2018 ರಲ್ಲೂ ಟಿಕೆಟ್​ಗಾಗಿ ಕೆ.ಎಸ್​.ಈಶ್ವರಪ್ಪ ಹೋರಾಟವನ್ನೆ ನಡೆಸಿದ್ರು! ಆಗ ರುದ್ರೇಗೌಡರು, ಈಗ ಆಯನೂರು ಮಂಜುನಾಥ್​! ಏನಿದು JP ಫ್ಲ್ಯಾಶ್ ಬ್ಯಾಕ್​ ಓದಿ

In 2018 too, KS Eshwarappa fought for a ticket. Then Rudre Gowda, now Ayanur Manjunath! What is JP flashback Read JP flashback

2018 ರಲ್ಲೂ ಟಿಕೆಟ್​ಗಾಗಿ ಕೆ.ಎಸ್​.ಈಶ್ವರಪ್ಪ ಹೋರಾಟವನ್ನೆ ನಡೆಸಿದ್ರು!  ಆಗ ರುದ್ರೇಗೌಡರು, ಈಗ ಆಯನೂರು ಮಂಜುನಾಥ್​! ಏನಿದು JP ಫ್ಲ್ಯಾಶ್ ಬ್ಯಾಕ್​  ಓದಿ
2018 ರಲ್ಲೂ ಟಿಕೆಟ್​ಗಾಗಿ ಕೆ.ಎಸ್​.ಈಶ್ವರಪ್ಪ ಹೋರಾಟವನ್ನೆ ನಡೆಸಿದ್ರು! ಆಗ ರುದ್ರೇಗೌಡರು, ಈಗ ಆಯನೂರು ಮಂಜುನಾಥ್​! ಏನಿದು JP ಫ್ಲ್ಯಾಶ್ ಬ್ಯಾಕ್​ ಓದಿ

ಆರು ಚುನಾವಣೆ ಅನಾಯಸವಾಗಿ ಎದುರಿಸಿದ ಈಶ್ವರಪ್ಪರಿಗೆ ಏಳು ಮತ್ತು ಎಂಟನೇ  ವಿಧಾನಸಭೆ ಚುನಾವಣೆ ಕಬ್ಬಿಣದ ಕಡಲೆಯಾಗಿದ್ದು ಯಾಕೆ..2018 ರಲ್ಲೂ ಕೆ.ಎಸ್. ಈಶ್ವರಪ್ಪ, ಟಿಕೆಟ್ ಗೆ ನಡೆಸಿದ ಕಸರತ್ತು ಹೇಗಿತ್ತು ಗೊತ್ತಾ? ಇದು 2018 ರ ಚುನಾವಣಾ ಫ್ಲ್ಯಾಶ್​ ಬ್ಯಾಕ್..ಜೆಪಿ ಬರೆಯುತ್ತಾರೆ.

ಟಿಕೆಟ್ ...ಟಿಕೆಟ್..ಬಿಜೆಪಿ ಟಿಕೆಟ್

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂಬುದು ಇನ್ನು ಸಹ ಗೊಂದಲಮಯವಾಗಿದೆ. ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪರೇ ಟಿಕೆಟ್ ಪಡೆಯುತ್ತಾರೆಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದ್ದರೂ ಸಹ, ಒಬ್ಬ ಹಿರಿಯ ಮುಖಂಡ ಟಿಕೆಟ್ ಗಾಗಿ ಇಷ್ಟೊಂದು ಕಸರತ್ತು ನಡೆಸಬೇಕಾಯ್ತೇ?  ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಪಕ್ಷದ ಆಂತರಿಕ ಸಂವಿಧಾನ  ಮತ್ತು  ವಯಸ್ಸಿನ ಕಾರಣಗಳಿಂದ ಟಿಕೆಟ್ ಗೊಂದಲಮಯವಾಗಿರಬಹುದು. ಕುತೂಹಲದ ಸಂಗತಿ ಅಂದರೆ, 2018 ರಲ್ಲೂ ಕೆ.ಎಸ್.ಈಶ್ವರಪ್ಪರವರು ಟಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದರು.  

ಅಂದಿನ ಸನ್ನಿವೇಶಗಳನ್ನು ಗಮನಿಸುವುದಾದರೆ? 

1989 ರ ನಂತರದ  ಆರು ಚುನಾವಣೆಯಲ್ಲಿ ಈಶ್ವರಪ್ಪ ಅನಾಯಾಸವಾಗಿ ಟಿಕೆಟ್ ಪಡೆದು ಚುನಾವಣೆ ಎದುರಿಸಿದ್ರು. ಆದರೆ ಅವರ ರಾಜಕೀಯ ಬದುಕಿನ ಏಳನೇ ಮತ್ತು ಎಂಟನೇ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಪ್ರಬಲ ವಿರೋಧ ಎದುರಿಸಬೇಕಾಯಿತು. 2013 ಚುನಾವಣೆ ಸೋಲಿನ ನಂತರ ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ.ಎಸ್.ಈಶ್ವರಪ್ಪರ ಅವಧಿ ಮುಗಿಯಲು ಇನ್ನು ಹದಿನೈದು ತಿಂಗಳು ಬಾಕಿಯಿರುವಾಗಲೇ 2018 ರ ಚುನಾವಣೆ ಎದುರಾಗಿತ್ತು.

ಸಹಜವಾಗಿಯೇ  ಈಶ್ವರಪ್ಪ ಚುನಾವಣೆ ಮೇಲೆ ಕಣ್ಣು ನೆಟ್ಟಿದ್ದರು. ಆದರೆ ಬಿಜೆಪಿ.ಪಕ್ಷ ಅಧಿಕಾರಕ್ಕೆ ಬಂದರೆ ಈಶ್ವರಪ್ಪನವರಿಗೆ ಸ್ಥಾನಮಾನ ನೀಡಿದರಾಯಿತು. ಶಿವಮೊಗ್ಗ ನಗರ ದಿಂದ ರುದ್ರೆಗೌಡರನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಯಡಿಯೂರಪ್ಪ ನಿರ್ಧರಿಸಿದ್ದರು. ಆದರೆ ಹಿಂಬಾಗಿಲ ರಾಜಕಾರಣವನ್ನು ಒಪ್ಪದ ಈಶ್ವರಪ್ಪ...ಚುನಾವಣೆಯ ಮೂಲಕ ಗೆದ್ದು,,,ಮತದಾರರನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದ ಕಾರಣಕ್ಕೆ 2018 ರಲ್ಲಿ  ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು

2013 ರ ಚುನಾವಣೆ ನಂತರ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೆಜೆಪಿ ತೊರೆದು ಬಿಜೆಪಿಗೆ ಮರಳಿದಾಗ ಶಿವಮೊಗ್ಗ ಬಿಜೆಪಿ ಘಟಕದಲ್ಲಿ ಬಣ ರಾಜಕಾರಣದ ಪರ್ವ ಆರಂಭವಾಯಿತು. ಮಾತೃ ಪಕ್ಷಕ್ಕೆ ಮರಳಿದ್ದ ಬಿ.ಎಸ್ ಯಡಿಯೂರಪ್ಪರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು.ಈ ಸಂದರ್ಭದಲ್ಲಿ ಈಶ್ವರಪ್ಪ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಶಕ್ತಿ ತುಂಬಲು ಅಣಿಯಾಗಿದ್ದರು.

2013 ರ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಯಡಿಯೂರಪ್ಪ ರಚಿಸಿದ್ದ ಕೆಜೆಪಿ ಅಭ್ಯರ್ಥಿಯಾಗಿದ್ದ ರುದ್ರೆಗೌಡರು ಎರಡನೇ ಸ್ಥಾನ ಪಡೆದಿದ್ದರು. ಯಡಿಯೂರಪ್ಪನವರ ಬಿಜೆಪಿ ಮರು ಪ್ರವೇಶದ ಬಳಿಕ,ಶಿವಮೊಗ್ಗ ಜಿಲ್ಲಾ ಬಿಜೆಪಿ ಮೇಲೂ ಯಡಿಯೂರಪ್ಪ ಪ್ರಭುತ್ವ ಸಾಧಿಸಿದ್ರು ,ಕೆಜೆಪಿ ಅಭ್ಯರ್ಥಿಯಾಗಿದ್ದ ರುದ್ರೆಗೌಡರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದರು.

ಅಷ್ಟೆ ಅಲ್ಲದೆ 2018 ರ ವಿಧಾನಸಭೆ ಚುನಾವಣೆಗೆ ರುದ್ರೆಗೌಡರನ್ನೇ ಬೆಜೆಪಿ ಅಭ್ಯರ್ಥಿಯನ್ನಾಗಿ ಮಾಡಲು ಬಯಸಿದ್ದರು. ಆದರೆ 2013 ಚುನಾವಣೆಯಲ್ಲಿ ಪರಾಭವ ಅನುಭವಿಸಿದ್ದ ಈಶ್ವರಪ್ಪ 2018 ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ತಾವಿನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದೇನೆಂದು ನಿರೂಪಿಸಲು ಮುಂದಾಗಿದ್ದರು.  ಯಡಿಯೂರಪ್ಪ ಬೆಂಬಲಿಗರಾದ ರುದ್ರೆಗೌಡರು ತಾವು 2013 ರ ಚುನಾವಣೆಯಲ್ಲಿ  ಕೇವಲ 278 ಮತಗಳ ಅಂತರದಿಂದ ಸೋತಿರುವ ಹಿನ್ನಲೆಯಲ್ಲಿ 2018ರ ಚುನಾವಣೆಯಲ್ಲಿ ಗೆಲುವಿಗೆ ಅವಕಾಶ ಹೆಚ್ಚಾಗಿರುವ ಕಾರಣ ತಮಗೆ ಟಿಕೆಟ್ ನೀಡುವಂತೆ ಕೋರಿದ್ದರು.

ಈಶ್ವರಪ್ಪ ಮುತ್ತು ರುದ್ರೇಗೌಡರ ನಡುವೆ ಪೈಪೋಟಿ

ಈ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಈಶ್ವರಪ್ಪ ಮತ್ತು ರುದ್ರೆಗೌಡರ  ಬೆಂಬಲಿಗರ ನಡುವೆ ತಿಕ್ಕಾಟ ಶುರುವಾಗಿತ್ತು. ಇದೆಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಬಿಜೆಪಿ ವರಿಷ್ಠರು ಇದಕ್ಕೆ ತೆರೆ ಎಳೆಯಲು ಮುಂದಾಗಿದ್ದರು. ಅಮಿತ್ ಶಾರವರು ಅಂದಿನ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಮತ್ತು ಮುರುಳಿಧರ್ ರಾವ್ ಅವರೊಂದಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುರಿತು ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಶಿವಮೊಗ್ಗದಲ್ಲಿ ಈಶ್ವರಪ್ಪ ಬಿಜೆಪಿ ಅಭ್ಯರ್ಥಿ.ಈ ವಿಷಯದಲ್ಲಿ ಯಾವುದೇ ಅಪಸ್ವರ ಇರಬಾರದು..ಅವರಿಗೆ ಚುನಾವಣೆಗೆ ಅಣಿಯಾಗಲು ಸಂದೇಶ ರವಾನಿಸುವಂತೆ ಪ್ರಕಾಶ್ ಜಾವಡೆಕರ್ ಗೆ ನಿರ್ದೇಶನ ನೀಡಿದ್ದರು.

ಈಶ್ವರಪ್ಪನವರನ್ನು ಸಮರ್ಥಿಸಿಕೊಂಡಿದ್ದ ಹೈಕಮಾಂಡ್.

ಅಂದು ನಡೆದ ಸಭೆಯಲ್ಲಿ  ಬಿಎಸ್ ವೈ ಪರ ಒಲವು ಹೊಂದಿದ್ದ ಮುರುಳಿಧರ್ ರಾವ್ ಒಂದು ಹಂತದಲ್ಲಿ ರುದ್ರೆಗೌಡರ ಪರವಾಗಿ ಬ್ಯಾಟಿಂಗ್ ಮಾಡಿದ್ದರಾದರೂ..ಅಮಿತ್ ಶಾರವರು ಅದನ್ನು ಮಾನ್ಯ ಮಾಡಲಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪನವರಂತೆಯೇ ಈಶ್ವರಪ್ಪ ಕೂಡ ಹಿರಿಯ ನಾಯಕ. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿಗೆ ಹೋದಾಗ ಅವರ ಅನುಪಸ್ಥಿತಿಯಲ್ಲಿ ಈಶ್ವರಪ್ಪ ಪಕ್ಷ ಮುನ್ನೆಡೆಸಿದ್ದಾರೆ. ಇವರ ವಿಷಯದಲ್ಲಿ ಸರ್ವೆ ರಿಪೋರ್ಟ್ ಅಗತ್ಯವಿಲ್ಲ.ಹಾಗೆ ಮಾಡುವುದಾದರೆ ಶಿಕಾರಿಪುರದಲ್ಲಿಯೂ ಯಡಿಯೂರಪ್ಪನವರ ಪರವಾಗಿ ಸರ್ವೆ ರಿಪೋರ್ಟ್ ಪಡೆಯಲು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿ, ಈಶ್ವರಪ್ಪನವರಿಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್ ನೀಡಿದ್ರು. ಈ ಬೆಳವಣಿಗೆ ಹಿನ್ನಲೆಯಲ್ಲಿ  ಅಂದಿನ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್  ಈಶ್ವರಪ್ಪನವರಿಗೆ ದೂರವಾಣಿ ಮೂಲಕ ಶುಭ ಹಾರೈಸಿ ಚುನಾವಣೆಗೆ ಅಣಿಯಾಗುವಂತೆ ತಿಳಿಸಿದ್ರು. 

ಇದೀಗ ಮತ್ತೆ ಶುರುವಾಯ್ತು ಟಿಕೆಟ್ ಪೈಪೋಟಿ

ಈಶ್ವರಪ್ಪರು ಪಕ್ಷದ ಅಧಿಕೃತ ಅಭ್ಯರ್ಥಿಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಯಾಗಿದ್ದ,ರುದ್ರೆಗೌಡರು ಜಾಣಮೌನ ತಾಳಿದ್ದರು. ಅವರಿಗೆ ಟಿಕೆಟ್ ನೀಡಿರುವುದು ಸಂತಸವಾಗಿದೆ..ನಾವು ಅವರನ್ನು ಗೆಲ್ಲಿಸುತ್ತೇವೆ.ಆದರೆ ನನ್ನ ಬೆಂಬಲಿಗರಿಗೆ ಅಸಮದಾನವಾಗಿರುವುದು ಸುಳ್ಳಲ್ಲ..ಅವರನ್ನು ಈಶ್ವರಪ್ಪ ಸಂತೈಸಬೇಕೆಂದು ಹೇಳಿದ್ದರು. ಒಟ್ಟಾರೆ, ಆ ಚುನಾವಣೆಯಲ್ಲಿ ಟಿಕೆಟ್ ಗಾಗಿ ಕೊನೆವರೆಗೂ ಈಶ್ವರಪ್ಪ ಪರಿತಪಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ ಅವರಿಗೆ ಮತ್ತದೆ ಸನ್ನಿವೇಶ ಎದುರಾಗಿದೆ. ರುದ್ರೆಗೌಡರ ಸ್ಥಾನದಲ್ಲಿ ಆಯನೂರು ಮಂಜುನಾಥ್​ ಎದುರಾಳಿಯಾಗಿ ನಿಂತಿದ್ದಾರೆ. ಇನ್ನೊಂದೆಡೆ ಪಕ್ಷದಲ್ಲಿಯೇ ಹಲವರು ಟಿಕೆಟ್​ನ ನಿರೀಕ್ಷೆಯಲ್ಲಿದ್ದಾರೆ... ಹೀಗಿರುವಾಗ ಮುಂದೇನಾಗುವುದು ಕಾದು ನೋಡೋಣ.. 

 Read /ಸೊರಬ  ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ 

Read /McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ

Read / 2015 ರಲ್ಲಿ,  ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು

Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

Read / ಪೆಟ್ರೋಲಿಂಗ್​​ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ

Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್

Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga2018 elections, Assembly elections, Rudregowda, KS Eshwarappa, BS Yediyurappa, Shivamogga City constituency, Shivamogga assembly constituency, BJP ticket, Amit Shah, Karnataka Assembly Elections 2023, 2018 ರ ಚುನಾವಣೆ, ವಿಧಾನಸಭಾ ಚುನಾವಣೆ, ರುದ್ರೇಗೌಡರು, ಕೆ.ಎಸ್​.ಈಶ್ವರಪ್ಪ, ಬಿಎಸ್​ ಯಡಿಯೂರಪ್ಪ, ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರ, ಬಿಜೆಪಿ ಟಿಕೆಟ್, ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣೆ 2023