ಗಣಪತಿ ಹಬ್ಬ ಮತ್ತು ಈದ್ ಮಿಲಾದ್​! ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಕರೆಂಟ್​, ಪರ್ಮಿಟ್​ , ಸ್ಪೀಕರ್​ ಲೈಸೆನ್ಸ್ ಎಲ್ಲಿ ಪಡೆಯಬೇಕು! ಜಿಲ್ಲಾಡಳಿತ ನೀಡಿದ ಮಾಹಿತಿ ಏನು! ವಿವರ ಇಲ್ಲಿದೆ

shivamogga district administration has implemented a single window system to obtain licenses related to Ganapati festival and Eid Milad . ಶಿವಮೊಗ್ಗ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಗಣಪತಿ ಹಬ್ಬ ಹಾಗು ಈದ್ ಮಿಲಾದ್​ಗೆ ಸಂಬಂಧಿಸಿದ ಲೈಸೆನ್ಸ್​ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಜಾರಿಗೆ ತಂದಿದೆ

ಗಣಪತಿ ಹಬ್ಬ ಮತ್ತು ಈದ್ ಮಿಲಾದ್​! ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಕರೆಂಟ್​, ಪರ್ಮಿಟ್​ , ಸ್ಪೀಕರ್​ ಲೈಸೆನ್ಸ್ ಎಲ್ಲಿ ಪಡೆಯಬೇಕು! ಜಿಲ್ಲಾಡಳಿತ ನೀಡಿದ ಮಾಹಿತಿ ಏನು! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS  

ಈ ಸಲವೂ ಗಣಪತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಶಿವಮೊಗ್ಗ ಸಜ್ಜುಗೊಳ್ಳುತ್ತಿದೆ. ಅದಾಗಲೇ ಗಣಪತಿ ಕಲೆಕ್ಷನ್ ಆರಂಭವಾಗಿದ್ದು, ಹೊಸ ಹೊಸ ಟ್ರೆಂಡಿಂಗ್ ಅಲಂಕಾರದ ಗಣೇಶನಿಗಾಗಿ, ಅಲಂಕಾರ ಸಮಿತಿಗಳು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. 

ಒಂದೆ ಕಡೆಯಲ್ಲಿ ಲೈಸೆನ್ಸ್​!

ಇನ್ನೂ 2023ನೇ ಸಾಲಿನ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗಣಪತಿ ಸಮಿತಿ ಮತ್ತು ಈದ್ ಮಿಲಾದ್ ಸಮಿತಿಯವರು ಪೊಲೀಸ್ ಇಲಾಖೆಯಿಂದ ಧ್ವನಿ ವರ್ಧಕ ಪರವಾನಿಗೆಯನ್ನು ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಮತ್ತು ಮಹಾನಗರ ಪಾಲಿಕೆ / ನಗರ ಪಾಲಿಕೆ / ಪುರಸಭೆ / ತಾಲೂಕು ಕಛೇರಿಯಿಂದ ಅನುಮತಿಯನ್ನು ಪಡೆಯಬೇಕಿದೆ. 



ಈ  ಇಲಾಖೆಗಳಿಗೆ ಸಮಿತಿಯವರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ  ಮೂರು ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿರುವಂತೆ ಏಕಗವಾಕ್ಷಿ (Single Window) ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಜನರು ಈ ಕಚೇರಿಗೆ ಹೋಗಿ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದುಕೊಳ್ಳಬಹುದಾಗಿದೆ.  ಸಂಬಂಧಪಟ್ಟ ಸಮಿತಿಯವರು ಸದರಿ ಸ್ಥಳಗಳಿಗೆ ಭೇಟಿ ನೀಡಿ ಅನುಮತಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೋರಿದೆ. 

 

May be an image of text


   

ಇನ್ನಷ್ಟು ಸುದ್ದಿಗಳು