ಮಾನವ ಹಕ್ಕು ಆಯೋಗ ಹೆಸರು ಹೇಳಿಕೊಂಡು ಮಹಿಳೆ ಮತ್ತು ಮೂವರಿಂದ ಕಿರುಕುಳ! ಕಾರು ಕಳ್ಳತನ! ದಾಖಲಾಯ್ತು ದೂರು!
A complaint has been registered that a woman and three people had stolen a car after giving trouble to a person in the police station area of Shimoga cityಶಿವಮೊಗ್ಗ ನಗರದ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಮಹಿಳೆ ಹಾಗೂ ಮೂವರು ತೊಂದರೆ ಕೊಟ್ಟು ಕಾರು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿದೆ

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS
ಇತ್ತೀಚೆಗೆ ಇಲ್ಲದ ಹುದ್ದೆಗಳ ಹೆಸರನ್ನು ಹೇಳಿಕೊಂಡು ದುಡ್ಡು ವಸೂಲಿ ಮಾಡುವ ಕಿರುಕುಳ ನೀಡುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಲಕ್ಷ ಲಕ್ಷ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಶಿವಮೊಗ್ಗದಲ್ಲಿಯು ಈಗೀಗ ಬೆಳಕಿಗೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 17 ರಂದು IPC 1860 (U/s-34,379,419,448) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಕೇಸ್
ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರು ಈ ಸಂಬಂಧ ಓರ್ವ ಮಹಿಳೆ ಹಾಗೂ ಮೂವರ ವಿರುದ್ಧ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಆರೋಪಿಸಿರುವ ಪ್ರಕಾರ, ಮಹಿಳೆ ಹಾಗೂ ಇನ್ನೂ ಮೂವರು ವ್ಯಕ್ತಿಗಳು ಮಾನವ ಹಕ್ಕು ಆಯೋಗದವರು ಎಂಧು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ತೊಂದರೆ ನೀಡಿದ್ದಾರೆ. ಅಲ್ಲದೆ ಅವರ ಮನೆಯಲ್ಲಿ ಇದ್ದುಕೊಂಡು ವ್ಯಕ್ತಿಯ ಕಾರನ್ನ ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ದೂರುದಾರ ವ್ಯಕ್ತಿಯ ವಿರುದ್ಧ ಸುಳ್ಳು ದೂರುನೀಡಲಾಗಿದ್ದು, ಆ ಕೇಸ್ನ ಸಂಬಂಧ ಜಾಮೀನು ತೆಗೆದುಕೊಂಡು ಮನೆಗೆ ಬಂದಾಗ ಈ ಘಟನೆ ನಡೆದಿದೆ. ದೂರು ನೀಡಿದ್ದ ಮಹಿಳೆ ಹಾಗೂ ಇತರ ಮೂವರ ವಿರುದ್ಧ ಸಂತ್ರಸ್ತರು ದೂರು ನೀಡಿದ್ದು ಈ ಸಂಬಂಧ ಕೇಸ್ ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ