ಸಿಕ್ಕಿಬಿದ್ದ ಬಂಗಾರದ ಕಳ್ಳ! ದೂಡಿದ್ದಕ್ಕೆ ಸತ್ತ ವ್ಯಕ್ತಿ!ಆರೋಪಿಗೆ ನಾಲ್ಕು ವರ್ಷ ಶಿಕ್ಷೆ! ಗೀಜರ್​ ನಿಂದ ಹೊತ್ತಿಕೊಂಡ ಬೆಂಕಿ! ಸಾಗರ ನಿವಾಸಿ ಸಾವು! ಇನ್ನಷ್ಟು ಸುದ್ದಿಗಳು!@ Today news

A gold thief caught! A man who died for being pushed! Four-year jail term for the accused! A fire from a geyser! Sagar resident dies! More news!@Today news

ಸಿಕ್ಕಿಬಿದ್ದ ಬಂಗಾರದ ಕಳ್ಳ! ದೂಡಿದ್ದಕ್ಕೆ ಸತ್ತ ವ್ಯಕ್ತಿ!ಆರೋಪಿಗೆ ನಾಲ್ಕು ವರ್ಷ ಶಿಕ್ಷೆ! ಗೀಜರ್​ ನಿಂದ ಹೊತ್ತಿಕೊಂಡ ಬೆಂಕಿ! ಸಾಗರ ನಿವಾಸಿ ಸಾವು! ಇನ್ನಷ್ಟು ಸುದ್ದಿಗಳು!@ Today news

KARNATAKA NEWS/ ONLINE / Malenadu today/ Jun 10, 2023 SHIVAMOGGA NEWS

ಶಿವಮೊಗ್ಗ ನಗರದ ಗಾಂಧಿನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ  ದಿನಾಂಕ:18/05/2023 ರಂದು ಬೆಳಗಿನ ಜಾವ ಶಿವಮೊಗ್ಗ ನಗರದ ಗಾಂಧಿನಗರ ಬಿ ಬ್ಲಾಕ್ 3 ನೇ ಕ್ರಾಸ್ನ ವಾಸದ ಮನೆಯೊಂದರಲ್ಲಿ ಇಟ್ಟಿದ್ದ ಬಂಗಾರ ಕಳ್ಳತನವವಾಗಿತ್ತು. ಈ ಸಂಬಂಧ  ಜಯನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 56/2023 ಕಲಂ 380 ಐಪಿಸಿ ಪ್ರಕರಣ ದಾಖಲಾಗಿತ್ತು. 

ಇನ್ನೂ ಈ ಸಂಬಂಧ  ದಿನಾಂಕಃ 08-06-2023 ರಂದು ಪ್ರಕರಣದ ಆರೋಪಿ ಚೇತನ್. ಬಿ, 32 ವರ್ಷ, ನವುಲೆ ಗ್ರಾಮ, ಶಿವಮೊಗ್ಗ ಜಿಲ್ಲೆ  ಈತನನ್ನು ಪೊಲೀಸರು ಬಂಧಿಸಿದ್ಧಾರೆ. ಅಲ್ಲದೆ  ಅಂದಾಜು ಮೌಲ್ಯ 3,40,000/- ರೂಗಳ  68 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಜಪ್ತಿ ಮಾಡಿದ್ಧಾರೆ.

 


ಕೊಲೆ ಆರೋಪಿ ನಾಲ್ಕು ವರ್ಷ ಶಿಕ್ಷೆ

ಕೊಲೆ ಪ್ರಕರಣ ವೊಂದಲ್ಲಿ ಆರೋಪಿಗೆ ನಾಲ್ಕು ವರ್ಷ ಕೋರ್ಟ್​ ಶಿಕ್ಷೆ ವಿಧಿಸಿದೆ. 

ದಿನಾಂಕ: 08/01/2018 ರಂದು  ಸತ್ತಾರ್ ಸಾಬ್ ನ ಮನೆಯ ಹತ್ತಿರ ಹೋಗಿದ್ದ ಮಂಜುನಾಥ್ ಎಂಬಾತನನ್ನ ಸತ್ತಾರ್ ಸಾಬ್​ ತಳ್ಳಾಡಿ ದೂಡಿದ್ದರು. ಇದರಿಂದ ಬಿದ್ದು ಮಂಜುನಾಥ್ ಸಾವನ್ನಪ್ಪಿದ್ದ. ಈ ಸಂಬಂಧ  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಇದರ ಚಾರ್ಜ್​ಶೀಟ್ ಫೈಲ್​ ಶಿವಮೊಗ್ಗ ಕೋರ್ಟ್​ನ್ಲಲಿ ವಿಚಾರಣೆ ನಡೆದಿದೆ. ಈ ಸಂಬಂಧ ಇದೀಗ  2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿ ಸತ್ತಾರ್ ಸಾಬ್​ 4 ವರ್ಷ ಸಾಧಾ ಕಾರಾವಾಸ ಶಿಕ್ಷೆ ಮತ್ತು 25000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.


 

ಹಣದೊಂದಿಗೆ ಕಾಣೆಯಾದ ಬಾಲಕ

ಸಾಗರ ತಾಲೂಕಿನಲ್ಲಿ ಬಾಲಕನೊಬ್ಬ  ಕಳೆದ  ಮೇ 31ರಿಂದ ಕಾಣೆಯಾಗಿದ್ದು, ಆತನನ್ನ ಹುಡುಕಿಕೊಡಿ ಎಂದು ಪೋಷಕರು ಪೊಲೀಸರ ಮೊರೆಹೋಗಿದ್ದಾರೆ. ಇಲ್ಲಿನ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ನಿಗೆ ಪೋಷಕರು ಒಬ್ಬರ ಬಳಿ ಹೋಗಿ ದುಡ್ಡು ತರುವಂತೆ ಹೇಳಿದ್ದರಂತೆ. ಅದರಂತೆ 11 ಸಾವಿರ ರೂಪಾಯಿ ದುಡ್ಡು ಪಡೆದು ಹೊರಟಿದ್ದ ಬಾಲಕ, ಆನಂತರ ಕಾಣೆಯಾಗಿದ್ಧಾನೆ. ಈ ಸಂಬಂಧ ಸಾಗರ ಪೊಲೀಸರು ತನಿಖೆ ನಡೆಸ್ತಿದ್ಧಾರೆ.  


ಗೀಜರ್​ ಅವಘಡದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು!

ಸಾಗರ/ ತಾಲ್ಲೂಕಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ಮನೆಯಲ್ಲಿ ಗ್ಯಾಸ್ ಗೀಜ‌ರ್​ ನಿಂದ ಉಂಟಾದ ಬೆಂಕಿ ಅವಘಡದಲ್ಲಿ ತೀವ್ರ ಗಾಯಗೊಂಡಿದ್ದ ನಗರದ ಗಂಗಾಪರಮೇಶ್ವರಿ ರಸ್ತೆ ನಿವಾಸಿ ಉಬೇದುಲ್ಲಾ ಅಬ್ದುಲ್ ಖಾದರ್ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೇ 23ರಂದು ಮನೆಯ ಬಾತ್ ರೂಂನಲ್ಲಿ ಸಂಜೆ ಸ್ನಾನಕ್ಕೆ ಹೋಗುವಾಗ ಗ್ಯಾಸ್ ಸೋರಿಕೆಯಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಕೊಂಡಿತ್ತು. ಇದರಿಂದಾಗಿ ಉಬೇದುಲ್ಲಾ ಅವರ

ಮೈ ಕೈಗೆ ಸುಟ್ಟ ಗಾಯವಾಗಿತ್ತು. ಕೂಡಲೇ ಅವರನ್ನು ನಗರದ ಉಪ ವಿಭಾಗೀಯ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ನಂತರ ಮಣಿಪಾಲಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಅವರು  ಮೃತಪಟ್ಟಿದ್ದಾರೆ.  


ಜಮೀನು ಕೆಲಸಕ್ಕೆ ಹೋಗಿದ್ದ ವ್ಯಕ್ತಿ ಸಾವು

ಜಮೀನಿನ ಕೆಲಸಕ್ಕೆಂದು ಹೋಗಿದ್ದ ಕುಂಸಿಯ ಮಹೇಶ್ವರಪ್ಪಎಂಬವರು ತಮ್ಮ ಜಮೀನಿನಲ್ಲಿಯೇ ಸಾವನ್ನಪ್ಪಿದ್ಧಾರೆ.ಗ್ಯಾಸ್ಟಿಕ್ ಸಮಸ್ಯೆಯಿಂಧ ಬಳಲುತ್ತಿದ್ದ ಅವರ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಕುಂಸಿ ಸಮೀಪದ ಹೊಸಕೋಟೆಯ ಜಮೀನಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಅವರು ಬಳಿಕ ತಮ್ಮ ಜಮೀನಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. 

 


ತೀರ್ಥಹಳ್ಳಿಯಲ್ಲಿ ಬೈಕ್ ಅಪಘಾತ
ತೀರ್ಥಹಳ್ಳಿ/  ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗಜಿಲ್ಲೆ  ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಬಳಿ ನಡೆದಿದೆ. ಕೊಪ್ಪದಿಂದ ಸಾಗರಕ್ಕೆ ತೆರಳುತಿದ್ದ ಸ್ಕೂಟಿ ಹಾಗೂ ಗರ್ತಿಕೆರೆಯಿಂದ ಕೋಣಂದೂರು ಕಡೆಗೆ ತೆರಳುತಿದ್ದ ಬಜಾಜ್ CT 100 ಬೈಕ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಾಗರ ನಿವಾಸಿ ಶ್ರೀನಿವಾಸ್(61) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಇನ್ನೊಂದು  ಬೈಕ್ ನಲ್ಲಿದ್ದ ಗರ್ತಿಕೆರೆ ಮೂಲದ ಅಭಿ(23) ಎಂಬಾತನಿಗೂ ಪೆಟ್ಟಾಗಿದೆ. ಇಬ್ಬರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.  


ಬೈಕ್​ ತಾಗಿದ್ದಕ್ಕೆ ಸೀಗೆಹಟ್ಟಿಯಲ್ಲಿ ಅನ್ಯಕೋಮಿನ ಗುಂಪಿನ ನಡುವೆ ಕಿರಿಕ್! ದಾಖಲಾಯ್ತು ಸುಮೋಟೋ ಕೇಸ್!

ಶಿವಮೊಗ್ಗ/ ನಗರದ ಸೀಗೇಹಟ್ಟಿಯಲ್ಲಿ ನಡೆದ ಅನ್ಯಕೋಮಿನ ಹುಡುಗರ ನಡುವಿನ ಗಲಾಟೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಆಗಿದೆ. ಸುಮೋಟೊ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಹಿಂದು ಹಾಗೂ ಹೆಸರು ದಾಖಲಿಸದ ಮುಸ್ಲಿಮ್ ಹುಡುಗರ ವಿರುದ್ಧ ಎಫ್ಐಆರ್​ ದಾಖಲಿಸಿದ್ದಾರೆ. 

ನಡೆದಿದ್ದೇನು? 

ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿರುವ ಎಫ್​ಐಆರ್​ನ ಪ್ರಕಾರ, ಈ ಘಟನೆ ಕಳೆದ ಜೂನ್ ಆರರಂದು ನಡೆದಿದೆ. ಪೊಲೀಸರು ಗಸ್ತಿನಲ್ಲಿದ್ದ ವೇಳೆ  ಸೀಗೇಹಟ್ಟಿ ಸರ್ಕಲ್ ಬಳಿ ಇರುವ ಮೌಂಟೇನ್ ಸ್ಕೂಲ್ ಹತ್ತಿರ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿ ಪರಸ್ಪರ ಬೈಕ್ ತಾಗಿದ ಕಾರಣಕ್ಕೆ ಯುವಕರ ಗುಂಪಿನ ನಡುವೆ ಕಿತ್ತಾಟ ಆರಂಭವಾಗಿದೆ. ಇದನ್ನ ಗಮನಿಸಿದ ಪೊಲೀಸರು ಸ್ಥಳಕ್ಕೆ ಹೋಗುತ್ತಲೇ ಸ್ತಳದಿಂದ ಯುವಕರ ಗುಂಪು ಓಡಿ ಹೋಗಿದೆ. ಇನ್ನೂ ಈ ಸಂಬಂಧ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ತರುವ ಪ್ರಯತ್ನದ ಆರೋಪದ ಅಡಿಯಲ್ಲಿ IPC 1860 (U/s-160) ನಡಿಯಲ್ಲಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.