ಶರಾವತಿ ಸಂತ್ರಸ್ತರ ಪರ ಸಂಸತ್​ನಲ್ಲಿ, ಮೋದಿ ಸರ್ಕಾರಕ್ಕೆ ಸಂಸದ B.Y. ರಾಘವೇಂದ್ರರವರು ಸಲ್ಲಿಸದ ಮನವಿಯಲ್ಲಿ ಏನಿದೆ? ವಿವರ ಓದಿ

ಶರಾವತಿ ಸಂತ್ರಸ್ತರ ಪರ ಸಂಸತ್​ನಲ್ಲಿ, ಮೋದಿ ಸರ್ಕಾರಕ್ಕೆ ಸಂಸದ B.Y. ರಾಘವೇಂದ್ರರವರು ಸಲ್ಲಿಸದ ಮನವಿಯಲ್ಲಿ ಏನಿದೆ? ವಿವರ ಓದಿ

ಶಿವಮೊಗ್ಗ,: ಸಂಸದ ಬಿ.ವೈ. ರಾಘವೇಂದ್ರರವರು ಲೋಕಸಭಾ ಅಧಿವೇಶನದಲ್ಲಿ ನಿನ್ನೆ ಶೂನ್ಯ ವೇಳೆಯಲ್ಲಿ ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ನಿರಾಶ್ರಿತರಾದ ಕುಟುಂಬಗಳ ಪರವಾಗಿ ದೇಶದ ಗಮನ ಸೆಳೆದಿದ್ದಾರೆ. ಸಾವಿರಾರು ಶರಾವತಿ ಮುಳುಗಡೆ ಸಂತ್ರಸ್ತ  ಕುಟುಂಬಗಳು ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕನ್ನು ನೀಡುವ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರು ಹಾಗೂ ಸದನದ ಗಮನಕ್ಕೆ ತಂದರು

ಸಂಸದರ ಸದನದ ಗಮನಕ್ಕೆ ತಂದ ಅಂಶಗಳು

  •  ಮಲೆನಾಡು ಪ್ರದೇಶದ 31 ವಿವಿಧ ಅರಣ್ಯ ಪ್ರದೇಶಗಳಲ್ಲಿನ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಲು ಶರಾವತಿ ಜಲವಿದ್ಯುತ್ ಯೋಜನೆ ಯಿಂದಾಗಿ ಮುಳುಗಡೆಯಾದ ಪ್ರದೇಶದಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಅವಕಾಶ ನೀಡಲಾ ಗಿತ್ತು. ಆದರೆ 1959ರಿಂದ ಕಂದಾಯ ದಾಖಲೆಗಳಲ್ಲಿ ರೈತರ ಹೆಸರು ನಮೂದಾಗಿಲ್ಲ. 

 ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು...ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

  •  ಮುಳುಗಡೆ ಸಂತ್ರಸ್ತರಲ್ಲಿ ಬಹುತೇಕರು ಈಡಿಗರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರಾಗಿದ್ದು, ಭೂಮಿಯ ಹಕ್ಕುಪತ್ರ ಸಿಗದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. 
  • ಪ್ರಸ್ತುತ ಅಸ್ತಿತ್ವದಲ್ಲಿರುವ ಅರಣ್ಯ ಸಂರಕ್ಷಣಾ ಕಾಯಿದೆ-1980 ಕ್ಕಿಂತ ಮೊದಲು,  ಭೂಮಿಯನ್ನು ಡಿ-ನೋಟಿಫೈ ಮಾಡಬೇಕಾಗಿತ್ತು. ಆದರೆ ಆಗಿನ ಸರ್ಕಾರ ಆ ಕೆಲಸವನ್ನು ನಿರ್ವಹಿಸಿಲ್ಲ
  • ಇದರಿಂದಾಗಿ ಮುಳುಗಡೆ ಸಂತ್ರಸ್ತ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ಯೋಜನೆ ಅಥವಾ ಸರ್ಕಾರದ ಯಾವುದೇ ಯೋಜನೆಗಳಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ.

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

  • ಸಾವಿರಾರು ರೈತರ ಜಮೀನಿಗೆ ಹಕ್ಕುಪತ್ರ ನೀಡ ಬೇಕೆಂಬ ಬಹುದಿ ನಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಅರಣ್ಯ ಸಂರಕ್ಷಣಾ ಕಾಯ್ದೆ-1980 ಜಾರಿಗೆ ಬಂದ ನಂತರ ಅರಣ್ಯ ಭೂಮಿಯ ಡಿ-ನೋಟಿಫಿಕೇಶನ್ ಅನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬಹುದಾಗಿದೆ. 
  • ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪರಿಸರ ಮತ್ತು ಅರಣ್ಯ ಸಚಿವರು ಶರಾವತಿ ಜಲವಿದ್ಯುತ್ ಯೋಜನೆಯ ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ ಅರಣ್ಯ ಭೂಮಿ ಮಂಜೂರು ಮಾಡಲು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಬೇಕು. 
  • ವಿಳಂಬ ಮಾಡದೆ ತಕ್ಷಣವೇ ಡಿ-ನೋಟಿಫಿಕೇಶನ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದ್ದಾರೆ.  

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

During Zero Hour today, Requested the Hon'ble @moefcc to take immediate steps to issue de-notification to grant the forest lands to all the displaced families of Sharavathi Hydro power project by making necessary amendments to the rules without further delay. @byadavbjp @BSYBJP pic.twitter.com/UdCEwp9Hp0 — B Y Raghavendra (@BYRBJP) December 21, 2022