ಹೊಸನಗರದ ಉರುಳಿಗೆ ಸಿಕ್ಕ ಚಿರತೆ ! ಕಾಡಿನ ಶಿಕಾರಿಗೆ ಸ್ಕೆಚ್​ ಹಾಕಿದವರಿಗಾಗಿ ಅರಣ್ಯ ಇಲಾಖೆ ಹುಡುಕಾಟ

Leopard found in Hosanagara taluk Forest department searches for those who sketched the poaching of wild animal

ಹೊಸನಗರದ ಉರುಳಿಗೆ ಸಿಕ್ಕ ಚಿರತೆ ! ಕಾಡಿನ ಶಿಕಾರಿಗೆ ಸ್ಕೆಚ್​ ಹಾಕಿದವರಿಗಾಗಿ ಅರಣ್ಯ ಇಲಾಖೆ ಹುಡುಕಾಟ

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಹೊಸನಗರ/ ತಾಲ್ಲೂಕಿನ  ನಗರ ಹೋಬಳಿಯಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿದೆ. ಕಾಡು ಮೃಗಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಸಾಧ್ಯತೆ ಇದೆ. 

ಇಲ್ಲಿನ ಅಂಡಗದೋದೂರು ಗ್ರಾಮದ ಸರ್ವೆ ನಂಬರ್ 64 ರಲ್ಲಿ ಘಟನೆ ನಡೆದಿದ್ದು, ಸುಮಾರು  4-5 ವರ್ಷ ಪ್ರಾಯದ ಗಂಡು ಚಿರತೆ ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ. 

ಸ್ಥಳಕ್ಕೆ ನಗರ ವಲಯ ಅರಣ್ಯ ಅಧಿಕಾರಿ ಸಂಜಯ್ ಭೇಟಿ  ನೀಡಿದ್ದು, ಪ್ರಕರಣದ ದಾಖಲಿಸಿಕೊಂಢಿದ್ದಾರೆ. ಇನ್ನೂ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂತ್ಯಕ್ರಿಯೆ ನಡೆಸಲಾಗಿದೆ. ಇನ್ನೂ ಘಟನೆ ಸಂಬಂಧ ಉರುಳು ಹಾಕಿದವರ ವಿರುದ್ಧ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ. 

ಸಚಿವರಾದ ಮಧು ಬಂಗಾರಪ್ಪ! ಶಿವಮೊಗ್ಗದಲ್ಲಿ ವಿಶೇಷ ಸಂಭ್ರಮ!

ಶಿವಮೊಗ್ಗ   ಕರ್ನಾಟಕ ರಾಜ್ಯ ಸರ್ಕಾರ ದ ಸಚಿವರಾಗಿ ಮಧು ಬಂಗಾರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಗಮಿಸುತ್ತಲೇ , ಅಭಿಮಾನಿಗಳು ಘೋಷಣೆ ಕೂಗಿದರು. ಇನ್ನೂ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ  ಮಧು ಬಂಗಾರಪ್ಪ ಬಳಿಕ ರಾಜ್ಯ ಪಾಲರಿಂದ ಶಭಾಶಗಳನ್ನು ಸ್ವೀಕರಿಸಿದರು. 

ಶಿವಮೊಗ್ಗದಲ್ಲಿ ಸಂಭ್ರಮ

ಮಧು ಬಂಗಾರಪ್ಪ ಸಚಿವರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯ್ತು. ಶಿವಪ್ಪ ನಾಯಕ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. 

ಭುಜ ತಟ್ಟಿದ ಸಿದ್ದರಾಮಯ್ಯ, ಆಶೀರ್ವಾದ ಮಾಡಿದ ಡಿಕೆಶಿ

ಇನ್ನೂ ಈ ವೇಳೆ ಸಿದ್ದರಾಮಯ್ಯರಿಗೆ  ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಧು ಬಂಗಾರಪ್ಪರ ಬೆನ್ನತಟ್ಟಿ ಸಿದ್ದರಾಮಯ್ಯರವರು ಫೋಟೋಗೆ ಪೋಸು ಕೊಟ್ಟರು. ಇತ್ತ ಡಿಸಿಎಂ ಶಿವಕುಮಾರ್​ರವರು ಮಧು ಬಂಗಾರಪ್ಪರವರ ತಲೆಯ ಮೇಲೆ ಕೈಯಿಟ್ಟು ಒಳ್ಳೇದಾಗಲಿ ಎಂದು ಶುಭ ಹಾರೈಸಿದರು. ಇವರ ಜೊತೆ ಸ್ಪೀಕರ್ ಯುಟಿ ಖಾದರ್​ ಕೂಡ ಮಧು ಬಂಗಾರಪ್ಪರವರಿಗೆ ಶುಭ ಹಾರೈಸಿದರು. 

ಸಾರೆ ಕೊಪ್ಪದ ನೆನಪು

ಹಿಂದೆ ಶಿವಮೊಗ್ಗದ ದೀಮಂತ ನಾಯಕ ಸಾರೆಕೊಪ್ಪ ಬಂಗಾರಪ್ಪರವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಮನ ಗೆದ್ದಿದ್ದರು. ಇದೀಗ ಅವರ ಎರಡನೇ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್​ ಸರ್ಕಾರದಲ್ಲಿ ಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇದೇ ವೇಳೆ ಪ್ರಮಾಣ ಸ್ವೀಕರಿಸುವಾಗ ಮಧು ಬಂಗಾರಪ್ಪ ಸಾರೆಕೊಪ್ಪ ಮಧು ಬಂಗಾರಪ್ಪ ಎಂಬ ನಾನು ಎಂದೇ ಆರಂಭಿಸಿದ್ದು, ದಿವಂಗತ ಬಂಗಾರಪ್ಪನವರ ನೆನಪು ಮಾಡಿಕೊಟ್ಟಿತ್ತು.

ಕಾರ್​ ಡ್ರೈವ್ ಮಾಡಿದ ಶಿವಣ್ಣ

ಇನ್ನೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಶಿವರಾಜ್​ಕುಮಾರ್ (Shivarajkumar)  ಮಧು ಬಂಗಾರಪ್ಪರವರನ್ನ ಕಾರಿನಲ್ಲಿ ಕೂರಿಸಿಕೊಂಡು ಡ್ರೈವ್ ಮಾಡಿಕೊಂಡು ಹೋಗಿದ್ಧಾರೆ. ಮುಂದೆ ತಮ್ಮ ಪತ್ನಿ ಗೀತಾ ಶಿವರಾಜ್​ ಕುಮಾರ್​ನ್ನ ಕೂರಿಸಿಕೊಂಡಿದ್ದ ಶಿವಣ್ಣ, ಹಿಂದೆ ಮಧು ಬಂಗಾರಪ್ಪ ಹಾಗೂ ಅವರ ಕುಟುಂಬವನ್ನ ಕೂರಿಸಿಕೊಂಡು ರಾಜಭವನಕ್ಕೆ ಕಾರ್ ಡ್ರೈವ್ ಮಾಡಿಕೊಂಡು ತೆರಳಿದರು. ಈ ವೇಳೆ ಮಾಧ್ಯಮದವರು ಮುತ್ತಿಕೊಂಡು  ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ, ಮಧು ಬಂಗಾರಪ್ಪ ಕೈ ಬೀಸಿ ಧನ್ಯವಾದ ಹೇಳಿದರು,