MSIL ಅಂಗಡಿಗೆ ಕನ್ನ ಹಾಕಿ 2 ಕೇಸ್ ಬಿಯರ್​ನಷ್ಟೆ ಕದ್ದ ಕಳ್ಳರು! ಇಂಟರ್​​ಸ್ಟ್ರಿಂಗ್ ಕೇಸ್!

2 cases of Kingfisher beer were stolen by breaking into MSIL store in Gajanur.. Malenadu Today, Kannada News Online, Karnataka News

MSIL  ಅಂಗಡಿಗೆ ಕನ್ನ ಹಾಕಿ 2 ಕೇಸ್ ಬಿಯರ್​ನಷ್ಟೆ ಕದ್ದ ಕಳ್ಳರು! ಇಂಟರ್​​ಸ್ಟ್ರಿಂಗ್ ಕೇಸ್!

KARNATAKA NEWS/ ONLINE / Malenadu today/ Nov 16, 2023 SHIVAMOGGA NEWS

Shivamogga | Malnenadutoday.com |  ಶಿವಮೊಗ್ಗ ಜಿಲ್ಲೆ ಗಾಜನೂರು  ಅಂಗಡಿಯೊಂದರಲ್ಲಿ ಕನ್ನ ಹಾಕಿದ ಕಳ್ಳರು, ಅಂಗಡಿಯಲ್ಲಿದ್ದ 2 ಕೇಸ್​ ಕಿಂಗ್​ಫಿಶರ್ ಬಿಯರ್ ಕದ್ದೊಯ್ದ ಘಟನೆ ಬಗ್ಗೆ ವರದಿಯಾಗಿದೆ. 

ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ IPC 1860 (U/s-380,457) ಅಡಿಯಲ್ಲಿ ಎಫ್ಐಆರ್ FIR​ ದಾಖಲಾಗಿದೆ 

ಏನಿದು ಕೇಸ್

ಕಳೆದ 10 ನೇ ತಾರೀಖು ನಡೆದ ಘಟನೆ ಸಂಬಂಧ ದೂರು ದಾಖಲಾಗಿದ್ದು ಅದರ ಪ್ರಕಾರ ನೋಡುವುದಾದರೆ, ಆರೋಪಿಗಳು ಇಲ್ಲಿನ MSIL ಅಂಗಡಿಯೊಂದರ ಬೀಗ ಮುರಿದು ಒಳಕ್ಕೆ ನುಗ್ಗಿದ್ದಾರೆ. ಬಳಿಕ ಅಲ್ಲಿದ್ದ ಸಿಸಿಟಿವಿ ಡಿವಿಆರ್​ಗಳನ್ನ ಕದ್ದ ಕಳ್ಳರು ಬಳಿಕ 2 ಕೇಸ್ ಕಿಂಗ್​ಫಿಷರ್ ಬಿಯರ್ ಬಾಕ್ಸ್​ ಕದ್ದು ಪರಾರಿಯಾಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ