AIRPORT ಉದ್ಘಾಟನೆಗೆ ಜನ ಸೇರಿಸುವ ಬದಲು ವಿದ್ಯಾರ್ಥಿಗಳನ್ನ ಸೇರಿಸ್ತಿದೆಯಾ ಬಿಜೆಪಿ? ಬೇಳೂರು ಗೋಪಾಲ ಕೃಷ್ಣರ ಆರೋಪವೇನು!?

For the inauguration of the AIRPORT, is the BJP adding students instead of people? What is the allegation of Belur Gopala Krishna?

AIRPORT  ಉದ್ಘಾಟನೆಗೆ ಜನ ಸೇರಿಸುವ ಬದಲು ವಿದ್ಯಾರ್ಥಿಗಳನ್ನ ಸೇರಿಸ್ತಿದೆಯಾ ಬಿಜೆಪಿ? ಬೇಳೂರು ಗೋಪಾಲ ಕೃಷ್ಣರ ಆರೋಪವೇನು!?

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗವಿಮಾನ ನಿಲ್ದಾಣ ಉದ್ಘಾಟನೆಗೆ ಮಕ್ಕಳನ್ನು ಕರೆಸಿಕೊಳ್ಳುತ್ತಿದ್ಧಾರೆ, ಎಲ್ಲಾ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ದುಂಬಾಲು ಬೀಳುತ್ತಿದ್ದಾರೆ.  ಪ್ರಾಂಶುಪಾಲರ ಬಳಿ ಪ್ರಧಾನ ಮಂತ್ರಿಯವರು ಬರುತ್ತಿದ್ದಾರೆ. ಶಾಲೆಯ ಬಾಗಿಲು ಮುಚ್ಚಿ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿ ಎಂದು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಿಜೆಪಿಗೆ ಬರಬಾರದಿತ್ತು. ಇದು ತನಿಖೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದ್ಧಾರೆ. ಅಲ್ಲದೆ ಈ ಸಂಬಂಧ ಕಾಂಗ್ರೆಸ್​ ಪಕ್ಷದ  ಎನ್‍ಎಸ್‍ಯುಐ ಘಟಕ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದಿದ್ಧಾರೆ. 

READ :  ಪ್ರಯಾಣಿಕರಲ್ಲಿ ವಿನಂತಿ! ಫೆಬ್ರವರಿ 26 ಮತ್ತು 27 ಕೆಎಸ್​ಆರ್​ಟಿಸಿ ಬಸ್ ಸಂಚಾರಲ್ಲಿ ವ್ಯತ್ಯಯ! ಕಾರಣ ಇಲ್ಲಿದೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಕಣ್ಣೀರಿನ ಶಾಪ ಬಿಜೆಪಿಗೆ ತಟ್ಟದೇ ಇರದು ಎಂದರು, ಅಲ್ಲದೆ  ಬಿಎಸ್ ವೈ ಇಲ್ಲದೆ 40 ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದರು. ಬಿಎಸ್​ ಯಡಿಯೂರಪ್ಪ ಅಭಿವೃದ್ಧಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಗ್ಗೆ ಪ್ರೀತಿಯಿದೆ. ಆದರೆ ಅವರನ್ನ ಕಣ್ಣಿರು ಹಾಕಿಸಿ ಅಧಿಕಾರದಿಂದ ಕೆಳಕ್ಕಿಯುವಂತೆ ಮಾಡಿದ್ದಕ್ಕೆ ನೋವಿದೆ ಎಂದರು. ಬಿಜೆಪಿಯಲ್ಲಿ ಬಿಎಸ್​ವೈ ವಿರೋಧಿ ದೊಡ್ಡಪಡೆಯೇ ಇದೆ. ಅದರಲ್ಲಿ ಈಶ್ವರಪ್ಪ ಕೂಡ ಒಬ್ಬರು, ಅವರು ಅಮಿತ್ ಶಾರನ್ನ ಸರ್ದಾರ್ ವಲ್ಲಭಭಾಯಿ ಪಟೇಲ್​ಗೆ ಹೋಲಿಸುತ್ತಾರೆ. ಅವರೇ ಮಹಿಷಾಸುರ ರೀತಿಯಲ್ಲಿ ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ರು ಅಲ್ಲದೆ  ಪ್ರತಾಪಸಿಂಹರಿಗೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ರು. 

READ : ಆತಂಕ ಮೂಡಿಸಿದ ಕೆಂಜಿಗಾಪುರ ಭಟ್ಟರ ಮನೆಯ ರಾಬರಿ ಕೇಸ್!ಒಬ್ಬರೇ ಟಾರ್ಗೆಟ್! ಒಂದೇ ವಾರದಲ್ಲಿ 2 ಸಲ ರಾಬರಿ ₹5 ಲಕ್ಷಕ್ಕೂ ಹೆಚ್ಚು ರಾಬರಿ! ಸಾಗರ ಪೊಲೀಸರಿಗೆ ಸವಾಲಾಯ್ತಾ ಕೇಸ್​

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #