ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ ಅಂತಾ ವ್ಯಕ್ತಿಯೊಬ್ಬರು ಕಂಪ್ಲೆಂಟ್ ಮಾಡಿ ಎಫ್​ಐಆರ್ ದಾಖಲಿಸುವಂತೆ ಕೋರಿದ್ದಾರೆ. ತೆಹಸೀನ್​ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ (shivamogga sp)​ರವರಿಗೆ ಅಡ್ರೆಸ್​ ಮಾಡಿ ಕಂಪ್ಲೆಂಟ್​ ಮಾಡಿದ್ಧಾರೆ.  u/s 153-A, 153-B, 268, 295-A, 298, 504, 508 inter alia of the Indian Penal Code, 1860] ಅಡಿಯಲ್ಲಿ ಎಫ್​ಐರ್ ಮಾಡಬೇಕು ಎಂದು ಕೋರಿದ್ದಾರೆ. 

ತುರ್ತು ಸುದ್ದಿ/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದಲ್ಲಿ 15 ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಸಾದ್ವಿ ಹೇಳಿದ್ದೇನು? 

ಸಮ್ಮೇಳನದಲ್ಲಿ ಮಾತನಾಡಿದ್ದ ಸಾದ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಮನೆಯ ಹೆಣ್ಣುಮಕ್ಕಳನ್ನು ಸಂರಕ್ಷಿಸಿ, ಅವರಿಗೆ ಸಂಸ್ಕಾರ ಕಲಿಸಿ, ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಳ್ಳಿ, ಕೊನೆ ಪಕ್ಷ ಸೊಪ್ಪು, ತರಕಾರಿ ಕತ್ತರಿಸುವ  ಚಾಕುವನ್ನಾದರೂ ಸವೆದು ಚೂಪಾಗಿ ಇಟ್ಟುಕೊಳ್ಳಿ.. ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಕೇಳಿ ನಮ್ಮ ಮನೆಯಲ್ಲಿಯು ಸೊಪ್ಪು, ತರಕಾರಿ ಕತ್ತರಿಸುವ ಚಾಕು ಇನ್ನಷ್ಟು ಚೂಪಾಗಿ ಇರಬೇಕು.

ಇದನ್ನು ಓದಿ : ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

ಅವರು ಚಾಕುವಿನಿಂದಲೇ ನಮ್ಮ ಕಾರ್ಯಕರ್ತ ಹರ್ಷನನ್ನು ಕೊಂದರು, ಅವರು ಚಾಕುವಿನಿಂದಲೇ, ನಮ್ಮ ಹಿಂದು ವೀರರನ್ನು ಕೊಂದಿದ್ಧಾರೆ,  ಹಾಗಾಗಿ ನಾವು ಕೂಡ ನಮ್ಮ ಮನೆಯ ಸೊಪ್ಪು, ತರಕಾರಿ ಕತ್ತರಿಸುವ ಚಾಕುವನ್ನು ಸ್ವಲ್ಪ ಚೂಪಾಗಿ ಇರಿಸೋಣ, ಗೊತ್ತಿಲ್ಲ, ಯಾವಾಗ ಎಂತಹ ಸಂದರ್ಭ ಬರಬಹುದು ಎಂಬುದು. ಯಾವಾಗ ನಮ್ಮ ಚಾಕು ಸೊಪ್ಪು ತರಕಾರಿಯನ್ನು ಸುಲಭವಾಗಿ ಕತ್ತರಿಸುತ್ತದೋ, ಅದೇ ರೀತಿಯಲ್ಲಿ ಶತ್ರುವಿನ ತಲೆಯನ್ನು ಸಹ ಕತ್ತರಿಸಬಲ್ಲದು.

ಇದನ್ನ ಸಹ ಓದಿ : ಮೋದಿ ಮನ್​ ಕೀ ಬಾತ್​ನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸ್ತಾಪ/ ಈ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ ಕಾರಣವೇನು ಗೊತ್ತಾ

 ಆತ್ಮರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ. ನಮ್ಮ ದೇಶದ, ನಮ್ಮ ಮನೆಗೆ ನುಗ್ಗಿ ಯಾರಾದರೂ ನುಗ್ಗಿ ಆಕ್ರಮಣ ಮಾಡುತ್ತಾರೋ ಅದನ್ನು ತಡೆಯುವ ಅಧಿಕಾರ ನಮಗಿದೆ ಎಂದಿದ್ದರು. 

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್​

ಸದ್ಯ ಈ ಭಾಷಣದ ತುಣುಕು ಸಾಕಷ್ಟು ವೈರಲ್​ ಆಗಿದ್ದು ರಾಷ್ಟ್ರೀಯ ನ್ಯೂಸ್​ ಚಾನಲ್​ಗಳಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅದರ ಬೆನ್ನಲ್ಲೆ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ರವರಿಗೆ ಈ ಸಂಬಂಧ ಎಫ್​ಐಆರ್​ ದಾಖಲಿಸುವಂತೆ ಕಂಪ್ಲೆಂಟ್ ಕೂಡ ನೀಡಲಾಗಿದೆ. ಈ ಬಗ್ಗೆ ಸ್ವತಃ ತೆಹಸೀನ್​ ಪೂನಾವಾಲಾ ಬರೆದುಕೊಂಡಿದ್ದು, ದೂರು ಶಿವಮೊಗ್ಗ ಎಸ್​ಪಿ ಕಚೇರಿ ತಲುಪಿದ್ಯಾ ಎಂಬುದು ಇನ್ನಷ್ಟೆ ಖಾತರಿಯಾಗಬೇಕಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link