ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ! ಪ್ರೇಮಿಗಳ ದಿನ ವಿಶೇಷ: JP EXCLSUIVE

30 years ago, a photographer from Jog Falls, saved the young woman who had tried to commit suicide, fell in love with her and married her. Valentine's Day Special: JP EXCLSUIVE

ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ!  ಪ್ರೇಮಿಗಳ ದಿನ ವಿಶೇಷ:  JP EXCLSUIVE
ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ! ಪ್ರೇಮಿಗಳ ದಿನ ವಿಶೇಷ: JP EXCLSUIVE

ಇದೊಂದು ಪ್ರೇಮ ಕಾವ್ಯ. ಆತ್ಮಹತ್ಯೆಯ ಹಾದಿ ಹಿಡಿದಿದ್ದ,ಹುಡುಗಿಗೆ ಜೀವನೋತ್ಸಾಹ ತುಂಬಿ ನಂತರ ಪ್ರೀತಿಯ ಜಲಧಾರೆ ಎರೆದು, ಬಾಳಿಗೆ ಬೆಳಕಾದ ಸುಂದರ ಕಾವ್ಯ. ಛಾಯಗ್ರಾಹಕ ವೃತ್ತಿ ಮಾಡಿಕೊಂಡಿದ್ದ ರಾಮು ಜೋಗ ಜಲಪಾತದಲ್ಲಿ ಸಾಯಲು ಬಂದಿದ್ದ,ಯುವತಿ ಲಕ್ಷ್ಮಿಗೆ ಬಾಳು ನೀಡಿ ಯುವಜನರಿಗೆ ಮಾದರಿಯಾದ ಪ್ರೇಮ ಕಥೆ.ಈ ಮದುವೆಯಾಗಿ 30 ವರ್ಷಗಳು ಕಳೆದಿದ್ದು,ಮಕ್ಕಳೊಂದಿಗೆ ಆದರ್ಶ ಜೀವನ ಸಾಗಿಸುತ್ತಿದ್ದಾರೆ.ಪ್ರೇಮಿಗಳ ದಿನದಂದು ತ್ಯಾಗದ ಪ್ರತೀಕವಾದ ಪ್ರೀತಿಯ ಕುರಿತು ವಿಶೇಷ ವರದಿ. 

ಪ್ರೀತಿ ವರ್ಣಾತೀತ.ಇಲ್ಲಿ ಒಬ್ಬೊಬ್ಬರದೂ,ವಿಭಿನ್ನ ಸವಿ. ಅರಿವಿಲ್ಲದೆ ಚಿಗುರೊಡೆವ ಪ್ರೀತಿ, ಸಂಗಾತಿಗಾಗಿ ಹಪಹಪಿಸುವ ಹೃದಯ. ನಿಜಕ್ಕೂ ಪ್ರೀತಿ ಒಂದು ಅಮಲು. ಆದರೆ ಪ್ರೀತಿಯ ಪರಿಕಲ್ಪನೆ ಇಂದಿನ ಯುವ ಪೀಳಿಗೆಯಲ್ಲಿ ವಿಭಿನ್ನ ದೃಷ್ಠಿಕೋನ ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಆದರ್ಶ ಪ್ರೀತಿ ಯಾರದೆಂಬ ಹುಡುಕಾಟವನ್ನು ಮನಸ್ಸು ಬಯಸದೆ ಇರಲಾರದು. ಹೌದು ಪ್ರೀತಿಗೆ ವಯಸ್ಸಿನ ತಾರತಮ್ಯವಿಲ್ಲ.ಪ್ರೇಮಿಗಳು ಪ್ರೀತಿಸುತ್ತಾರೆ.ಪ್ರೀತಿಸಿ ಮದುವೆಯಾಗುತ್ತಾರೆ.

ಮತ್ತೆ ಕೆಲವು ಪ್ರೇಮ ಪ್ರಕರಣಗಳು ಮದುವೆಗೂ ಮುನ್ನವೇ ಕ್ಲೈಮಾಕ್ಸ್ ತಲುಪಿರುತ್ತವೆ. ಇಂದಿನ ಯವ ಪೀಳಿಗೆ ಪ್ರೀತಿ ಕ್ಷಣಿಕ ಎಂಬ ಮನೋಭಾವ ರೂಢಿಸಿಕೊಂಡಂತಿದೆ. ಪ್ರೀತಿಸಿ ಮದುವೆಯಾದರೂ ಬಾಳ ನೌಕೆಯನ್ನು ಬಹುದೂರ ದೂಕಲು ಅವರ ಪ್ರೀತಿಯ ಊರುಗೋಲಿನಿಂದ ಸಾಧ್ಯವಾಗುವುದಿಲ್ಲ. ಪರಿಣಾಮ ಡಿವೋರ್ಸ್ ನಂತಹ ಕವಲೊಡೆದ ದಾರಿಯಲ್ಲಿ ದಾಂಪತ್ಯದ ಕೊನೆಯಾಗುತ್ತದೆ.ಎಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಕಷ್ಟ ಕಾರ್ಪಣ್ಯಗಳಲ್ಲೂ ಅಂಜದೆ ಜಗ್ಗದೆ ಬದುಕಿಗೆ ಅರ್ಥಕೊಡುವ ಪ್ರೀತಿ ಪ್ರಕರಣಗಳ ವಿರಳ.ಇಂತಹ ವಿರಾಳಾತಿ ವಿರಳ ಪ್ರೇಮ ಪ್ರಕರಣದಲ್ಲೊಂದು,ರೋಮಾಂಚಕ ಪ್ರೇಮ ಪ್ರಕರಣವನ್ನು ನಿಮಗೆ ತಿಳಿಯ ಪಡಿಸುವುದೇ ನಮ್ಮ ಮಲೆನಾಡು ಟುಡೆಯ ಪ್ರಯತ್ನ.

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಜೋಗ ಜಲಪಾತಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಯುವತಿಗೆ ಬಾಳುಕೊಟ್ಟ ಪೋಟೋಗ್ರಾಫರ್ ಒಬ್ಬರ ಪ್ರೇಮ ಪುರಾಣ.

ಜೋಗ ಜಲಪಾತ ಎಂದೊಂಡನೆ ತಕ್ಷಣಕ್ಕೆ ನೆನಪಾಗುವುದು ರಾಜಾ ರಾಣಿ ರೋರರ್ ರಾಕೇಟ್ ಜಲಧಾರೆಗಳು,ಜಲಪಾತದ ಸುತ್ತಮುತ್ತಲಿನ ನಿಸರ್ಗ ಸೌಂದರ್ಯ.ಕಡಿದಾದ ಕಲ್ಲು ಬಂಡೆಗಳು,ಮೈ ಜುಮ್ಮೆನೆಸುವ ಪ್ರಪಾತ.ಸುಮಾರು 960 ಅಡಿಗಳಿಂದ ಬೋರ್ಗರೆವ ಶರವಾತಿಯನ್ನು ನೋಡುತ್ತಿದ್ದರೆ ಎಂತವರು ನಿಬ್ಬೆರಗಾಗುತ್ತಾರೆ.ಮಳೆಗಾಲದಿಂದ ಬೇಸಿಗೆ ಆರಂಭದವರೆಗೂ ಜೋಗ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ಕೈಬೀಸಿ ಕರೆಯುತ್ತದೆ...ಜೋಗ ಜಲಪಾತವನ್ನು ನೋಡಿ ಸೌಂದರ್ಯವನ್ನು ಕಣ್ತುಂಬಿಕೊಂಡು ಹೋಗುವ ಪ್ರವಾಸಿಗರು ಹೆಚ್ಚು.ಅಂತೆಯೇ ಕೆಲವರು ಬಾರವಾದ ಮನಸ್ಸುಗಳನ್ನೊತ್ತು ಬಂದು ಇದೇ ಸೌಂದರ್ಯದಲ್ಲಿ ಲೀನವಾಗುವವರು ಹೆಚ್ಚು.ಹೀಗೆ ಭಾರವಾದ ಮನಸ್ಸನ್ನೊತ್ತು ಬೆಂಗಳೂರಿನಿಂದ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಯುವತಿಯ ಕಥೆಯಲ್ಲಿ ಕಾರ್ಗಲ್ಲಿನ ಜಲಪಾತ ಬದುಕಿನ ಬೆಳಕಿನ ದರ್ಶನ ಮಾಡಿಸಿತ್ತು. 

ನಾವು ಹೆಳಲು ಹೊರಟಿರುವ ಪ್ರೇಮಕಥೆಯ ಹೀರೋ ..,ರಾಮು... ,ಮೂಲತಃ ಜೋಗ ಸಮೀಪವಿರುವ ಹಳ್ಳಿಯೊಂದರಲ್ಲಿ  ಈತನ ವಾಸ. ರಾಮು ವೃತ್ತಿಯಲ್ಲಿ ಪೋಟೋಗ್ರಾಫರ್.ಜೋಗಪಾಲ್ಸ್ ಗೆ ಪ್ರಥಮ ಪೋಟೋಗ್ರಾಫರ್ ಎಂಬ ಹೆಗ್ಗಳಿಕೆಯೂ ಇವರದ್ದು. ರಾಮು,ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರ ಭಾವ ಚಿತ್ರ ತೆಗೆದು ಅವರ ಮನೆಗೆ ಪೋಸ್ಟ್ ಮಾಡುವ ಕೆಲಸಮಾಡುತ್ತಿದ್ದರು.ಹೀಗೆ ಪೋಟೋಗ್ರಾಫಿ ಮಾಡುತ್ತಿದ್ದ ರಾಮು ಸರಳ ಜೀವನನ್ನು ಸಾಗಿಸುತ್ತಿದ್ದರು. ಜೋಗದ ರಮಣೀಯತೆಯನ್ನು ಕ್ಯಾಮರಾದಲ್ಲೇ ಸೆರೆಹಿಡಿಯುತ್ತಿದ್ದ ರಾಮು ಕಣ್ಣಿಗೆ ಅಂದೊಮ್ಮೆ ರಾಣಿ ಪಾಲ್ಸ್ ಬಳಿ ಯುವತಿಯೊಬ್ಬಳು ಕಾಣುತ್ತಾಳೆ.

1993 ರಲ್ಲಿ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬೆಂಗಳೂರು- ಭಟ್ಕಳ ಮಾರ್ಗವಾಗಿ ಬಂದ ಬಸ್ ಜೋಗ ಬಸ್ ನಿಲ್ದಾಣಕ್ಕೆ ಬಂದಾಗ, ಬಸ್ ನಿಂದ ಓರ್ವ ಯುವತಿ ಇಳಿಯುತ್ತಿದ್ದಂತೆ ಜೋಗ ಪಾಲ್ಸ್ ಕಡೆಗೆ ದಾವಂತದಿಂದ ಓಡಲು ಪ್ರಾರಂಭಿಸಿದಳು. ಅಲ್ಲೇ ಪೋಟೋ ತೆಗೆಯುತ್ತಿದ್ದ ರಾಮುಗೆ ಯುವತಿ ರಾಣಿ ಪಾಲ್ಸ್ ಕಡೆಗೆ ಹೋಗುತ್ತಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿತು. ಆಕೆ ಪಾಲ್ಸ್ ನೋಡುವುದಕ್ಕೆ ಹೋಗುತ್ತಿಲ್ಲ.ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಎಂಬುದು ತಕ್ಷಣಕ್ಕೆ ಮನವರಿಕೆಯಾಯಿತು. ತಕ್ಷಣ ಪೋಟೋ ತೆಗೆಯುವುದನ್ನು ಬಿಟ್ಟು ರಾಮು ಯುವತಿ ಹೋಗುತ್ತಿದ್ದ ಮಾರ್ಗವನ್ನು ಹಿಂಬಾಲಿಸಿದರು.ಇನ್ನೇನು ಕೆಲವೇ ಕ್ಷಣಗಳಲ್ಲಿ ಗತಿಸಬಹುದಾದ ಅವಘಡ ಸಿನಿಮೀಯ ರೀತಿಯಲ್ಲಿ ತಪ್ಪಿ ಹೋಯ್ತು. ಮುಂದೇನಾಯ್ತು ಎಂಬುದು ನಿಜಕ್ಕೂ ಕುತೂಹಲವನ್ನುಂಟುಮಾಡುತ್ತದೆ. 

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಹೀಗೆ ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದ ಯುವತಿಯ ಹೆಸರು ಲಕ್ಷ್ಮಿ.(ಹೆಸರು ಬದಲಿಸಿದೆ) ಕುಟುಂಬ ಪರಿವಾರದೊಂದಿಗೆ ಒಮ್ಮೆ ಜೋಗವನ್ನು ನೋಡಲು ಬಂದಿದ್ದ ಲಕ್ಷ್ಮಿ,ಆತ್ಮಹತ್ಯೆ ಮಾಡಿಕೊಳ್ಳಲು ಜೋಗವನ್ನೇ ಆಯ್ಕೆಮಾಡಿಕೊಂಡಿದ್ದರು. ಮನೆಯಲ್ಲಿ ಪೋಷಕರು ನೀಡುತ್ತಿದ್ದ ಹಿಂಸೆಗೆ ಲಕ್ಷ್ಮಿಗೆ ಬದುಕೇ ಬೇಡವಾಗಿತ್ತು. ತಂದೆತಾಯಿ ಚುಚ್ಚು ಮಾತುಗಳು ಲಕ್ಷ್ಮಿಯ ಬದುಕಿಗೆ ವಿದಾಯ ಹೇಳುವಂತೆ ಮಾಡಿದ್ದವು. ಮಾನಸಿಕವಾಗಿ ಜರ್ಜರಿತಳಾಗಿದ್ದ ಲಕ್ಷ್ಮಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಜೋಗ ಜಲಪಾತವನ್ನು.

ಜೋಗ ಜಲಪಾತದ ಮೇಲ್ತುದಿಯಲ್ಲಿ ನಿಂತು ಕ್ಷಣಕಾಲ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ದರಿಸಿದರೆ ಮುಗಿತು.ಪ್ರಾಣ ಎಂಬುದು ದೇವರು ಬೇಡವೆಂದರೂ ಉಳಿಯಲು ಸಾಧ್ಯವಿಲ್ಲ.ಹೀಗಾಗಿ ಲಕ್ಷ್ಮಿ ಮನದಲ್ಲೂ ಇಲ್ಲೇ ಸಾಯುವ ಯೋಚನೆಯಿತ್ತು. ಹೀಗಾಗಿ ಬೆಂಗಳೂರು ಬಸ್ ಬತ್ತಿದ ಲಕ್ಷ್ಮಿ ಜೋಗಕ್ಕೆ ಸೀದಾ ಬಸ್ ಹತ್ತುತ್ತಾಳೆ. ಆದರೆ ಅವಳ ಬದುಕಿಗೆ ಆಸರೆಯಾಗಬಲ್ಲ ವ್ಯಕ್ತಿಯನ್ನೊಬ್ಬನನ್ನು ದೇವರು ಇಲ್ಲೇ ಹುಡುಕಿಟ್ಟಿದ್ದು ನಿಜಕ್ಕೂ ಅಚ್ಚರಿ. ಹೀಗೆ ಸಾಯಲು ಬಂದ ಲಕ್ಷ್ಮಿಯ ಪೂರ್ವಾಪರ ವಿಚಾರಿಸಿದ ರಾಮು, ಲಕ್ಷ್ಮಿಯನ್ನು ತನ್ನ ಮನೆಗೆ ಕೆರೆದುಕೊಂಡು ಹೋಗುತ್ತಾರೆ, ನಂತರ ಬೆಂಗಳೂರಿಗೆ ವಾಪಾಸ್ಸು ಕಳಿಸಲು ರಾಮು ನಿರ್ದರಿಸುತ್ತಾರೆ. ಆದರೆ ರಾಮುವಿನ ,ಮನೆಗೆ ವಾಪಸ್ಸು ಕಳುಹಿಸುವ ಪ್ರಯತ್ನ ಪಟ್ಟಾಗಲೆಲ್ಲಾ  ಲಕ್ಷ್ಮಿ ಮನೆಗೆ ಹೋಗಲು ನಿರಾಕರಿಸುತ್ತಾರೆ. ಸತತ ಎರಡು ವರ್ಷಗಳ ಕಾಲ ರಾಮು ಮನೆಯಲ್ಲಿ ಇದ್ದ ಲಕ್ಷ್ಮಿಗೆ ರಾಮು ನಲ್ಲಿ ಪ್ರೀತಿ ಚಿಗುರೊಡೆಯುತ್ತದೆ. ಲಕ್ಷ್ಮಿಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡ ರಾಮು ನಂತರದ ದಿನಗಳಲ್ಲಿ ಆಕೆಗೆ ಬದುಕುವ ಆಸೆಯನ್ನು ಚಿಗುರೊಡೆಯುವಂತೆ ಮಾಡುತ್ತಾರೆ.ಲಕ್ಷ್ಮಿಗೆ ಬಾಳುಕೊಡಲು ಮುಂದಾಗುತ್ತಾರೆ.

ಲಕ್ಷ್ಮಿಯ ಜಾತಿ ಕುಲವನ್ನು ತಿಳಿಯದೆ,ಆಸ್ತಿಪಾಸ್ತಿ ವರದಕ್ಷಿಣೆಗೆ ಆಸೆಪಡೆದೆ ರಾಮು, ಲಕ್ಷ್ಮಿಯನ್ನು ಮದುವೆಯಾಗಲು ನಿರ್ಧರಿಸುತ್ತಾರೆ.ಇವರಿಬ್ಬರು ಸಾಂಪ್ರಾದಾಯಿಕವಾಗಿ ಹಿರಿಯರ ಸ್ನೇಹಿತರ ಸಮ್ಮುಖದಲ್ಲಿ ಲಗ್ನವಾಗುತ್ತಾರೆ.ಈಗ ಈ ಜೋಡಿ ಮದುವೆಯಾಗಿ 30 ವರ್ಷ ಕಳೆದಿದೆ ಇವರಿಬ್ಬರ ಪ್ರೇಮ ಕಾವ್ಯವನ್ನು ಈಗಲೂ ಸಹ  ಜೋಗದ ಗೆಳೆಯರು ನೆನೆಯುತ್ತಲೇ ಇರುತ್ತಾರೆ. 

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ರಾಮು ಕೇವಲ ಪ್ರೇಮಿಯಲ್ಲ.ಆತನಿಗೊಂದು ಪೇಸ್ ರೀಡಿಂಗ್ ಶಕ್ತಿಯಿದೆ. ಜೋಗಕ್ಕೆ ಬರುವವರನ್ನು ಅವರ ಮುಖಭಾವದಲ್ಲೇ ಇವರು ಜೋಗ ನೋಡಲಿಕ್ಕೆ ಬಂದಿದ್ದಾರೋ ಅಥವಾ ಜಲಪಾತಕ್ಕೆ ಹಾರಲಿಕ್ಕೆ ಬಂದಿದ್ದೀರೋ ಎಂಬುದನ್ನು ಗ್ರಹಿಸಬಲ್ಲ. ಹೀಗಾಗಿ 7-9 ಪ್ರೇಮಿಗಳನ್ನು ಬದುಕಿಸಿದ್ದಾರೆ.ಅಲ್ಲದೆ ಜೋಗ  ಪ್ರಪಾತದಲ್ಲಿ  ಸಿಲುಕಿರುವ  ಹೆಣಗಳನ್ನು ರಾಮು  ಮೇಲಕ್ಕೆತ್ತುವ ಕೆಲಸ ಮಾಡುತ್ತಿದ್ದರು.ಕಂದಕಗಳಲ್ಲಿ ಕೆಳಗೆ ನೀರಿನಲ್ಲಿ ಸಿಲುಕಿದ್ದ ಹಲವಾರು ಹೆಣಗಳನ್ನು ರಾಮಕೃಷ್ಣ ಮೇಲಕ್ಕೆತ್ತಿದ್ದಾರೆ. ರಾಮು ದಂಪತಿಗೆ ಮೂವರು ಮಕ್ಕಳಿದ್ದು ಎಲ್ಲರೂ ಪ್ರತಿಭಾನ್ವಿತರಾಗಿದ್ದಾರೆ.ಇವರ ಕುಟುಂಬದಲ್ಲಿ  ಪ್ರೀತಿಗೇನು ಕೊರತೆಯಿಲ್ಲ. ಬಡತನ ಇವರ ವೈವಾಹಿಕ ಜೀವನಕ್ಕೆ ಎಂದು  ತೊಡಕಾಗಿಲ್ಲ.ನಾನು ಬಡವ, ಆಕೇ ಬಡವಿ,ನಮ್ಮ ಪ್ರೀತಿಗೆ ಬಡತನವಿಲ್ಲ ಎಂದು ಕಷ್ಟ ಸುಖಗಳನ್ನು ಸಮನಾಗಿ ಉಂಡು ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸುತ್ತಿದ್ದಾರೆ. ಕಲ್ಲಾದ ಲಕ್ಷ್ಮಿಯ ಬಾಳು ಹೂವಾಗಿ ಅರಳಿದೆ.ತನ್ನ ಮುಂದಿನ ಭವಿಷ್ಯವನ್ನು ಲೆಕ್ಕಿಸದೆ ಪರಿಸ್ಥಿತಿಗೆ ಸೋತು,ಲಕ್ಷ್ಮಿಗೆ ಬಾಳು ನೀಡಿದ ರಾಮುನ ತ್ಯಾಗ ನಿಜಕ್ಕೂ ಶ್ಲಾಘನೀಯ.ಬಾಹ್ಯ ಸೌಂದರ್ಯವನ್ನೇ ಪ್ರೀತಿ ಪ್ರೇಮ ಎಂದು ಬೀಗುವ ಕುರುಡು ನಂಬಿಕೆಯ ಪ್ರೇಮಿಗಳು ಆನಂತರ ಪ್ರೀತಿಯನ್ನೇ ಬಲಿಕೊಡುತ್ತಾರೆ.ಇಂತವರ ನಡುವೆ ರಾಮು ದಂಪತಿ ಎಲ್ಲರಿಗೂ ಮಾದರಿಯಾಗುತ್ತಾರೆ.

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com