ಅಡಿಕೆ ರೇಟ್​ ದಿಢೀರ್​ ಕುಸಿತ! ಶಾಕಿಂಗ್​ ನ್ಯೂಸ್​ ಕೊಟ್ಟ ಆರ್​.ಎಂ. ಮಂಜುನಾಥ್​ ಗೌಡ! ಎಲೆಚುಕ್ಕಿ ರೋಗ ಬೆಳೆಗಾರರಿಗೆ ಕಂಟಕನಾ!?

ಅಡಿಕೆ ರೇಟ್​ ದಿಢೀರ್​ ಕುಸಿತ! ಶಾಕಿಂಗ್​ ನ್ಯೂಸ್​ ಕೊಟ್ಟ ಆರ್​.ಎಂ. ಮಂಜುನಾಥ್​ ಗೌಡ! ಎಲೆಚುಕ್ಕಿ ರೋಗ ಬೆಳೆಗಾರರಿಗೆ ಕಂಟಕನಾ!? The rate of arecanut has dropped drastically! Shocking news from R.M. Manjunath Gowda! Is leaf spot disease a menace to the growers!?

ಅಡಿಕೆ ರೇಟ್​ ದಿಢೀರ್​ ಕುಸಿತ!  ಶಾಕಿಂಗ್​  ನ್ಯೂಸ್​ ಕೊಟ್ಟ ಆರ್​.ಎಂ. ಮಂಜುನಾಥ್​ ಗೌಡ! ಎಲೆಚುಕ್ಕಿ ರೋಗ ಬೆಳೆಗಾರರಿಗೆ ಕಂಟಕನಾ!?

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ / ಕಳೆದ ಕೆಲವು ದಿನಗಳಿಂದ ಐವತ್ತೈದು ಸಾವಿರದ ಗಡಿ ದಾಟಿ ಮುಂದಕ್ಕೆ ಹೋಗಿದ್ದ ಅಡಿಕೆ ಧಾರಣೆ, ಕಳೆದ ಮೂರು ದಿನಗಳಿಂದ ದಿಢೀರ್​ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡರ ಆರ್​. ಎಂ ಮಂಜುನಾಥ್​ ಗೌಡರವರು ಆರೋಪಿಸಿದ್ದಾರೆ. ಅಲ್ಲದೆ ಈ ದಿಢೀರ್​ ಕುಸಿತದ ಹಿಂದೆ, ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಕಳೆದ ಮೂರು ನಾಲ್ಕು ದಿನಗಳಲ್ಲಿ 56 ಸಾವಿರಕ್ಕೇರಿದ್ದ ಅಡಿಕೆ ಧಾರಣ 54 ಸಾವಿರಕ್ಕೆ ಇಳಿದಿದೆ. ನಾವೆಲ್ಲರೂ ಅಡಿಕೆ ದರ ಆರವತ್ತು ಸಾವಿರ ಕ್ವಿಂಟಾಲ್​ಗೆ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ಉತ್ತರ ಭಾರತದ  ಕೆಲವು ವ್ಯಾಪಾರಸ್ಥರ ಕುತಂತ್ರದಿಂದ ಬೆಲೆಯಲ್ಲಿ ದಿಢೀರ್ ಕಡಿಮೆಯಾಗಿರಬಹುದು ಎಂದು ಅನುಮಾನಿಸಿದರು. 

ಪ್ರತಿ ತಿಂಗಳು ಅಡಿಕೆ ಪುಡಿ ಮಾಡಲು, ಬರೋಬ್ಬರಿ ಆರು ಲಕ್ಷ ಮೂಟೆ ಅಡಿಕೆ ಬೇಕಾಗುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಮೂರು ಲಕ್ಷದಷ್ಟು ಅಡಿಕೆ ಮೂಟೆ ಪೂರೈಕೆಯಾಗುತ್ತಿದೆ. ಇದರಿಂದಲೇ ಅಡಿಕೆಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಹಾಗಿದ್ದಾಗಲೂ ಬೆಲೆಯಲ್ಲಿ ದಿಢೀರ್ ಕುಸಿತವಾಗಲು ಕಾರಣವೇನು ಎಂಬುದನ್ನ ಹುಡುಕಿದರೇ ಕೆಲವೊಂದು ಅನುಮಾನಗಳು ವ್ಯಕ್ತವಾಗುತ್ತದೆ ಎಂದು ಮಂಜುನಾಥ್ ಗೌಡರು ಹೇಳಿದ್ದಾರೆ. 

ಇನ್ನೂ ಅಡಿಕೆಗೆ ಹಳದಿ ರೋಗ, ಚಂಡೆ ರೋಗ ಬಳಿಕ ಎಲೆಚುಕ್ಕಿ ರೋಗ ಇನ್ನಿಲ್ಲದಂತೆ ಭಾದಿಸುತ್ತಿದೆ. ಅಲ್ಲದೆ ಇದಿರಂದಾಗಿ ಅಡಿಕೆ ಬೆಳೆ ಬಹಳಷ್ಟು ಕಡಿಮೆಯಾಗಿದೆ. ಮೈಲುತುತ್ತಾ ಬಿಟ್ಟು ಈ ರೋಗಕ್ಕೆ ಬೇರೊಂದು ಔಷಧಿ ಕಂಡು ಹಿಡಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಈ ವರ್ಷವೂ ಬಹಳ ವೇಗವಾಗಿ ಎಲ್ಲೆಡೆ ಎಲೆಚುಕ್ಕಿ ರೋಗ ಹರಡುತ್ತಿದೆ. ಮಲೆನಾಡಿನ ಪ್ರತಿ ಜಿಲ್ಲೆಗಳಲ್ಲಿ  ಕಳೆದ 8 ದಿನಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಆಗುಂಬೆಯಲ್ಲಿ ನೂರು ಕ್ವಿಂಟಾಲ್​ ಅಡಿಕೆ ಬೆಳೆಯುತ್ತಿದ್ದ ರೈತ, ಈ ರೋಗದಿಂದ ಹತ್ತಿಪ್ಪತ್ತು ಕ್ವಿಂಟಾಲ್ ಅಡಿಕೆ ಬೆಳೆಯವಷ್ಟು ಕುಸಿತ ಕಂಡಿದ್ದಾನೆ. ಕಾಡಂಚಿನ ಪ್ರದೇಶಗಳಲ್ಲಿ ಅಷ್ಟೆ ಅಲ್ಲದೆ ನಗರ ಪ್ರದೇಶಗಳ ಬಳಿಯಲ್ಲಿಯು ಎಲೆಚುಕ್ಕಿ ರೋಗ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ, ಅಡಿಕೆ ಬೆಳೆಗಾರರಿಂದ ಜಿಎಸ್​ಟಿಯನ್ನು ಪಡೆಯುತ್ತದೆ. ಲಕ್ಷಾಂತರ ಕೋಟಿ ಜಿಎಸ್​ಟಿ ಸಂಗ್ರಹಿಸುವ ಸರ್ಕಾರ, ಅಡಿಕೆ ಬೆಳೆಗೆ ಕಾಡುತ್ತಿರುವ ರೋಗಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರ್​ ಎಂ ಮಂಜುನಾಥ್ ಗೌಡರು ಆರೋಪಿಸಿದ್ದಾರೆ. 

ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?