ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು! ಸ್ನೇಕ್​ ಕಿರಣ್ ಸೆರೆಹಿಡಿದ ದೃಶ್ಯ ಸಖತ್ ರೋಚಕ

Cobra spotted at Shivamogga airport The scene captured by Snake Kiran is quite interesting.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು! ಸ್ನೇಕ್​ ಕಿರಣ್ ಸೆರೆಹಿಡಿದ ದೃಶ್ಯ ಸಖತ್ ರೋಚಕ
Cobra spotted at Shivamogga airport The scene captured by Snake Kiran is quite interesting.

SHIVAMOGGA  |  Jan 25, 2024  | ಶಿವಮೊಗ್ಗ ವಿಮಾನ ನಿಲ್ದಾಣ  ಆಗಾಗ ವಿಶೇಷವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಸರ್ತಿ ಸೋಗಾನೆಯ ಬಳಿ ಇರುವ ಕುವೆಂಪು ವಿಮಾನ ನಿಲ್ದಾಣವೂ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಇದಕ್ಕೆ ಕಾರಣ ನಾಗರ ಹಾವು

ಮಲೆನಾಡಿನಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ವಿಶೇಷವೇನಲ್ಲ. ಆದಾಗ್ಯು ಶಿವಮೊಗ್ಗ ಏರ್​ಪೋರ್ಟ್ ಆರಂಭವಾದ ಮೇಲೆ ಅಲ್ಲಿ ಹಾವು ಕಾಣಿಸಿಕೊಂಡಿದ್ದರ ಉದಾಹರಣೆ ಇದೇ ಮೊದಲು. ಅದರಲ್ಲಿಯು ಹಾವು ಟರ್ಮಿನಲ್ ಒಳಗಡೆಯೇ ಕಾಣಿಸಿರುವುದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗಿತ್ತು.

ವಿಡಿಯೋ ನೋಡಿ, ಮಲೆನಾಡು ಟುಡೆಯ ಫೇಸ್​ಬುಕ್ ಪೇಜ್​ಗೆ ನಿಮ್ಮದೊಂದು ಲೈಕ್ ಕೊಡಿ , ಸುದ್ದಿ ಇನ್ನೂ ಇದೆ 

ನಿನ್ನೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು ಕಾಣಿಸಿರುವುದು ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತ್ತು. ಹೀಗಾಗಿ ಇತ್ತೀಚೆಗ ಹಾವು ಕಚ್ಚಿದ್ದರಿಂದ ಅನಾರೋಗ್ಯಕ್ಕೀಡಾಗಿ, ಇದೀಗ ಚೇತರಿಸಿಕೊಂಡು ಕಮ್​ ಬ್ಯಾಕ್ ಮಾಡಿರುವ ಸ್ನೇಕ್​ ಕಿರಣ್ ರಿಗೆ ಕರೆ ಮಾಡಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್​ ಕಿರಣ್,  ಹಿಂದಿಗಿಂತಲೂ ಹೆಚ್ಚಿನ ಜಾಗ್ರತೆಯನ್ನು ವಹಿಸಿ ಸುರಕ್ಷಿತವಾಗಿ ನಾಗರಹಾವನ್ನ ಹಿಡಿದಿದ್ದಾರೆ.  ಟರ್ಮಿನಲ್​ನ ಒಳಗಡೆಯಿದ್ದ ಕೋಣೆಯೊಂದರಲ್ಲಿ ಹಾವು ಸೇರಿಕೊಂಡಿತ್ತು. ಬೆಳಕು ಇದ್ದ ಕಾರಣಕ್ಕೆ ಹಾವಿನ ಇರುವಿಕೆ ಸ್ಪಷ್ಟವಾಗಿತ್ತು. ನೆಲ ನೈಸ್ ಆಗಿದ್ದರಿಂದ ಹಾವಿಗೆ ಹರಿದಾಡಲು ಸ್ವಲ್ಪ ಕಷ್ಟವಾಗುತ್ತಿತ್ತು. 

ವಿಡಿಯೋ ನೋಡಿ, ಮಲೆನಾಡು ಟುಡೆಯ ಫೇಸ್​ಬುಕ್ ಪೇಜ್​ಗೆ ನಿಮ್ಮದೊಂದು ಲೈಕ್ ಕೊಡಿ , ಸುದ್ದಿ ಇನ್ನೂ ಇದೆ 

ಏರ್​ಪೋರ್ಟ್​ನಲ್ಲಿ ಅರ್ಧಗಂಟೆ ಕಾರ್ಯಾಚರಣೆ ನಡೆಸಿದ ಸ್ನೇಕ್ ಕಿರಣ್ ಹಾವು ಹಿಡಿವ ಟೂಲ್ಸ್​ ಗಳನ್ನು ಬಳಸಿ ನಾಗರಾಜನನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಅರಣ್ಯ ಇಲಾಖೆ ಸುಪರ್ಧಿಗೆ ನೀಡಿದ್ದಾರೆ.