ಫೆಬ್ರವರಿ 16 ತೀರ್ಥಹಳ್ಳಿಯಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆ/ ಚುನಾವಣೆ ಬಳಿಕ ಜೆಡಿಎಸ್ ಅಧಿಕಾರಕ್ಕೆ ಎಂದ ಎಂ.ಶ್ರೀಕಾಂತ್

ಮುಂದಿನ ಚುನಾವಣೆ ನಂತರ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮುಂದಿನ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗುವುದು ನಿಶ್ಚಿತ ಅಂತಾ ಶಿವಮೊಗ್ಗ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದ್ದಾರೆ.

ಫೆಬ್ರವರಿ  16  ತೀರ್ಥಹಳ್ಳಿಯಲ್ಲಿ ಜೆಡಿಎಸ್​ ಪಂಚರತ್ನ ಯಾತ್ರೆ/ ಚುನಾವಣೆ ಬಳಿಕ ಜೆಡಿಎಸ್ ಅಧಿಕಾರಕ್ಕೆ ಎಂದ ಎಂ.ಶ್ರೀಕಾಂತ್

ಶಿವಮೊಗ್ಗ : ಮುಂದಿನ ಚುನಾವಣೆ ನಂತರ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಮುಂದಿನ ಮುಖ್ಯ ಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗುವುದು ನಿಶ್ಚಿತ ಅಂತಾ ಶಿವಮೊಗ್ಗ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದ್ದಾರೆ. 

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಪಕ್ಷದ ಸಂಘಟನೆಯಲ್ಲಿ ಪಾತ್ರವಹಿಸಿ : ಶಿವಮೊಗ್ಗ ಜಿಲ್ಲಾ ಜೆಡಿಎಸ್​ (shivamogga jds office) ಕಚೇರಿಯಲ್ಲಿ ನಡೆದ  ಜಿಲ್ಲಾ ಹಾಗೂ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಪ್ರಮುಖ ಪಾತ್ರವಹಿಸಬೇಕು. ಜಿಲ್ಲೆಯ ಪ್ರತಿ ತಾಲೂಕಿನಿಂದ ಬೂತ್ ಮಟ್ಟದ ಕಮಿಟಿ ನಿರ್ಮಾಣಮಾಡಿ ರಾಜ್ಯಮಟ್ಟಕ್ಕೆ ಅದರ ಪಟ್ಟಿಯನ್ನು ಕಳುಹಿಸಬೇಕು.ಪ್ರತಿ ಕ್ಷೇತ್ರದಿಂದ 50 ಅಲ್ಪಸಂಖ್ಯಾತ ಪ್ರಮುಖರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಬೇಕು ಎಂದರು 

ಇದನ್ನು ಸಹ ಓದಿ : ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಜೆಡಿಎಸ್​ಗೆ ಹೆಚ್ಚಿನ ಬೆಂಬಲವಿದೆ : ಇನ್ನೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಾರದಾ ಪೂರಾನಾಯ್ಕ ಮಾತನಾಡಿ, ಪ್ರತಿ ಬೂತ್ ಕಮಿಟಿಯಿಂದ ಇಬ್ಬರನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಕಳುಹಿಸಬೇಕಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಹೆಚ್ಚಿನ ಬೆಂಬಲವಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ದಲ್ಲಿ ಈಗಾಗಲೇ ಮನೆ ಮನೆ ಪ್ರಚಾರ ಮುಗಿದಿದೆ. ಇನ್ನೊಂದು ಹಂತದ ಪ್ರಚಾರಕ್ಕೆ ಸಿದ್ದತೆ ನಡೆದಿದೆ ಎಂದರು. ಭದ್ರಾವತಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಮಾತನಾಡಿ, ಸಭೆ ಕರೆದಾಗ ಮಾತ್ರ ಬರುತ್ತೀವಿ, ಹೋಗುತ್ತಿವಿ ಅಂತ ಆಗಬಾರದು.  ಸಂಘಟಿತರಾದರೆ ಜೆಡಿಎಸ್ ಗೆಲುವು ನಿಶ್ಚಿತ ಎಂದರು. 

ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ

ತೀರ್ಥಹಳ್ಳಿಯ ಜೆಡಿಎಸ್ ಮುಖಂಡ ಯಡೂರು ರಾಜಾರಾಮ್‌ ಮಾತನಾಡ್ತಾ, ಪಕ್ಷದ ಸಂಘಟನೆ ಬಹಳ ಮುಖ್ಯ, ಈ ಹಿಂದಿನ ಸೋಲಿಗೆ ಕಾರಣವೇನು ಎಂಬುದು ತಿದ್ದುಕೊಂಡು ಜವಾಬ್ದಾರಿಯಿ೦ದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅದು ಎಲ್ಲರ ಕರ್ತವ್ಯವು ಹೌದು, ಫೆ.16 ರಂದು ತೀರ್ಥಹಳ್ಳಿಗೆ ಪಂಚರತ್ನ ಯಾತ್ರೆ  ಆಗಮಿಸಲಿದೆ. ಯಾತ್ರೆಗೆ ಕುಪ್ಪಳ್ಳಿಯಿಂದ ಚಾಲನೆಯನ್ನು ಕುಮಾರಸ್ವಾಮಿಯವರು ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ಧತೆಗಳು ಆಗುತ್ತಿದೆ ಎಂದರು.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link