ಶಿವಮೊಗ್ಗದಲ್ಲಿ ಸಾದ್ವಿ ಪ್ರಗ್ಯಾಸಿಂಗ್​ ಹೇಳಿದ್ದೇನು? ಸೊಪ್ಪು ಹೆಚ್ಚುವ ಚಾಕುವಿನ ಬಗ್ಗೆ ಹೇಳಿದ್ದೇಕೆ? ಸಂಸದೆ ಆಡಿದ ಮಾತಿನ ಮುಖ್ಯ ಅಂಶಗಳು ಇಲ್ಲಿದೆ

ಶಿವಮೊಗ್ಗ : ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ದಿಕ್ಸೂಚಿ ಭಾಷಣ ಮಾಡಿದ್ರು. ಈ ವೇಳೇ ಮಾತನಾಡಿದ ಒಟ್ಟಾರೆ ಅಂಶಗಳು ಇಲ್ಲಿದೆ ಓದಿ

ಶಿವಮೊಗ್ಗದಲ್ಲಿ ಸಾದ್ವಿ ಪ್ರಗ್ಯಾಸಿಂಗ್​ ಹೇಳಿದ್ದೇನು? ಸೊಪ್ಪು ಹೆಚ್ಚುವ ಚಾಕುವಿನ ಬಗ್ಗೆ ಹೇಳಿದ್ದೇಕೆ? ಸಂಸದೆ ಆಡಿದ ಮಾತಿನ ಮುಖ್ಯ ಅಂಶಗಳು ಇಲ್ಲಿದೆ

ಹಿಂದೂಗಳು ಎಲ್ಲೇ ಇದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು.ಇದಕ್ಕೂ ಮೊದಲು ಉಡುಪಿಗೆ ದುರ್ಗಾ ಪೂಜೆಗೆ ಬರಬೇಕಿತ್ತು.ಆದರೆ ಕಾಂಗ್ರೆಸ್‌ ಅವಧಿಯಲ್ಲಿ ನನ್ನ ಮೇಲೆ ಆದ ಹಲ್ಲೆಯಿಂದಾಗಿ ನೋವು ಹೆಚ್ಚಾಗಿ ಬರಲಾಗಲಿಲ್ಲ. ಆದರೆ ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರಲೇ ಬೇಕು ಎಂದು ಬಂದಿದ್ದೇನೆ.ಜನನಿ ಜನ್ಮಭೂಮಿ ಎಂದು ನಾವು ನಂಬಿದ್ದೇನೆ. ಸ್ವರ್ಗಕ್ಕಿಂತ ಹೆಚ್ಚು ಎಂದು ಭಾವಿಸಿದ್ದೇವೆ. ಹಾಗಾಗಿ ಈ ಭೂಮಿಯ ಋಣ ತೀರಿಸಬೇಕು.

ಇದನ್ನು ಸಹ ಓದಿ : 24 ಗಂಟೆಯಲ್ಲಿ ಕಿಡ್ನ್ಯಾಪ್​ ಕೇಸ್​ ಕ್ಲೋಸ್​/ ಭದ್ರಾವತಿಯಲ್ಲಿ ಅಪಹರಣ/ ಸಾಗರದಲ್ಲಿ ಆರೋಪಿಗಳು/ ಇಂಟರ್​ಸ್ಟಿಂಗ್ ಸ್ಟೋರಿ

ಈಗ ಸಾಯುವ ಸಮಯವಲ್ಲ, ಸಾಯಿಸುವ ಸಮಯ

ನಮಗೆ ಜೀವ ನೀಡುವುದೂ ಗೊತ್ರು ಜೀವ ತೆಗೆಯುವುದೂ ಗೊತ್ತು.ನಮ್ಮನ್ನು ಹತ್ತಿಕ್ಕುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಅದನ್ನು ಮೀರಿ ನಾವು ಬೆಳೆಯಬೇಕಿದೆ.ಕಿಡಿಗೇಡಿಗಳ ಕೃತ್ಯಕ್ಕೆ ನಮ್ಮ ಅನೇಕರು ಬಲಿದಾನವಾಗಿದ್ದಾರೆ. ಹಿಂದೂ ಸಂಘಟನೆಯ ಗೋವಿಂದರಾಜ್, ಶಿವಮೂರ್ತಿ, ಗೋಕುಲ್, ಹರ್ಷ, ಪ್ರವೀಣ್ ನೆಟ್ಟಾರ್, ಪ್ರಶಾಂತ್ ಪೂಜಾರಿ, ರುದ್ರೇಶ್, ಕುಟ್ಟಪ್ಪ, ಸೌಮ್ಯ ಭಟ್ ಸೇರಿದಂತೆ ಅನೇಕರ ಬಲಿದಾನವಾಗಿದೆ. ಆದರೆ ಈಗ ಸಾಯುವ ಸಮಯ ಅಲ್ಲ. ಸಾಯಿಸುವ ಸಮಯ.

ನಾನು ಸಂಸದೆ, ಬಿಜೆಪಿಯ ಸಂಸದೆ. ಹೌದು ನಾನು ಜನರಿಗಾಗಿ ಸಂಸತ್ತಿನ ಒಳಗೆ, ಹೊರಗೆ ಹೋರಾಡುತ್ತೀದ್ದೇನೆ. ದೇಶದಲ್ಲಿ ಸಾಧು ಸಂತರ ಮೇಲೆ ಹಲ್ಲೆ, ಹತ್ಯೆ ಆದಾಗ ಯಾರೂ ಮಾತನಾಡುವುದಿಲ್ಲ.ಆದರೆ ನಾವು ಸುಮ್ಮನೆ ಕೂರುವವರಲ್ಲ.ನನಗೂ ಸಾಕಷ್ಟು ಜೀವ ಬೆದರಿಕೆ ಬರುತ್ತದೆ. ಆದರೆ ನಾನು ಅಂತಹವರಿಗೆ ಎದುರು ಬಂದು ಮಾತನಾಡುವಂತೆ ಹೇಳುತ್ತೇನೆ.

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಸರ್ಕಾರಗಳ ಮೇಲೆ ನಂಬಿಕೆ ಇಡಬೇಡಿ

ನಾನು ಇಂದು ನಾರಿಶಕ್ತಿಯಾಗಿ ಮಾತನಾಡುತ್ತಿದ್ದೇನೆ. ಸರ್ಕಾರಗಳ ಮೇಲೆ ನಂಬಿಕೆ ಇಡಬೇಡಿ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ ಸಾಧು ಸಂತರು ಬದಲಾಗುವುದಿಲ್ಲ. ಅವರನ್ನು ಕೊಲೆ ಮಾಡಲಾಗುವುದಿಲ್ಲ. ಏಕೆಂದರೆ ಅವರು ಸತ್ತ ಮೇಲೆ ಸಾಧುಗಳಾಗುತ್ತಾರೆ. ನಮಗೆ ಪುನರ್ಜನ್ಮದ ಮೇಲೆ ನಂಬಿಕೆ ಇದೆ.

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆಆನವೇರಿಮಲೆಬೆನ್ನೂರುಹರಿಹರ ಕೃಷಿಕರಿಗೆ ಅನುಕೂಲ

ಕಾಂಗ್ರೆಸ್​ನ ಪೇಟ ಬೀಳುತ್ತದೆ

ಕಾಂಗ್ರೆಸ್ ನ ಇಲ್ಲಿನ ನಾಯಕರೊಬ್ಬರಿಗೆ ಇತ್ತೀಚೆಗೆ ಹಿಂದೂಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಪೇಟ, ಧೋತಿ ಧರಿಸಲಾರಂಭಿಸಿದ್ದಾರೆ. ಆದರೆ ಅವರ ಪೇಟ ಬೀಳುತ್ತದೆ. ಹಿಂದೂಗಳಾಗಿ ಯಾರನ್ನು ತಯಾರಿಸಲಾಗುವುದಿಲ್ಲ. ಬದಲಿಗೆ ಜನ್ಮತಹಃ ಹಿಂದೂಗಳಾಗಿರಬೇಕು.ಅಂತಹವರಿಗೆ ಸರಿಯಾದ ಪಾಠ ಕಲಿಸಬೇಕು. ಮೋದಿ ಸುಮ್ಮನೆ ಪ್ರಧಾನಿಯಾಗಿಲ್ಲ. ಅವರ ಮನದಲ್ಲಿ, ದೇಹದ ಕಣದಲ್ಲಿ ಹಿಂದುತ್ವ ಇದೆ.ಗೋಧ್ರಾ ಹತ್ಯಾ ಕಾಂಡದ ಹಿನ್ನೆಲೆಯಲ್ಲಿ ಮೋದಿಗೆ ಅಮೇರಿಕ ಪ್ರವೇಶ ನಿರಾಕರಿಸಿತ್ತು. ಆದರೆ ಇಂದು ಅದೇ ಅಮೇರಿಕ ಮೋದಿಯ ಕೈ ಹಿಡಿದಿದೆ.  

ಅತಿಥಿ ಮಾಲೀಕನಾದರೆ ತಕ್ಕ ಪಾಠ

ಈ ಮೊದಲು ದೇಶದ ಮೇಲೆ ಅತಿಕ್ರಮಣವಾದಾಗ ನಮ್ಮ ಜನ ಸಾಯುತ್ತಿದ್ದರು. ಹಲ್ಲೆಗೊಳಗಾಗುತ್ತಿದ್ದರು. ಮುಂಬಯಿ ಮೇಲೆ ದಾಳಿಯಾದಾಗ ಕಾಂಗ್ರೆಸ್‌ ಸರ್ಕಾರ ಪಾಕಿಸ್ತಾನದ ವಿರುದ್ಧ ಮಾತನಾಡುವ ಧೈರ್ಯ ಮಾಡಲಿಲ್ಲ .ಆದರೆ ಈಗ ಹಾಗಲ್ಲ. ಮೋದಿ ಆಡಳಿತದಲ್ಲಿ ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಸರಿಯಾದ ಪಾಠ ಕಲಿಸಲಾಗುತ್ತಿದೆ.  ಭಾರತ ಅತಿಥಿ ದೇವೋ ಭವ ಎಂದು ಹೇಳಿದ್ದೇ ದುಬಾರಿಯಾಗಿ ಪರಿಣಮಿಸಿತು ಅತಿಥಿಯು ಮನೆಯ ಮಾಲೀಕನಾಗಲು ಹೊರಟರೆ ತಕ್ಕ ಪಾಠ ಕಲಿಸಲು ಗೊತ್ತು.

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ನೀವು ಲವ್​ ಜಿಹಾದ್ ಮಾಡುವುದನ್ನ ಕಲಿಸಿ

ಹಿಂದೂಗಳನ್ನು ಅವಹೇಳನ ಮಾಡುವುದನ್ನು ಕಾಂಗ್ರೆಸ್‌ ನಿಲ್ಲಿಸಬೇಕು. ಏಕೆಂದರೆ ಹಿಂದೂಗಳು ಇಂದು ಎಚ್ಚರಗೊಂಡಿದ್ದಾರೆ. ರೋಹಿಂಗ್ಯಾಗಳಿಂದ ದೇಶದಲ್ಲಿ ದುರ್ಘಟನೆ ನಡೆಯುತ್ತಿದೆ. ಹಿಂದುಗಳ ಜಾಗೃತಿ ಮಾಡುವುದರ ಜೊತೆಗೆ ರಕ್ಷಣೆ ಮಾಡುವುದು ಗೊತ್ತು. ಲವ್ ಜೆಹಾದ್ ಪೀಡುಗಿನಂತೆ ಪರಿಣಮಿಸಿದೆ. ಲವ್ ಜಿಹಾದ್ ಮಾಡುವುದನ್ನು ನೀವು ಕಲಿಸಿ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸಂಸ್ಕೃತಿ ಕಲಿಸಿ.

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಮನೆಯಲ್ಲಿ ಸೊಪ್ಪು ಹೆಚ್ಚುವ ಚಾಕುವನ್ನ ಇಡಿ

ಮನೆಯಲ್ಲಿ ಶಸ್ತ್ರಾಸ್ತ್ರ ಇಡಿ. ಕನಿಷ್ಠ ಪಕ್ಷ ಸೊಪ್ಪು ಹೆಚ್ಚುವ ಚಾಕುವನ್ನಾದರೂ ಇಡಿ. ಆತ್ಮರಕ್ಷಣೆಯ ಅಧಿಕಾರ ಎಲ್ಲರಿಗೂ ಇದೆ. ಅದು ತಪ್ಪಲ್ಲ.ಮಿಷನರಿ ಸಂಸ್ಕೃತಿಗೆ ಮಕ್ಕಳನ್ನು ತಳ್ಳಬೇಡಿ. ಅದು ಹಿರಿಯರನ್ನು ವೃದ್ದಾಶ್ರಮಕ್ಕೆ ತಳ್ಳುತ್ತದೆ. ಅದರ ಬದಲು ನಮ್ಮ ಸಂಸ್ಕಾರ, ಆಚಾರ-ವಿಚಾರ, ಹಿರಿಮೆ ತಿಳಿಸಿ. ಅದರಿಂದ ಮಕ್ಕಳು ಸತ್ಪ್ರಜೆಗಳಾಗುತ್ತಾರೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹೆಣ್ಣುಮಕ್ಕಳ ಮೇಲೆ ಕೈ ಹಾಕುವವರ ಇನ್ನೊಂದು ಕೈ ಕಡಿಯಬೇಕು

ರಾಮನ ಮರ್ಯಾದೆ, ಮಹಾಭಾರತದ ಭಗವದ್ಗೀತೆಯ ಮಹತ್ವ ತಿಳಿಸಿ.ನಮ್ಮ ಹೆಣ್ಣು ಮಕ್ಕಳ ಮೇಲೆ ಕೈ ಹಾಕುವವರ ಇನ್ನೊಂದು ಕೈ ಕಡಿಯಬೇಕು.ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ. ಈ ಮೂಲಕ ನಮ್ಮ ಹೆಣ್ಣು ಮಕ್ಕಳು ಲವ್ ಜೆಹಾದ್ ನತ್ತ ವಾಲದಂತೆ ನೋಡಿಕೊಳ್ಳಬೇಕು. ನಮ್ಮ ಮನೆಯ, ಸಮಾಜದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುವವರಿಗೆ ತಕ್ಕ ಪಾಠ ಕಲಿಸಬೇಕಿದೆ.

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾಖಲಾಯ್ತು ಕೊರೊನಾ ಪಾಸಿಟಿವ್ ಕೇಸ್​

ಅಚ್ಚೆದಿನ್​ಗೆ ಉತ್ತರ ಇಲ್ಲಿದೆ

ಹಿಂದೂಗಳ ಸ್ವಾಭಿಮಾನದ ಪ್ರತಿ ರೂಪವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕಾಶಿಯಲ್ಲೂ ಇದೇ ರೀತಿ ಆಗುತ್ತದೆ.ನ್ಯಾಯಾಲಯದಿಂದ ಒಳ್ಳೆಯ ತೀರ್ಪು ಬರುವುದು. ದೇಶದ ಗಡಿ ಸುರಕ್ಷಿತವಾಗಿರುವುದು ಅಚ್ಛೇ ದಿನ್ ಬಂದಿರುವುದರ ಸಂಕೇತ. ಅಚ್ಛೇ ದಿನ್ ಎಲ್ಲಿ ಬಂದಿದೆ ಎಂದು ಕೇಳುವವರಿಗೆ ಇದೇ ಉತ್ತರವಾಗಿದೆ. ಯಾವುದೇ ರೀತಿಯ ಅತ್ಯಾಚಾರ, ಆಕ್ರಮಣ ಸಹಿಸಬಾರದು. ಪ್ರಾಣ, ಆತ್ಮ, ಸಮಾಜ, ದೇಶದ ರಕ್ಷಣೆಗೆ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು ತಪ್ಪಲ್ಲ

ತಿಂಗಳುಗಳ ನಂತರ ಶಿವಮೊಗ್ಗದಲ್ಲಿ ದಾಖಲಾದ ಕೊರೊನಾ ಕೇಸ್​ನ ಹಿನ್ನೆಲೆ ಏನು ಗೊತ್ತಾ? ಆರೋಗ್ಯಾಧಿಕಾರಿ ಹೇಳಿದ್ದೇನು?

ಶಿವಾಜಿಯ ನೀತಿಯ ಅಗತ್ಯವಿದೆ. 

ನಮಗೆ ಶಾಂತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ನಮ್ಮ ಸಂಸ್ಕೃತಿಯಲ್ಲೇ ಅದು ಇದೆ. ಹಾಗೆಯೇ ಸಂಘಟನೆ ಬಗ್ಗೆ ಹೇಳುವುದೂ ಬೇಡ.  ವಸುಧೈವ ಕುಟುಂಬಕಂ ಎಂಬುದರಲ್ಲಿ ನಂಬಿಕೆ ಇಟ್ಟವರು.ಈ ಮೊದಲು ಒಂದೇ ಪಕ್ಷ ಅಧಿಕಾರದಲ್ಲಿತ್ತು.ಆದರೆ ಇಂದು ಹಾಗಿಲ್ಲ.  ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದ ನಂತರ ದೇಶದ ಚಿತ್ರಣ ಬದಲಾಗಲಾರಂಭಿಸಿತು.ಯಾವುದೇ ವಿರೋಧ ವಿಲ್ಲದೆ ಜಾರಿಯಾಗಬೇಕಿದ್ದ ಕಾಮನ್ ಸಿವಿಲ್ ಕೋಡನ್ನು ಉದ್ದೇಶಪೂರ್ವಕವಾಗಿ ವಿರೋಧಿಸಲಾಗುತ್ತಿದೆ.ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕಿದೆ. ಹಾಗೆಯೇ ಮಹಿಳೆಯ ಜೀವನ ಮಟ್ಟ ಸುಧಾರಿಸಬೇಕಿದೆ. ಜನಸಂಖ್ಯೆ ನಿಯಂತ್ರಣದಲ್ಲಿದ್ದರೆ ದೇಶ ಸುರಕ್ಷಿತವಾಗಿರುತ್ತದೆ. ಶಿವಾಜಿಯ ನೀತಿಯನ್ನು ಅಳವಡಿಸಿಕೊಳ್ಳುವ ಅಗತ್ಯ ಬಿದ್ದರೆ ಅದಕ್ಕೆ ಹಿಂಜರಿಯಬಾರದು.ಆಗ ಮಾತ್ರ ಭಾರತ ವಿಶ್ವ ಗುರುವಾಗಲು ಸಾಧ್ಯ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link