ಮಧು ಬಂಗಾರಪ್ಪರವರ ಹೆಸರಿನಲ್ಲಿ FAKE FACEBOOK ID ! ಶಿವಮೊಗ್ಗ ಸಿಇಎನ್​ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA | ಫೇಕ್​ ಅಕೌಂಟ್​ನ ಹಾವಳಿ ಇದೀಗ ಸಚಿವ ಮಧು ಬಂಗಾರಪ್ಪ  ರಿಗೂ ತಟ್ಟಿದೆ. ಅವರ ಹೆಸರಿನಲ್ಲಿ ಫೇಸ್​ಬುಕ್ ಗ್ರೂಪ್ ಕ್ರಿಯೆಟ್ ಮಾಡಲಾಗಿದ್ದು, ಅದರಲ್ಲಿ ಸಚಿವರ ಹಾಗೂ ಸಚಿವರ ಪಕ್ಷಕ್ಕೆ ವಿರುದ್ಧವಾದ ಫೋಸ್ಟ್ ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ CEN police station ನಲ್ಲಿ ದೂರು ದಾಖಲಿಸಲಾಗಿದೆ. ಈ ಸಂಬಂಧ ಐಟಿ ಆ್ಯಕ್ಟ್  (IT ACt)ಅಡಿಯಲ್ಲಿ ಕೇಸ್​ ಸಹ ದಾಖಲಾಗಿದೆ. 

ಸಚಿವ ಮಧು ಬಂಗಾರಪ್ಪ ರವರ ಫೇಸ್​ಬುಕ್​ ಐಡಿ ಕ್ರಿಯೆಟ್​

ಪ್ರಕರಣ ಸಂಬಂಧ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ ಮಂಜುನಾಥ್ ದೂರು ನೀಡಿದ್ದಾರೆ. ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ದೂರನ್ನು ಗಮನಿಸುವುದಾದರೆ, ವಿವರ ಹೀಗಿದೆ.  27-11-2023 ರಂದು ಫೇಕ್​ ಐಡಿ ಪ್ರಕರಣ ಬೆಳಕಿಗೆ ಬಂದಿದೆ.  ಪೇಸ್‌ಬುಕ್ ಅಕೌಂಟ್ ಓಪನ್ ಮಾಡಿಕೊಂಡು ಜಿಡಿ ಮಂಜುನಾಥ್ ರವರು ನೋಡುತ್ತಿದ್ದಾಗ. ಅದರಲ್ಲಿ  ಸಚಿವರ ಹೆಸರಿನಲ್ಲಿ ” ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು “ ಎಂಬ ಹೆಸರಿನ ಫೇಕ್​ ಫೇಸ್​ಬುಕ್​ ಗ್ರೂಪ್​  ಕ್ರಿಯೇಟ್ ಮಾಡಿರುವುದು ಕಂಡು ಬಂದಿದೆ

READ :ಆಯನೂರಿನಿಂದ ಅಮೃತಸರಕ್ಕೆ ಹೋಗಿದ್ದ ಶುಂಠಿ ಲಾರಿ ನಾಪತ್ತೆ! ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಬಂತು ವಿಡಿಯೋ! ವ್ಯಾಪಾರಸ್ಥರೇ ಎಚ್ಚರ!

ಫೇಸ್​ಬುಕ್​ ಗ್ರೂಪ್​ 

ಈ ಗ್ರೂಪ್​ನ ಡಿಪಿಯಲ್ಲಿ  ಮಧು ಬಂಗಾರಪ್ಪ ರವರ ಪೋಟೊ ಹಾಕಿದ್ದು, ಇದರಲ್ಲಿ 58k ಫಾಲೋವರ್ಸ್​ ಇದ್ದಾರೆ. ಅಲ್ಲದೆ ಈ  ಪೇಸ್‌ಬುಕ್ ಗ್ರೂಪ್‌ನಲ್ಲಿ Kundapur Virat ಎಂಬ ಹೆಸರಿನ ಪೇಸ್‌ಬುಕ್ ಬಳಕೆದಾರರು  ಅಚ್ಚೆದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದಂತಹ ಪೋಸ್ಟ್ ವೊಂದನ್ನ ಹಾಕಿದ್ದಾರೆ. 

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ

ಫೋಸ್ಟ್​ ನಲ್ಲಿ ” ಯೇ ಹೈ ಅಚ್ಚೇ ದಿನ್ ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೇಸ್‌ನ ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು, ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಬರೆದು ಸೋನಿಯಾ ಗಾಂಧಿ ಮತ್ತು  ರಾಹುಲ್ ಗಾಂಧಿ ರವರು ಇರುವ ಪೋಟೊ ಹಾಕಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

 

ಅಲ್ಲದೆ ಕಾಂಗ್ರೇಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ  ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್‌ಗಳನ್ನು “ ಶ್ರೀ ಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು “ಎಂಬ ಪೇಸ್‌ಬುಕ್ ಗ್ರೂಪ್‌ ಗೆ ಟ್ಯಾಗ್ ಮಾಡಲಾಗಿದೆ ಎಂದು ದೂರಲಾಗಿದೆ.  

READ : ಮುಗಿಯದ ತೀರ್ಥಹಳ್ಳಿ ಕೊಂಬಿನ ಕಥೆ! ದಾಖಲಾಯ್ತು ಮತ್ತೊಂದು ಕೇಸ್! ಏಕೆ ಗೊತ್ತಾ?

ಸಿಇಎನ್ ಪೊಲೀಸ್ ಸ್ಟೇಷನ್

ಈ ಸಂಬಂಧ ನಕಲಿ ಅಕೌಂಟ್​ ಕ್ರಿಯೆಟ್ ಮಾಡಿದ ಆರೋಪ ಸೇರಿದಂತೆ  ಮಧು ಬಂಗಾರಪ್ಪ ರವರಂತೆ ನಟಿಸಿ ಸಚಿವರೇ ಈ ರೀತಿ ಪೇಸ್‌ಬುಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕಾಂಗ್ರೇಸ್ ಪಕ್ಷದ ನಾಯಕರು, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೇಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿ ಹಲವು ಪೋಸ್ಟ್‌ಗಳನ್ನು ಹಾಕುತ್ತಿರುವಂತೆ ಮಾಡುವ ಮೂಲಕ ಸಚಿವರಿಗೆ ಕೆಟ್ಟ ಹೆಸರು ಬರುವಂತೆ, ಅವರ ಘನತೆಗೆ ಧಕ್ಕೆ ತರುವಂತೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ  

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor