ಯುವ ರಾಜಕುಮಾರ್ ಡಿವೋರ್ಸ್ ಕೇಸ್‌ನಲ್ಲಿ ಬಂತು ಅಫೇರ್ ವಿಚಾರ
Yuvarajkumar's lawyer Cyril Prasad held a press conference following the news of Yuvarajkumar divorce. He accused Sridevi,

SHIVAMOGGA | MALENADUTODAY NEWS | Jun 11, 2024 ಮಲೆನಾಡು ಟುಡೆʼ
ಯುವ ರಾಜಕುಮಾರ್ ಕುಟುಂಬ ಡಿವೋರ್ಸ್‌ಗೆ ಅರ್ಜಿ ಹಾಕಿರುವ ಪ್ರಕರಣದಲ್ಲಿ ಇದೀಗ ಅಫೇರ್ ವಿಚಾರ ಹೊರಬಿದ್ದಿದೆ. ಈ ಸಂಬಂಧ ಮಾತನಾಡಿರುವ ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಅನೈತಿಕ ಸಂಬಂಧ ಹೊಂದಿದ್ದರು. ಜೊತೆಗೆ ಡಾ.ರಾಜ್‌ಕುಮಾರ್ ಅಕಾಡೆಮಿಯ 3 ಕೋಟಿ ರೂಪಾಯಿಗೂ ಹೆಚ್ಚಿನ ದುಡ್ಡನ್ನು ತೆಗೆದುಕೊಂಡಿದ್ದಾರೆ' ಎಂದು ಆರೋಪ ಮಾಡಿದ್ದಾರೆ.
ಶ್ರೀದೇವಿಗೆ ಭಾರತದಲ್ಲಿರುವುದು ಇಷ್ಟವಿರಲಿಲ್ಲ. ನನ್ನ ಕಕ್ಷಿದಾರನನ್ನು ಅಮೆರಿಕಕ್ಕೆ ಬಂದು ನೆಲೆಸುವಂತೆ ಒತ್ತಾಯಿಸುತ್ತಿದ್ದರು. ಭಾರತದಲ್ಲಿ ಮಗುವಿಗೆ ತಾಯಿಯಾಗಲು ಇಷ್ಟ ವಿಲ್ಲ. ಅಮೆರಿಕದಲ್ಲೇ ತಾಯಿಯಾಗಬೇಕು. ಅದಕ್ಕೆ ಒಪ್ಪದೇ ಹೋದರೆ ಗೆಳೆಯನಿಂದ ಸ್ಪರ್ಮ್ ಪಡೆದು ಮಕ್ಕಳನ್ನು ಪಡೆಯುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಅವರಿಗೆ ರಾಧಯ್ಯ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧವಿತ್ತು. ಮದುವೆಗೆ ಮೊದಲೂ ಸಂಬಂಧ ಇತ್ತು. ಮದುವೆಯ ನಂತರ ರಾಧಯ್ಯ ಪತ್ನಿ ಮನೆಯಿಂದ ಹೊರಗೆ ಹೋದ ಮೇಲೆ ಅವರಿಬ್ಬರು ಸೇರುತ್ತಿದ್ದರು. ರಾತ್ರಿ ವೇಳೆ ಬಾಯ್‌ಫ್ರೆಂಡ್ ಮನೆಗೆ ಹೋಗುತ್ತಿದ್ದ ಆಕೆ ಬೆಳಿಗ್ಗೆ ಮನೆಗೆ ವಾಪಸ್ಸು ಬರುತ್ತಿದ್ದರು' ಎಂದು ವಕೀಲರು ಆರೋಪಿಸಿದ್ದಾರೆ.
ನಾವು ನೀಡಿದ ಲೀಗಲ್ ನೋಟಿಸ್‌ಗೆ ಆಕೆ ಯುವ ರಾಜ್‌ಕುಮಾರ್‌ಗೆ ಸಹ ನಟಿ ಜೊತೆ ಸಂಬಂಧ ಇದೆ ಎಂದು ಹೇಳಿದ್ದಾರೆ. ಆಕೆ ಲೀಗಲ್ ನೋಟಿಸ್‌ನಲ್ಲಿ ಯುವ ಅವರಿಗೆ ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದೂ ಆರೋಪಿಸಿದ್ದಾರೆ. ಸೆಕ್ಸ್‌ನಲ್ಲಿ ಸಮಸ್ಯೆ ಇದೆ ಎಂದು ಹೇಳಿದ ಬಳಿಕ ಅನೈತಿಕ ಸಂಬಂಧ ಆರೋಪ ಮಾಡಲು ಹೇಗೆ ಸಾಧ್ಯ? ಆಕೆ ರಾಧಯ್ಯ ಅವರಿಂದ ಮಗು ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದರು' ಎಂದೂ ಸಹ ದೂರಿದ್ದಾರೆ
Yuvarajkumar's lawyer Cyril Prasad held a press conference following the news of Yuvarajkumar's divorce. He accused Sridevi, Yuvarajkumar's wife, of having an extramarital affair