KARNATAKA NEWS/ ONLINE / Malenadu today/ May 27, 2023 SHIVAMOGGA NEWS
Malenadu today/ ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ಮೊಬೈಲ್ ನೆಟ್ವರ್ಕ್ ಪ್ರಾಬ್ಲಮ್ ಬಗ್ಗೆ ದೊಡ್ಡ ಹೋರಾಟ ನಡೆದಿದ್ದನ್ನ ಎಲ್ಲರೂ ಗಮನಿಸಿದ್ದರು. ತದನಂತರ ಜನಪ್ರತಿನಿಧಿಗಳು ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನವನ್ನು ಸಹ ಪಟ್ಟಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ 4 ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ’ ನೀಡಿದೆ ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ರವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಎಲ್ಲೆಲ್ಲಿ? | ಎಷ್ಟೆಷ್ಟು? |
|---|---|
ಸಾಗರ | 89 |
ಹೊಸನಗರ | 35 |
ತೀರ್ಥಹಳ್ಳಿ | 27 |
ಶಿವಮೊಗ್ಗ | 18 |
ಶಿಕಾರಿಪುರ | 13 |
ಭದ್ರಾವತಿ | 08 |
ಸೊರಬ | 08 |
ಬೈಂದೂರು | 25 |
ಒಟ್ಟು | 225 |
ಒಟ್ಟು 225 ಮೊಬೈಲ್ ಟವರ್ಗಳ ಪೈಕಿ, ಸಾಗರ ತಾಲೂಕಿಗೆ 89, ಹೊಸನಗರಕ್ಕೆ 35, ತೀರ್ಥಹಳ್ಳಿಗೆ 27, ಶಿವಮೊಗ್ಗಕ್ಕೆ 18, ಶಿಕಾರಿಪುರಕ್ಕೆ 13, ಭದ್ರಾವತಿ ಹಾಗೂ ಸೊರಬ ತಾಲೂಕಿಗೆ ತಲಾ 8 ಮತ್ತು ಬೈಂದೂರು ಕ್ಷೇತ್ರಕ್ಕೆ 25 ಟವರ್ ಗಳು ಮಂಜೂರಾಗಿದೆ
ಆರಂಭಿಕ ಮೂರು ಹಂತಗಳಲ್ಲಿ ಶಿವಮೊಗ್ಗ ಜಿಲ್ಲೆಯ 112 ಹಾಗೂ ಬೈಂದೂರು ಕ್ಷೇತ್ರದಲ್ಲಿ 25 ಟವರ್ ಸ್ಥಾಪನೆಗೆ ಅನುಮತಿ ಲಭ್ಯವಾಗಿದ್ದು, ಬಿ.ಎಸ್.ಎನ್.ಎಲ್. ಸಂಸ್ಥೆಯು ಟವರ್ ಸ್ಥಾಪನೆಗೆ ಸೂಕ್ತ ಜಾಗಗಳ ಗುರುತಿಸಿದೆ. ಈ ಸಂಬಂಧ ಭೂಮಿ ಹಸ್ತಾಂತರದ ಪ್ರಕ್ರಿಯೆ ಆರಂಭವಾಗಬೇಕಿದೆ.
ತಲಾ ಒಂದು ಟವರ್ಗೆ ಅಂದಾಜು, 75 ಲಕ್ಷ ರೂ.ಗಳಿಂದ 1 ಕೋಟಿವರೆಗೂ ಖರ್ಚಾಗುವ ಸಾಧ್ಯತೆ ಇದ್ದು, ಒಟ್ಟಾರೆ, 200 ಕೋಟಿಗೂ ಅಧಿಕ ಮೊತ್ತ ಈ ಕಾಮಗಾರಿಗೆ ಖರ್ಚಾಗಲಿದೆ.
