ಅಡಿಕೆ ರೇಟು, 2000 ರೂಪಾಯಿ ನೋಟು! ಏನಿದು ಲಿಂಕ್! ಇನ್ನೂ ಹೆಚ್ಚಾಗುತ್ತಾ ದರ!?

Rs 2,000 note, arecanut rate! What a link! The rate is still going up!?

ಅಡಿಕೆ ರೇಟು, 2000 ರೂಪಾಯಿ ನೋಟು! ಏನಿದು ಲಿಂಕ್! ಇನ್ನೂ ಹೆಚ್ಚಾಗುತ್ತಾ ದರ!?

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS 

2 ಸಾವಿರ ರೂಪಾಯಿ ನೋಟು ವಾಪಸ್​ ಎಂಬ ಕೇಂದ್ರ ಸರ್ಕಾರದ ನಿರ್ಧಾರ, ಅಡಿಕೆ ಬೆಲೆ ಹೆಚ್ಚಾಗಲು ಕಾರಣವಾಗಿದ್ಯಾ? ಹೀಗೊಂದು ಅಭಿಪ್ರಾಯವೂ ಅಡಿಕೆ ಮಾರಾಟದ ಬಗ್ಗೆ ತಿಳಿದವರಿಂದ ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಅಡಿಕೆ ರೇಟು ಹೆಚ್ಚಾಗುತ್ತಿದೆ. ಅಡಿಕೆ ರೇಟು ಹೆಚ್ಚಾಗಲು ಕಾರಣವಾಗಿದ್ದು ಎನು ಎನ್ನುವ ಪ್ರಶ್ನೆಗೆ ನಾನಾ ಅಭಿಪ್ರಾಯಗಳು ಕೇಳಿಬರುತ್ತಿದೆ. ತಗ್ಗಿದ ಅಡಿಕೆ ಉತ್ಪಾದನೆ, ಎಲೆಚುಕ್ಕಿ ರೋಗದಿಂದ ಆದ ಸಮಸ್ಯೆಯಿಂದಾಗಿಯು ಅಡಿಕೆ ಪೂರೈಕೆಯಲ್ಲಿ ವತ್ಯಾಸವಾಗಿ ಅಡಿಕೆ ದರ ಏರುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ವಿದೇಶಿ ಅಡಿಕೆಯ ಮೇಲಿನ ನಿಯಂತ್ರಣವೂ ಅಡಿಕೆ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. 

ಮಳೆಗಾಲದಲ್ಲಿ ಅಡಿಕೆ ಲಾಟರಿ ! 82 ಸಾವಿರದ ಗಡಿದಾಟಿದ ಸರಕು! ಎಷ್ಟಿದೆ ರೇಟು!?

ವ್ಯಾಪಾರಸ್ಥರು ತಮ್ಮದೇ ಕಾರಣಕೊಟ್ಟು ಅಡಿಕೆ ದರ ಏರಿಕೆಯನ್ನು ವಿಮರ್ಶೆ ಮಾಡುತ್ತಿದ್ಧಾರೆ. ಕಳೆದ ಮೇ ತಿಂಗಳಿನಿಂದ ಏರಿಕೆ ಕಾಣುತ್ತಿರುವ ಅಡಿಕೆ ದರ ಇದೀಗ 80 ಸಾವಿರದ ಗಡಿ ದಾಟಿದೆ, ರಾಶಿ ಅಡಿಕೆ ಐವತ್ತಾರು ಸಾವಿರದ ಗಡಿಯಲ್ಲಿದೆ. ಈ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾದ್ಯತೆ ಇದೆ. ಆದರೆ, ಅದಾಗಲೇ ಬಹುತೇಕ ರೈತರು ಅಡಿಕೆಯನ್ನು ಮಾರಾಟ ಕೂತಿದ್ಧಾರೆ. ಹೀಗಾಗಿ ಬೆಲೆ ಏರಿಕೆಯಿಂದ ಬಹುತೇಕ ಬೆಳೆಗಾರರಿಗೆ ಲಾಭ ತರುತ್ತಿಲ್ಲ. 


ಸಿಗಂದೂರು ಬೆನ್ನಲ್ಲೆ ಹಸಿರುಮಕ್ಕಿಯಲ್ಲಿಯು ಸಿಕ್ತು ಸಾರ್ವಜನಿಕರಿಗೆ ಒಳ್ಳೆ ಸುದ್ದಿ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಸಿರುಮಕ್ಕಿಯಲ್ಲಿ,  ಲಾಂಚ್ ಓಡಾಟ (Hasirumakki launch)  ಮತ್ತೆ  ಆರಂಭವಾಗಿದೆ.  ಮಳೆಯಿಲ್ಲದೆ, ಹಿನ್ನೀರಿನ ಪ್ರಮಾಣ ತಗ್ಗಿತ್ತು. ಈ ಹಿನ್ನೆಲೆಯಲ್ಲಿ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶರಾವತಿಯಲ್ಲಿ ಹಿನ್ನೀರು ಮೇಲಕ್ಕೆ ಬಂದಿದೆ. ಹೀಗಾಗಿ ಲಾಂಚ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕಳೆದ ಶುಕ್ರವಾರ ಸಿಗಂದೂರನ್ನು ಸಂಪರ್ಕಿಸುವ ಲಾಂಚ್ ಸಂಚಾರದಲ್ಲಿ ವಾಹನ ಸಾಗಾಟಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇವತ್ತಿನಿಂದಲೇ ಹಸಿರುಮಕ್ಕಿ ಲಾಂಚ್ ಓಡಾಟ ಆರಂಭಿಸಲಿದೆ.