ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​ನಲ್ಲಿ 19 ವರ್ಷದ ಯುವತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು

ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​ನಲ್ಲಿ 19 ವರ್ಷದ ಯುವತಿಯನ್ನು  ರಕ್ಷಿಸಿದ ರೈಲ್ವೆ ಪೊಲೀಸರು

ಶಿವಮೊಗ್ಗ  : ರೈಲ್ವೆ ಪೊಲೀಸರು ಸಾಕಷ್ಟು ಅಲರ್ಟ್​ ಆಗಿದ್ದಾರೆ, ಸಣ್ಣದೊಂದು ಸಂಶಯವನ್ನು ಗಂಭೀರವಾಗಿ ಪರಿಗಣಿಸುತ್ತಿರುವ ರೈಲ್ವೆ ಪೊಲೀಸರಿಂದಾಗಿ, ಟ್ರೈನ್​ನಲ್ಲಿ ಹಲವು ಕೇಸ್​ಗಳು ಪತ್ತೆಯಾಗುತ್ತಿದೆ. ಇತ್ತೀಚೆಗಷ್ಟೆ ಶಿವಮೊಗ್ಗ ರೈಲ್ವೆ ಸ್ಟೇಷನ್​ನಲ್ಲಿ ಗೊತ್ತುಗುರಿಯಿಲ್ಲದೆ ಹೊರಟಿದ್ದ ಬಾಲಕನೊಬ್ಬನನ್ನ ರಕ್ಷಿಸಿದ್ದ ಪೊಲೀಸರು ಇದೀಗ ಯುವತಿಯೊಬ್ಬಳನ್ನು ರಕ್ಷಿಸಿದ್ದಾರೆ. 

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಮೈಸೂರು ತಾಳಗುಪ್ಪ ಎಕ್ಸ್​ಪ್ರೆಸ್​ ( Train No. 16227 Ex: MYS-TLGP) ನಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳನ್ನು ರೈಲ್ವೆ ಪೊಲೀಸರು ರಕ್ಷಿಸಿದ್ಧಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಯುವತಿಯನ್ನು ವಿಚಾರಣೆಗೆ ಒಳಪಡಿಸಿ ಆನಂತರ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link