‘ಅ’ ಸಹಕಾರ ರಾಜಕಾರಣ! ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ ಏನಾಗುತ್ತಿದೆ? ಆರ್​ಎಂ ಮಂಜುನಾಥ್​ ಗೌಡರು ಎಂಟ್ರಿಯಾಗ್ತಾರಾ?

'A' co-operative politics! What is happening in Shimoga DCC Bank? Will RM Manjunath Gowda make an entry?

‘ಅ’ ಸಹಕಾರ ರಾಜಕಾರಣ! ಶಿವಮೊಗ್ಗ ಡಿಸಿಸಿ ಬ್ಯಾಂಕ್​ನಲ್ಲಿ ಏನಾಗುತ್ತಿದೆ?  ಆರ್​ಎಂ ಮಂಜುನಾಥ್​ ಗೌಡರು ಎಂಟ್ರಿಯಾಗ್ತಾರಾ?

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ಶಿವಮೊಗ್ಗ ಡಿಸಿಸಿ ಬ್ಯಾಂಕ್​  ಅಧ್ಯಕ್ಷರಾದ ಚನ್ನವೀರಪ್ಪರವರ  ವಿರುದ್ಧ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗುರುವಾರ ಅವಿಶ್ವಾಸ ಮಂಡನೆಗೆ ನಿನ್ನೆದಿನ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ  ಏಳು ನಿರ್ದೇಶಕರು ಸಹಿ ಹಾಕಿದ್ದಾರೆ. ರಾಜಕೀಯವಾಗಿ ಈ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. 

ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ಅಧಿಕಾರ ಸಹ ಕಾಂಗ್ರೆಸ್‌ನಿಂದ ಬಿಜೆಪಿಗೆ  ಕೈ ಬದಲಾಗಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಬಿಜೆಪಿ ಬೆಂಬಲಿತ ಅಧಿಕಾರವನ್ನ ಕೈ ವಶಕ್ಕೆ ಪ್ರಯತ್ನ ನಡೆಯುತ್ತಿದೆ. ಅಲ್ಲದೆ  ಆರ್​ಎಂ ಮಂಜುನಾಥ್ ಗೌಡರು ಮತ್ತೆ ಡಿಸಿಸಿ ಬ್ಯಾಂಕ್​ನ ಆಡಳಿತ ಹಿಡಿಯಲು ಪ್ರಯತ್ನ ನಡೆಸಿದ್ದಾರೆ. 

 

ಪ್ರಸ್ತುತ ಆಡಳಿತ ಮಂಡಳಿಯ ಚುನಾವಣೆಗೆ 9 ತಿಂಗಳಷ್ಟೆ ಬಾಕಿ ಇದೆ,  ಬ್ಯಾಂಕ್‌ನಲ್ಲಿ 13 ಚುನಾಯಿತ ಪ್ರತಿನಿಧಿಗಳಿದ್ದು ಇದರಲ್ಲಿ ಕಾಂಗ್ರೆಸ್ ಬೆಂಬಲಿತ 7, ಬಿಜೆಪಿ ಬೆಂಬಲಿತ 5 ಮತ್ತು ಜೆಡಿಎಸ್ ಬೆಂಬಲಿತ ಒಬ್ಬ ನಿರ್ದೇಶಕರಿದ್ದಾರೆ.  ಈ ಪೈಕಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಅರ್ಜಿ ಸಲ್ಲಿಸದ್ಧಾರೆ. ನಿರ್ಣಯಕ್ಕೆ ಜಯ ಜಯ ಸಿಗಲು 9 ನಿರ್ದೇಶಕರ ಮತ ಅವಶ್ಯಕ. ಸದ್ಯ ನಿರ್ಣಯದ ಮನವಿಗೆ ಅರ್ಜಿಗೆ ಉಪಾಧ್ಯಕ್ಷ ಎಚ್‌.ಎಲ್‌.ಷಡಾಕ್ಷರಿ, ವಿಜಯದೇವ್, ದುಗ್ಗಪ್ಪಗೌಡ, ಪರಮೇಶ್‌, ವೆಂಕಟೇಶ್, ದಿನೇಶ್ ಮತ್ತು ಸುಧೀರ್ ಸಹಿ ಹಾಕಿದ್ದಾರೆ.  


ಬಚ್ಚಾ ಮರ್​ಗಯಾ! ಕೇಸ್​ ಗೊತ್ತಾ? ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದೇಕೆ? ಶಿವಮೊಗ್ಗದ ಮೋಸ್ಟ್​ ಇಂಟರ್​ಸ್ಟಿಂಗ್ ಪ್ರಕರಣದ ಪೂರ್ತಿ ಡಿಟೇಲ್ಸ್​!

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅಣ್ಣಾನಗರ ವಾಸಿ ಹಯಾತುಲ್ಲಾಖಾನ್ ಅಲಿಯಾಸ್ ಬಚ್ಚಾ ಎಂಬುವವನ ಕೊಲೆ ಕೇಸಿಗೆ ಸಂಬಂಧಿಸಿದಂತೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. 

ಯಾರಿಗೆ ಶಿಕ್ಷೆ 

ಆರೋಪಿಗಳಾಗಿದ್ದ ಅರ್ಬಾಜ್ ಬಿನ್ ಶಾರುಖಾನ್ ಬಿನ್ ಸೈಯದ್ ಮುನಾಥ್, ಸದಾಬ್ ಬಿನ್ ಹಿದಾಯತ್ ಮತ್ತು ಅಲ್ಯಾಜ್ ಅರು ಸೈಯದ್‌ ಜಮೀಲ್ ಎಂಬುವವರಿಗೆ ಜೀವಾವಧಿ ಕಾರಾಗೃಹ ವಾಸ ಶಿಕ್ಷೆ ಭಾ.ದಂ.ಸಂಹಿತೆ ಹಾಗೂ ತಲಾ ರೂ. 50,000/- ದಂಡವನ್ನು ವಿಧಿಸಿದ್ದಾರೆ. 

ಏನಿದು ಪ್ರಕರಣ 

ಶಿವಮೊಗ್ಗ ಟೌನ್, ದೊಡ್ಡಪೇಟೆ ಪೊಲೀಸ್ ಠಾಗ ವ್ಯಾಪ್ತಿಯ ಬಾನಗರ ವಾಸಿ ನಾಜಿಮಾರ ಮಗನಾದ  ಹಯಾತುಲ್ಲಾ‌ ಆಲಿಯಾಸ್  ಬಚ್ಚಾ ಮತ್ತು  ಟಿಪ್ಪುನಗರ ವಾಸಿಗಳಾದ ಕುರ್ರಮ್​ ಹಾಗೂ ಇಮ್ರಾನ್​ ಷರೀಪ್​ ನಡುವೆ ವೈಷಮ್ಯವಿತ್ತು. 

ಘಟನೆ ಹಿನ್ನೆಲೆ

ಇವರಿಬ್ಬರ ಗುಂಪುಗಳ ನಡುವೆ ಆಗಾಗ ಹೊಡೆದಾಟ ನಡೆದು ಜೈಲಿಗೆ ಹೋಗಿ ಬಂದಿದ್ದ ಉದಾಹರಣೆಗಳಿದ್ದವು. ಅಲ್ಲೆ 2016 ರಲ್ಲಿ ಬಚ್ಚಾ ಗ್ಯಾಂಗ್ ಕುರ್ರಮ್​ನ ಸಹಚರನ ಹೊಟ್ಟೆ ಚುಚ್ಚಿ ಅರೆಸ್ಟ್​ ಆಗಿತ್ತು. ಇದೇ ವಿಚಾರಕ್ಕೆ ಇಮ್ರಾಮ್​ ಷರೀಫ್​ ತಮ್ಮ  ಹುಡುಗರಿಗೆ ಹೊಡೆದವರಿಗೆ ಬಿಡುವುದಿಲ್ಲಾ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದ. ಇನ್ನೊಂದೆಡೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಚ್ಚಾ ರಿಲೀಸ್ ಆದ ಮೇಲೆ  ಒಬ್ಬೊಬ್ಬರನ್ನಾಗಿ ಮುಗಿಸುತ್ತೇನೆ ಎಂದು ಷರೀಫ್​ ಗ್ಯಾಂಗ್​ಗೆ ಅವಾಜ್ ಹಾಕಿದ್ದ. 

ಸ್ಕೆಚ್​ ರೆಡಿ?

ಈತನನ್ನು ಬಿಟ್ಟರೆ ಮುಂದೆ ನಮ್ಮ ಜೀವಕ್ಕೆ ತೊಂದರೆಯಾಗುತ್ತದೆ ಎಂದು ಕೊಂಡ  ಕುರ್ರಮ್​ ಟೀಂ​ ಗ್ಯಾಂಗ್ ಬಚ್ಚಾನನನ್ನ ಮುಗಿಸಲು ಸ್ಕೆಚ್​ ಹಾಕುತ್ತದೆ. 12 ಸೇರಿಕೊಂಡು ಸಂಚು ರೂಪಿಸಿ, ಪೂರ್ವ ಸಿದ್ಧತೆ ಮಾಡಿಕೊಂಡು ದಿನಾಂಕ: 08-02-2017 ರಂದು ಮಧ್ಯಾಹ್ನ 3.30 ಗಂಟೆ ಸಮಯದಲ್ಲಿ  ಗಣೇಶ ದರ್ಶಿನಿ ಹೋಟೆಲ್ ಪಕ್ಕದ ಮಾತೃಶ್ರೀ ಸ್ಟುಡಿಯೋ ಮುಂಭಾಗ ತೆರಳುತ್ತದೆ. ಅಲ್ಲದೆ ಬಚ್ಚಾ  ಒಬ್ಬನೇ ಕುಳಿತಿದ್ದನ್ನು  ಕಂಡು ಎರಡು ಟೀಂಗಳಾಗಿ ತಂಡ ಡಿವೈಡ್ ಆಗುತ್ತದೆ. ಒಂದು ಟೀಂ ಸ್ಥಳಕ್ಕೆ ಹೋಗಿ ಬಚ್ಚಾನನ್ನ ಮಾತನಾಡಿಸಿ ಕೊಲೆ ಮಾಡುವುದು. ಹಾಗೊಂದು ವೇಳೆ ಆತ ತಪ್ಪಿಸಿಕೊಂಡು ಹೋದರೆ, ಇನ್ನೊಂದು ಟೀಂ ಅಟ್ಯಾಕ್ ಮಾಡುವುದು ಎಂದು ತೀರ್ಮಾನಿಸುತ್ತದೆ. ಹೀಗೆ ಮಾತನಾಡಿಕೊಂಡು ಒಂದು ಬಚ್ಚಾನನ್ನ ಮಾತನಾಡಿಸುವಂತೆ ಮಾತನಾಡಿ, ಆತನನ್ನ ಹಿಡಿದು, ಆತನ ಹೊಟ್ಟೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡುತ್ತದೆ. 'ಬಚ್ಚಾ ಮರ್‌ಗಯಾ' ಬಚ್ಚಾ ಮರ್‌ಗಯಾ' ಎಂದು ಕೂಗುತ್ತಾ ಅಲ್ಲಿಂದ ಎಸ್ಕೇಪ್ ಆಗುತ್ತದೆ. 

ಪ್ರಕರಣದ ತನಿಖೆ

ಈ ಬಗ್ಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ತಮ್ಮ ಠಾಣಾ ಗುನ್ನೆ ಸಂಖ್ಯೆ: 39/2017 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾಧಿಕಾರಿಗಳಾದ  ಕೆ.ಟಿ. ಗುರುರಾಜ, ಸಿ.ಪಿ.ಐ., ರವರು ತನಿಖೆ ಪೂರೈಸಿ ಆರೋಪಿಗಳಾದ ಕುರಮ್ ಮತ್ತು ಆತನ ಸಹಚರರು ಸೇರಿ ಒಟ್ಟು 12 ಜನ ಆರೋಪಿಗಳ ವಿರುದ್ಧ ಭಾ.ದಂ.ಸಂಹಿತೆ ಕಲಂ: 143, 144, 147, 148, 302, 114 ರ:ವಿ 149 ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಕೋರ್ಟ್ ತೀರ್ಪು

ಪ್ರಕರಣವೂ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಅಲ್ಲಿ ವಿಚಾರಣೆ ನಡೆದು ವಿ, ಅರ್ಬಾಜ್,  ಎ. ಶಾರುಖಾನ್ ಸದಾಬ್​, ಅಲ್ಪಾಜ್​ ವಿರುದ್ಧ ಐಪಿಸಿ 143, 14, 147, 148, 302, 114 ಲೆ. (4) ರ ಅಡಿಯಲ್ಲಿ ಆರೋಪ ಸಾಬೀತಾಗಿದೆ. ಹೀಗಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕ ಜೆ.ಶಾಂತರಾಜ್ ವಾದ ಮಂಡಿಸಿದ್ದರು.