ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

What did Minister Madhu Bangarappa say about the incident in Ragigudda?ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ರಾಗಿಗುಡ್ಡದಲ್ಲಿ ನಡೆದ ಘಟನೆ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS’  

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ಪೊಲೀಸರ ಮೇಲೆ ಕಲ್ಲು ತೂರಾಟದ ಬಗ್ಗೆ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ. 

ಹಬ್ಬಗಳ ಆಚರಣೆ ಬಗ್ಗೆ ಮೊದಲೇ ಶಾಂತಿಯುತ ಸಭೆ ನಡೆಸಿದ್ದೆವು. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯು ವಿಜ್ರಂಭಣೆಯಿಂದ ನಡೆದಿತ್ತು. ಈದ್ ಮಿಲಾದ್ ಮೆರವಣಿಗೆಯು ಸಡಗರದಿಂದ ನಡೆದಿತ್ತು. ಈ ನಡುವೆ ಕೆಲವು ಕಿಡಿಗೇಡಿಗಳು ಶಾಂತಿ ಕದಡಿಸುವ ನಿಟ್ಟಿನಲ್ಲಿ ಕಲ್ಲು ತೂರಾಟ ನಡೆಸಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ಅನಿವಾರ್ಯವಾಗಿ ಆಕ್ಷನ್​ ತೆಗೆದುಕೊಂಡಿದ್ದಾರೆ. 

ಕೆಲವರು ಮನೆಗೆ ನುಗ್ಗಿ ಹಲ್ಲೆ ಮಾಡಿದ ಬಗ್ಗೆ ವರದಿಯಾಗಿದೆ. ಸುಮಾರು 12 ಮಂದಿಗೆ ಗಾಯವಾಗಿದೆ. ಮೂರು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಘಟನೆ ಸಂಬಂಧ 50 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಡಿಯೋಗಳನ್ನ ರೆಕಾರ್ಡ್​ ಮಾಡಿದ್ದು, ಅದರ ಆಧಾರದ ಮೇಲೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ರಾಗಿಗುಡ್ಡದಲ್ಲಿ ಮಾತ್ರ ಕೆಲವರ ಸ್ವಾರ್ಥಕ್ಕೆ ಘಟನೆ ನಡೆದಿದ್ದು, ಈ ಸಂಬಂಧ ಕಾನೂನು ಉಲ್ಲಂಘಿಸಿದವರ ವಿರುದ್ಧ ನೂರಕ್ಕೆ ನೂರು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ. ಎರಡು ಎರಿಯಾಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಸಾಮಾನ್ಯ ಜನರಿಗೆ ತೊಂದರೆ ಆಗಬಾರದು ಎಂದು ತಿಳಿಸಿದ್ದೇನೆ. ಕಿಡಿಗೇಡಿಗಳ ಮಾನಸಿಕತೆಯಿಂದ ಈ ಕೃತ್ಯ ನಡೆದಿದ್ದು, ಸರ್ಕಾರ ಕಾನೂನು ಪರವಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!