SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

A man was duped of Rs 72,000 on the pretext of having a job at SHIVAMOGGA AIRPORT. A case has been registered in this regard.

SHIVAMOGGA AIRPORT  ತೋರಿಸಿ 72 ಸಾವಿರ ರೂಪಾಯಿ ಗುಳುಂ!  ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​
SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

MALENADUTODAY.COM | SHIVAMOGGA NEWS 

ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ  ವಿಮಾನ ನಿಲ್ದಾಣದಲ್ಲಿ ಉದ್ಯೋ ಗವಿದೆ ಎಂದು ನಂಬಿಸಿ ಹೊಳಲೂರಿನ ಯುವಕನೊಬ್ಬನಿಗೆ 72 ಸಾವಿರ ರೂಪಾಯಿ ವಂಚಿಸಲಾಗಿದೆ.ಈ ಸಂಬಂಧ  ಶಿವಮೊಗ್ಗ ಪೊಲೀಸರಿಗೆ ದೂರು ದಾಖಲಾಗಿದ್ದು ಎಫ್​ಐಆರ್ ಕೂಡ ಆಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರ’ ಎಂದು  ನಂಬಿಸಿ ಮೋಸ ಮಾಡಲಾಗಿದೆ.  ಯುವಕನೊಬ್ಬ ಮೊಬೈಲ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಷನ್ ಓಪನ್ ಮಾಡಿ ಅದರಲ್ಲಿ ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಹೆಸರು ದಾಖಲಿಸಿದ್ದ. 

Shimoga Sogane airport : ಮೋದಿ ಆಗಮನಕ್ಕೆ ಕಾಯುತ್ತಿದೆ ಶಿವಮೊಗ್ಗವಿಮಾನ ನಿಲ್ದಾಣ! ಉದ್ಘಾಟನೆಗೆ ಸಿದ್ದಗೊಂಡ AIRPORTನ ಡ್ರೋಣ್ ದೃಶ್ಯ ನೋಡಿದ್ರಾ

ಇದರ ಬೆನ್ನಲ್ಲೆ ಕಳೆದ ಫೆಬ್ರವರಿ 2 ರಂದು ಈತನ ಮೊಬೈಲ್ಗೆ  ಮಹಿಳೆಯೊಬ್ಬಳು  ಕರೆ ಮಾಡಿ, ತನ್ನನ್ನು ಮೋನಿಕಾ ಎಂದು  ಪರಿಚಯಿಸಿಕೊಂಡಿದ್ದಾಳೆ. ಬಳಿಕ ತಾನು ಶಿವಮೊಗ್ಗ ಏರ್ ಪೋರ್ಟ್ (airport jobs) ಅಥಾರಿಟಿಯ ಹೆಚ್.ಆರ್ ಎಂದು ಹೇಳಿಕೊಂಡು ಯುವಕನನ್ನು ನಂಬಿಸಿದ್ದಾಳೆ. ಅಲ್ಲದೆ ಕೆಲಸಕ್ಕಾಗಿ ನೋಂದಣಿಯಾಗಬೇಕು ಇದಕ್ಕಾಗಿ ಹಣ ಕಟ್ಟಬೇಕು ಎಂದು ಸ್ವಲ್ಪ ಸ್ವಲ್ಪವೇ ಅಂತಾ ಫೋನ್‌ ಪೇ ಮೂಲಕ 72,900 ರೂಪಾಯಿ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

ಸದ್ಯ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. ಏರ್​ಪೋರ್ಟ್​ ನಲ್ಲಿ ಕೆಲಸ ಎಂಬ ಅಡಿಬರಹದಲ್ಲಿ ಸುಳ್ಳು ಜಾಹಿರಾತುಗಳನ್ನು ನೀಡುತ್ತಿರುವ ಬಗ್ಗೆ ಈ ಮೊದಲೇ ಮಲೆನಾಡು ಟುಡೆ ಸುದ್ದಿ ಮಾಡಿತ್ತು, ಅದರ ನಡುವೆ ಇದೀಗ ಮೋಸ ಜಾಲ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಈ ಕೇಸ್ ನಲ್ಲಿ ಕಂಡುಬರುತ್ತಿದೆ

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com