ಇಂಜಿನಿಯರ್​ ವಿದ್ಯಾರ್ಥಿ ಮೇಲೆ ಹಲ್ಲೆ! ಮುಸ್ಸಂಜೆ ಹೊತ್ತಲ್ಲಿಯೇ ನಡೆಯುತ್ತಿದ್ಯಾ ರಾಬರಿ!?

An engineering student was attacked by youths who intercepted his bike at Jayanagar in Shivamogga district

ಇಂಜಿನಿಯರ್​ ವಿದ್ಯಾರ್ಥಿ ಮೇಲೆ ಹಲ್ಲೆ! ಮುಸ್ಸಂಜೆ ಹೊತ್ತಲ್ಲಿಯೇ ನಡೆಯುತ್ತಿದ್ಯಾ ರಾಬರಿ!?

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA | ಸಂಜೆ ಸಮಯದಲ್ಲಿಯೇ ರಾಬರಿ ಪ್ರಯತ್ನಗಳು ಶಿವಮೊಗ್ಗ ಸಿಟಿ ಲಿಮಿಟ್ಸ್ (ಶಿವಮೊಗ್ಗ ನ್ಯೂಸ್ today) ನಲ್ಲಿ ನಡೆಯುತ್ತಿವೆಯೇ !? ಇಂತಹದ್ದೊಂದು ಘಟನೆ ಶಿವಮೊಗ್ಗ ಜಯನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಂಜಿನಿಯರ್ ವಿದ್ಯಾರ್ಥಿಯೊಬ್ಬನ ಬೈಕ್ ಅಡ್ಡಹಾಕಿ ಆತನಿಗೆ ಚಾಕು ತೋರಿಸಿ ರಾಬರಿ ಮಾಡಲು ಯುತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಉಷಾ ನರ್ಸಿಂಗ್ ಹೋಮ್ ಬಳಿ ಘಟನೆ 

ಉಷಾ ನರ್ಸಿಂಗ್ ಹೋಮ್​ ಬಳಿ ಕೃಷಿನಗರದಿಂದ ಬೈಕ್​ನಲ್ಲಿ ಪ್ರಣವ್ ಎಂಬವರು ಬರುತ್ತಿದ್ದಾಗ ಅವರ ಬೈಕ್​ಗೆ ಇಬ್ಬರು ಯುವಕರು ಡಿಕ್ಕಿ ಹೊಡೆದಿದ್ದಾರೆ. ಅಲ್ಲದೆ ಬೈಕ್​ ನಿಲ್ಲಿಸಿ ವಿದ್ಯಾರ್ಥಿಯ ಮೊಬೈಲ್​ ಕಿತ್ತುಕೊಂಡಿದ್ದಾರೆ. ಆನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಇವರನ್ನ ಬೆನ್ನಟ್ಟಿದ ವಿದ್ಯಾರ್ಥಿ ಮೊಬೈಲ್​ ಕೊಡಿ ಎಂದು ಕೇಳುತ್ತಾ ಬಂದಿದ್ದಾನೆ. 

READ : ಮಧು ಬಂಗಾರಪ್ಪರವರ ಹೆಸರಿನಲ್ಲಿ FAKE FACEBOOK ID ! ಶಿವಮೊಗ್ಗ ಸಿಇಎನ್​ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್!

ಇಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ 

ಈ ಮಧ್ಯೆ ಜಯನಗರದಲ್ಲಿ  ಬೈಕ್​ ನಿಲ್ಲಿಸಿದ ಯುವಕರು, ಇಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿಯೇ ಇದ್ದ ಅಂಗಡಿಯೊಬ್ಬರು ತಪ್ಪಿಸಲು ಬಂದರೆ, ಅವರಿಗೂ ಹೆದರಿಸಿದ್ದಾರೆ. ಇನ್ನೂ ಈ ನಡುವೆ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಅಲ್ಲಿದ್ದವರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. 

ಯುವಕರ ಪಬ್ಲಿಕ್ ನ್ಯೂಸೆನ್ಸ್!

ಇಷ್ಟೆಲ್ಲದರ ನಡುವೆ ಇನ್ನಷ್ಟು ಪಬ್ಲಿಕ್ ನ್ಯೂಸೆನ್ಸ್ ಮಾಡಿದ ಯುವಕರು ಚಾಕು ತೋರಿಸಿದ್ದಾರೆ ಎನ್ನಲಾಗಿದೆ. 112 ಗೆ ಕರೆಮಾಡಿದರೂ ಆ ತಕ್ಷಣಕ್ಕೆ ಸಹಾಯವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ. ಈ ಮಧ್ಯೆ ಸ್ಥಳಕ್ಕೆ ಬಂದ ವಿದ್ಯಾರ್ಥಿಯ ತಾಯಿ, ಯುವಕರಿಗೆ ಪೊಲೀಸರನ್ನ ಕರೆಸುವುದಾಗಿ ಎಚ್ಚರಿಕೆ ನೀಡಿದ ಮೇಲೆ ಅಲ್ಲಿಂದ ಯುವಕರು ಎಸ್ಕೇಪ್ ಆಗಿದ್ದಾರೆ. 

ಶಿವಮೊಗ್ಗ ಪೊಲೀಸ್ 

ಶಿವಮೊಗ್ಗ ಪೊಲೀಸರು ಆಗಾಗ ಏರಿಯಾ ಡಾಮಿನೇಷನ್ ಮಾಡುತ್ತಿದ್ದಾರೆ. ಈ ವೇಳೆ ಪಬ್ಲಿಕ್ ನ್ಯೂಸೆನ್ಸ್ ಮಾಡುವವರ ವಿರುದ್ಧ ಕೇಸ್ ಸಹ ಹಾಕುತ್ತಿದ್ದಾರೆ ನಿಜ. ಆದರೆ ಇದು ಲೆಕ್ಕದ ಭರ್ತಿಗಾಗಿ ನಡೆಯಬಾರದಷ್ಟೆ. ಜಯನಗರದಲ್ಲಿ ನಡದ ಘಟನೆಯ ಹಿನ್ನೆಲೆಯಲ್ಲಿ ಏನೇನು ನಡೆದಿದೆ ಎಂಬುದನ್ನ ಪೊಲೀಸರೇ ತಿಳಿಸಬೇಕಿದೆ.