ಶಿವಮೊಗ್ಗಕ್ಕೆ ಒಲಿದು ಬಂದ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಶಿವಮೊಗ್ಗದಲ್ಲಿ ಎಲ್ಲಿ ಯಾವಾಗ ಪ್ರಾರಂಭವಾಗಲಿದೆ ಯುನಿವರ್ಸಿಟಿ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು..ಇದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

ಶಿವಮೊಗ್ಗಕ್ಕೆ ಒಲಿದು ಬಂದ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಶಿವಮೊಗ್ಗದಲ್ಲಿ ಎಲ್ಲಿ ಯಾವಾಗ ಪ್ರಾರಂಭವಾಗಲಿದೆ ಯುನಿವರ್ಸಿಟಿ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು..

ಶಿವಮೊಗ್ಗಕ್ಕೆ ಒಲಿದು ಬಂದ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಶಿವಮೊಗ್ಗದಲ್ಲಿ ಎಲ್ಲಿ ಯಾವಾಗ ಪ್ರಾರಂಭವಾಗಲಿದೆ ಯುನಿವರ್ಸಿಟಿ ಬಗ್ಗೆ ಹೋಮ್ ಮಿನಿಸ್ಟರ್ ಹೇಳಿದ್ದೇನು..ಇದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

.ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ. ಕರ್ನಾಟಕ ರಾಜ್ಯಕ್ಕೆ ಒಲಿದು ಬಂದಿದ್ದು,ಶಿವಮೊಗ್ಗದಲ್ಲಿ ವಿಶ್ವವಿದ್ಯಾನಿಲಯ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಆರಗಾ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾತನಾಡಿದ ಗೃಹ ಸಚಿವರು, ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಶಿವಮೊಗ್ಗ ನಗರಕ್ಕೆ ಮಂಜೂರಾಗಿದೆ ಎಂದು ಹೇಳಿದರು. ನಾನು ಮತ್ತು ಹಿರಿಯ ಅದಿಕಾರಿಗಳು ಕಳೆದ ಎರಡು ತಿಂಗಳ ಹಿಂದೆ ಅಹಮದಾಬಾದ್ ನ ಈ  ಯುನಿವರ್ಸಿಟಿಗೆ ಭೇಟಿ ಕೊಟ್ಟಿದ್ದೆವು. ಆ ಸಂದರ್ಭದಲ್ಲಿ ಮಾತುಕತೆಯಾಗಿ ಕರ್ನಾಟಕ ರಾಜ್ಯಕ್ಕೆ ಯುನಿವರ್ಸಿಟಿ ಕೊಡುವುದಾಗಿ ಹೇಳಿದ್ದರು.ನಾವು ಒಪ್ಪಿಕೊಂಡಿದ್ದೆವು. ಯುನಿವರ್ಸಿಟಿಯನ್ನು ಶಿವಮೊಗ್ಗಕ್ಕೆ ತರಬೇಕೆಂದು ನನ್ನ ಆಸೆಯಾಗಿತ್ತು. ಅದರಂತೆ ಶಿವಮೊಗ್ಗಕ್ಕೆ ಸ್ಯಾಂಕ್ಷನ್ ಮಾಡಿಸಿದ್ದೇನೆ ಎಂದು ಆರಗಾ ಜ್ಞಾನೇಂದ್ರ ಹೇಳಿದ್ದಾರೆ.

ಶಿವಮೊಗ್ಗದ ನವಿಲೆ ಗ್ರಾಮದ 112 ನೇ ಸರ್ವೆ ನಂಬರ್ ನಲ್ಲಿ ಜಿಲ್ಲಾಧಿಕಾರಿಗಳು ಎಂಟು ಎಕರೆ ಭೂಮಿಯನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ತಾತ್ಕಾಲಿಕವಾಗಿ ಈ ಅಕಾಡಿಮಿಕ್ ವರ್ಷದಿಂದಲೇ ಯುನಿವರ್ಸಿಟಿಯನ್ನು ಪ್ರಾರಂಭಿಸಲಾಗುವುದು.ಅದಕ್ಕೆ ಬೇಕಾದಂತ ಕಟ್ಟಡವನ್ನು ರಾಗಿಗುಡ್ಡದಲ್ಲಿ ನೀಡಿದ್ದಾರೆ. ಸೋಷಿಯಲ್ ವೆಲ್ ಫೇರ್ ಡಿಪಾರ್ಟ್ ಮೆಂಟ್ ಗೆ ಸೇರಿದ ಖಾಲಿ ಕಟ್ಟಡವನ್ನು ನೀಡಿದ್ದಾರೆ. ಒಂದು ತಿಂಗಳ ಹಿಂದೆ ಅಹಮ್ಮದಾಬಾದ್ ನ ರಕ್ಷಾ ಯುನಿವರ್ಸಿಟಿಯ ಕುಲಪತಿಗಳು ಬಂದು ಈ ಜಾಗ ಪರಿಶೀಲಿಸಿ ಒಪ್ಪಿಕೊಂಡು ಹೋಗಿದ್ದಾರೆ. ರಾಜ್ಯ ಸರ್ಕಾರ ಯುನಿವರ್ಸಿಟಿ ಹೆಸರಿಗೆ ಖಾತೆಯನ್ನು ಮಾಡಿಕೊಡಲು ಒಪ್ಪಿದೆ ಎಂದು ಗೃಹ ,ಸಚಿವರು ಹೇಳಿದ್ದಾರೆ.

 

ಈ ಯುನಿವರ್ಸಿಟಿ ಬೇರೆ ಯುನಿವರ್ಸಿಟಿಗಿಂತ ಪ್ರತ್ಯೇಕ. ಡಿಪ್ಲಮೋ ಮತ್ತು ಡಿಗ್ರಿ ಕೋರ್ಸ್ ಗಳನ್ನು ಯುನಿವರ್ಸಿಟಿ ಒಳಗೊಂಡಿದೆಯ

ಪೊಲೀಸ್ ಮುಂತಾದ ಎಲ್ಲಾ ಭದ್ರಾತಾ ವಿಭಾಗದಲ್ಲಿ ಕೆಲಸ ಮಾಡುವಂತವರಿಗೆ ಬೋದನೆ ಮಾಡುವಂತ  ಯುನಿರ್ಸಿಟಿ ಇದಾಗಿದೆ.  ವಿಶೇಷವಾಗಿ ಡಿಪ್ಲಮೋ ಇನ್ ಪೊಲೀಸ್ ಸೈನ್ಸ್, ಬೇಸಿಕ್ ಕೋರ್ಸ್ ಇನ್ ಕಾರ್ಪೋರೇಟ್ ಸೆಕ್ಯುರಿಟಿ ಮ್ಯಾನೇಜ್ ಮೆಂಟ್, ಡಿಪ್ಲಮೋ ಇನ್ ಕ್ರಿಮಿನಲ್ ಇನ್ ವೆಸ್ಟಿಗೇಷನ್, ಪಿಜಿ ಡಿಪ್ಲಮೋ ಇನ್ ಸೈಬರ್ ಸೆಕ್ಯುರಿಟಿ ಅಂಡ್ ಸೈಬರ್ ಲಾ, ರೋಡ್ ಟ್ರಾಫಿಕ್ ಸೇಪ್ಟಿ ಮ್ಯಾನೇಜ್ ಮೆಂಟ್, ಟೂ ವೀಕ್ ಸೆರ್ಟಿಫಿಕೇಟ್ ಪ್ರೋಗ್ರಾಮ್ ಆನ್ ಫಿಸಿಕಲಿ ಫಿಟ್ ನೆಸ್ ಮ್ಯಾನೇಜ್ ಮೆಂಟ್, ಪಿಜಿ ಡಿಪ್ಲಮೋ ಇನ್ ಕೋಸ್ಟಲ್ ಸೆಕ್ಯುರಿಟಿ, ಲಾ ಇನ್ ಪೋರ್ಸ್ ಮೆಂಟ್ ಎಂಬ ಕೋರ್ಸ್ ಗಳು  ಕಲಿಕೆಯ ವಿಷಯಗಳಾಗಿವೆ.

ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ದಿಕ್ಕನ್ನು ತೋರಿಸುವ ಕೋರ್ಸ್ ಇದಾಗಲಿದೆ

ಇದು ರಾಜ್ಯ ಮಟ್ಟದ ಯುನಿವರ್ಸಿಟಿಯಾಗಿದೆ. ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ದಿಕ್ಕನ್ನು ತೋರಿಸುವ ಕೋರ್ಸ್ ಇದಾಗಲಿದೆ. ಬೇರೆ ಪದವಿಗಳನ್ನು ಮಾಡುವುದು ಇದ್ದೇ ಇದೆ. ಈ ರೀತಿ ಜಾಬ್ ಓರಿಯೆಂಟೆಡ್ ಕೋರ್ಸ್ ಗಳನ್ನು ಮಾಡುವುದರಿಂದ ಬೇಗ ಉದ್ಯೋಗ ಲಭ್ಯವಾಗಲಿದೆ. ಪೊಲೀಸ್ ಇಲಾಖೆಗೆ ಪ್ರತಿವರ್ಷ ನೇಮಕಾತಿ ನಡೆಯುತ್ತದೆ. ಪ್ರತಿವರ್ಷ ಕನಿಷ್ಠವೆಂದರೂ ಐದು ಸಾವಿರ ಮಂದಿಯನ್ನು ನೇಮಕಾತಿ ಮಾಡುತ್ತಿರುತ್ತೇವೆ. ಹಾಗೆಯೇ ಮಿಲಿಟರಿಯಲ್ಲಿ ರೆಗ್ಯುಲರ್ ನೇಮಕಾತಿ ಇರುತ್ತದೆ. ಈ ಹಿನ್ನಲೆಯಲ್ಲಿ ಈ ಯುನಿವರ್ಸಿತಿ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಆರಗಾ ಜ್ಞಾನೇಂದ್ರ ಹೇಳಿದ್ದಾರೆ. ಕೇಂದ್ರ ಸರ್ಕಾರದ ಅದೀನದಲ್ಲಿರುವ ರಕ್ಷಾ ಯುನಿವರ್ಸಿಟಿಯ ಎರಡನೇ  ಯುನಿವರ್ಸಿಟಿ ಶಿವಮೊಗ್ಗದಲ್ಲಾಗಿದೆ. ಈ ಕೋರ್ಸ್ ಗಳನ್ನು ಸೆಕ್ಯುರಿಟಿ ವಿಭಾಗದಲ್ಲಿ ಮಾನ್ಯತೆ ಮಾಡಲಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಪೊಲೀಸ್ ಟ್ರೈನಿಂಗ್ ಹೆಚ್ಚಿನ ಅವಶ್ಯಕತೆ ಇರೋದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಈ ಕೋರ್ಸ್ ಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಬರುತ್ತದೆ ಎಂದು ಆರಗಾ ಜ್ಞಾನೇಂದ್ರ ಹೇಳಿದ್ದಾರೆ.

 ತಾತ್ಕಾಲಿಕ ಅಕ್ಯಾಡೆಮಿಕ್ ವರ್ಷ ಈ ವರ್ಷದ ಮೇ 23 ರಂದು ಪ್ರಾರಂಭವಾಗಲಿದೆ. ಅಕಾಡೆಮಿಕ್ ಸೀಸನ್ ಜೂನ್ 23 ರಿಂದ ಪ್ರಾರಂಭವಾಗಲಿದೆ.