ಮೋದಿ ಮನ್​ ಕೀ ಬಾತ್​ನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸ್ತಾಪ/ ಈ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ ಕಾರಣವೇನು ಗೊತ್ತಾ

ನಿನ್ನೆ ನಡೆಸಿದ ಮನ್​ ಕೀ ಬಾತ್​ ನಲ್ಲಿ ಮಾತನಾಡಿದ ಅವರು, ಕಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗದಗ ನಗರದ ‘ಕಾವೆಂಶ್ರೀ’ ಯವರನ್ನು ಹೊಗಳಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನವರು. ಇನ್ನು ನರೇಂದ್ರ ಮೋದಿ ಶಿವಮೊಗ್ಗದ ಸುರೇಶ್ ಹಾಗೂ ಮೈಥಿಲಿ ದಂಪತಿಯ ಕೆಲಸವನ್ನು ಸಹ ಶ್ಲಾಘೀಸಿದ್ದಾರೆ.

ಮೋದಿ ಮನ್​ ಕೀ ಬಾತ್​ನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸ್ತಾಪ/ ಈ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ ಕಾರಣವೇನು ಗೊತ್ತಾ

ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕೀ ಬಾತ್​ ನಲ್ಲಿ ಶಿವಮೊಗ್ಗ ಹಾಗೂ ಸಾಗರ ಮೂಲದ ವ್ಯಕ್ತಿಗಳ ಹೆಸರು ಹಾಗು ಅವರುಗಳ ಪರಿಚಯ ಮತ್ತು ಸಾಧನೆಯನ್ನು ವಿವರಿಸಿದ್ದಾರೆ. ನಿನ್ನೆ ನಡೆಸಿದ ಮನ್​ ಕೀ ಬಾತ್​ ನಲ್ಲಿ ಮಾತನಾಡಿದ ಅವರು, ಕಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗದಗ ನಗರದ ‘ಕಾವೆಂಶ್ರೀ’ ಯವರನ್ನು ಹೊಗಳಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನವರು. ಇನ್ನು ನರೇಂದ್ರ ಮೋದಿ ಶಿವಮೊಗ್ಗದ ಸುರೇಶ್ ಹಾಗೂ ಮೈಥಿಲಿ ದಂಪತಿಯ ಕೆಲಸವನ್ನು ಸಹ ಶ್ಲಾಘೀಸಿದ್ದಾರೆ.  

ಇದನ್ನು ಸಹ ಓದಿ :  ಹಿಂದೂ ಹರ್ಷನ ಮನೆಗೆ ತೆರಳಿ ಸಾಂತ್ವನ ಹೇಳಿದ ಸಾದ್ವಿ ಪ್ರಗ್ಯಾ ಸಿಂಗ್​/ ದತ್ತ ಪೀಠಕ್ಕೂ ಭೇಟಿ!?

‘ಕಾವೆಂಶ್ರೀ’ ಅಂದರೆ, ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ ಎಂದು ಅರ್ಥ. ಅವರು ಕಳೆದ 25 ವರ್ಷಗಳಿಂದ ರಾಜ್ಯದ ಕಲೆ ಹಾಗು ಸಂಸ್ಕೃತಿಯನ್ನು ಬೆಳಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ, ಕಾವೆಂಶ್ರೀ ಕೈಗೊಳ್ಳುತ್ತಿರುವ ಕೆಲಸ ಮತ್ತು ಕಲೆಗಾಗಿ ಅವರ ನಡೆಸ್ತಿರುವ ತಪಸ್ಸು ಎಷ್ಟುಶ್ರೇಷ್ಠ ಎಂದು ನೀವು ಊಹಿಸಬಹುದು.

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್​

ಅವರ ‘ಕಲಾ ಚೇತನ’ ಎಂಬ ಹೆಸರಿನಲ್ಲಿ ವೇದಿಕೆ ಕರ್ನಾಟಕ ಮತ್ತು ಭಾರತ ಮತ್ತು ವಿದೇಶಗಳ ಕಲಾವಿದರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಲ್ಲಿ,ಸ್ಥಳೀಯ ವಿಶಿಷ್ಟತೆಗಳನ್ನು ಸಾರುವ ಕೆಲಸವಾಗುತ್ತಿದೆ ಎಂದು ಶ್ಲಾಘಿಸಿದರು

ಇದನ್ನು ಸಹ ಓದಿ : ತಿಂಗಳುಗಳ ನಂತರ ಶಿವಮೊಗ್ಗದಲ್ಲಿ ದಾಖಲಾದ ಕೊರೊನಾ ಕೇಸ್​ನ ಹಿನ್ನೆಲೆ ಏನು ಗೊತ್ತಾ? ಆರೋಗ್ಯಾಧಿಕಾರಿ ಹೇಳಿದ್ದೇನು?

ಇನ್ನೂ ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಅಡಿಕೆ ಹಾಳೆಯಿಂಧ ವಿಶಿಷ್ಟ ವಸ್ತುಗಳನ್ನು ತಯಾರಿಸುವ ದಂಪತಿ ಸುರೇಶ್‌ ಮತ್ತು ಮೈಥಿಲಿ ಅವರ ಕೌಶಲ್ಯವನ್ನೂ ಮೋದಿ ಹೊಗಳಿದ್ದಾರೆ. ಈ ಬಗ್ಗೆ ಮಾತನಾಡಿದ ಮೋದಿ ಶಿವಮೊಗ್ಗದ ದಂಪತಿ ಸುರೇಶ್‌ ಮತ್ತು ಮೈಥಿಲಿ ಅವರು ಅಡಿಕೆ ಹಾಳೆಯಿಂದ ಮಾಡಿದ ಅನೇಕ ವಿಶಿಷ್ಟಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ.

ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್​/ ಕೇಳೋರೆ ಇಲ್ಲದ ಅನಾಥೆ ಸಾವಿಗೆನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್​/ EXCLUSIVE JP REPORT

ಹಾಳೆ ತಟ್ಟೆ, ಕೈಚೀಲ,ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.ಇದರಿಂದಲೇ ತಯಾರಿಸಿದ ಚಪ್ಪಲಿಗಳು ಸಹ ತಯಾರಿಸಿದ್ದು, ಇದು ಹೆಚ್ಚು ಆಪ್ತ ಎನಿಸುತ್ತದೆ. ಅವರ ಉತ್ಪನ್ನಗಳು ಲಂಡನ್‌ ಮತ್ತು ಯುರೋಪಿನ  ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದಂಪತಿಯ ಕೆಲಸಗಳನ್ನು ಶ್ಲಾಘಿಸಿದರು. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link