ತಾತ ಎಸ್​. ಬಂಗಾರಪ್ಪರವರ ರೀತಿಯಲ್ಲಿ ಡೊಳ್ಳು ಬಾರಿಸಿ ಕುಣಿದ ಮೊಮ್ಮಗಳು

Grandfather S. Like Bangarappa, his granddaughter Played Dollu Kunitha

MALENADUTODAY.COM | SHIVAMOGGA NEWS |SORABA TALUK

ಸಾರೆಕೊಪ್ಪ ಬಂಗಾರಪ್ಪನವರು ( bangarappa) ಬಹಳ ಇಷ್ಟಪಟ್ಟು ಪ್ರೀತಿಸಿ ಕುಣಿಯುತ್ತಿದ್ದ ಕಲೆ ಡೊಳ್ಳು ಕುಣಿತ. ಅವರು ಡೊಳ್ಳು ಬಾರಿಸುತ್ತಾ ಕುಣಿಯುವುದನ್ನ ನೋಡಲೆಂದೆ ಜನರು ಮುಗಿಬೀಳುತ್ತಿದ್ದರು. ರಾಜಕಾರಣದ ಉತ್ತುಂಗದಲ್ಲಿದ್ದಾಗಲೂ ಬಂಗಾರಪ್ಪನವರು ಡೊಳ್ಳು  ತಂಡವನ್ನು ಕಂಡರೆ ಸಾಕು, ತಾವು ಕೂಡ ಡೊಳ್ಳು ಬಾರಿಸಲು ಅಣಿಯಾಗುತ್ತಿದ್ದರು. ಲಯಬದ್ಧವಾಗಿ ಇರುತ್ತಿದ್ದ ಅವರ ಡೊಳ್ಳು ಕುಣಿತದ ದೃಶ್ಯಗಳು ಕೆಲವೇ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು, ಅದರ ವಿಡಿಯೋಗಳು ಸಹ ಅಪರೂಪಕ್ಕೆ ಕಾಣಸಿಗುತ್ತವೆ. 

ಜಾತಿ, ಧರ್ಮದ ವಿಚಾರ, ವಿವಾದಗಳ ನಡುವೆ ಬಂಗಾರಪ್ಪರನವರು ನೆನಪಾಗುತ್ತಾರೆ ಕಾರಣವೇನು ಗೊತ್ತಾ!? jp ಬರೆಯುತ್ತಾರೆ!

ತಂದೆಯ ಡೊಳ್ಳುಕುಣಿತದ ಸ್ಟೈಲ್​ನ್ನ ಅವರ ಪುತ್ರರು ಸಹ ಅಭ್ಯಾಸ ಮಾಡಿದ್ದರು. ಅದರಲ್ಲಿ ಮಧುಬಂಗಾರಪ್ಪರವರು ಹಲವು ಪಾದಯಾತ್ರೆಗಳಲ್ಲಿ ಡೊಳ್ಳು ಬಾರಿಸುತ್ತಾ, ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸ್ತಿದ್ದರು. ಸದ್ಯ ಬಂಗಾರಪ್ಪನವರ ಮೊಮ್ಮಗಳು ಸೌಭಾಗ್ಯಲಕ್ಷ್ಮೀ ಡೊಳ್ಳು ಬಾರಿಸ್ತಿರುವ ದೃಶ್ಯವೊಂದು ವೈರಲ್ ಆಗುತ್ತಿದೆ. 

ಬಂಗಾರಪ್ಪನವರ ಪುತ್ರಿ ಸುಜಾತ ತಿಲಕ್ ಕುಮಾರ್​ರವರ ಮಗಳು ಸೌಭಾಗ್ಯ ಕುಬಟೂರಿನ ಧ್ಯಾಮವ್ವ ಜಾತ್ರೆಯಲ್ಲಿ ಸೇರಿದ್ದ ಜನಸಾಗರದ ನಡುವೆ ಡೊಳ್ಳು ಬಾರಿಸಿ ಖುಷಿಪಟ್ಟರು. ಈ ವೇಳೆ ಮಧುಬಂಗಾರಪ್ಪರವರು ಸಹ ಕುಟುಂಬಸ್ಥರ ಜೊತೆ ಹೆಜ್ಜೆಹಾಕಿ ಜಾತ್ರೆಯ ಸಡಗರವನ್ನು ಹಂಚಿಕೊಂಡಿದ್ಧಾರೆ. 

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com