ಒಂದು ವಾಟ್ಸ್ಯಾಪ್​ ಮೆಸೇಜ್​ ನಿಮ್ಮ ಅಕೌಂಟ್​ನ್ನೇ ಖಾಲಿ ಮಾಡುತ್ತೆ! ಹೇಗೆ ಗೊತ್ತಾ?

A WhatsApp message empties your account! Do you know how?

ಒಂದು ವಾಟ್ಸ್ಯಾಪ್​ ಮೆಸೇಜ್​  ನಿಮ್ಮ ಅಕೌಂಟ್​ನ್ನೇ ಖಾಲಿ ಮಾಡುತ್ತೆ! ಹೇಗೆ ಗೊತ್ತಾ?

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ/ ನಗರದಲ್ಲಿ ಆನ್​ಲೈನ್​ ವಂಚನೆಗಳು ಜಾಸ್ತಿಯಾಗುತ್ತಲೇ ಇವೆ! ಅನಾಮಿಕ ಕರೆಗಳನ್ನ ಹಾಗೂ ಅನಾಮಿಕ ನಂಬರ್​ಗಳಿಂದ ಬರುವ ಮೆಸೇಜ್​ಗಳನ್ನು ನಂಬದಿರಿ! ಯಾರಿಗೂ ನಿಮ್ಮ ಬ್ಯಾಂಕ್​ ಖಾತೆಗಳ ಒಟಿಪಿಗಳನ್ನ ನೀಡಬೇಡಿ ಮತ್ತು ಹಣವನ್ನು ಹಾಕದಿರಿ ಎಂದು ಪೊಲೀಸ್ ಇಲಾಖೆ ಜಾಗೃತಿ (cyber crime awareness)ಮೂಡಿಸುತ್ತಲೇ  ಬಂದಿದೆ. ಹಾಗಿದ್ದೂ, ಜನರು ಆನ್​ಲೈನ್​ ವಂಚನೆಗಳಿಗೆ ಗುರಿಯಾಗುತ್ತಿದ್ದಾರೆ. 

ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗದ ಸಿಇಎನ್​ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್​ವೊಂದು ದಾಖಲಾಗಿದೆ. 

ನಡೆದಿದ್ದೇನು?

ಈ ಸಂಬಂದ 30 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ಧಾರೆ. ಅವರು ನೀಡಿರುವ ದೂರಿನನ್ವಯ ಎಫ್​ಐಆರ್ ಸಹ ದಾಖಲಾಗಿದೆ. ಅದರಲ್ಲಿ ಆರೋಪಿಸಿರುವಂತೆ, ಮಹಿಳೆಗೆ +23277268986 ನಂಬರ್​ನಿಂದ ವಾಟ್ಸ್ಯಾಪ್​ ಮೆಸೇಜ್​ ಬಂದಿದೆ. ಹಾಗೆ ಮೆಸೇಜ್ ಹಾಕುವ ಮೂಲಕ ಪರಿಚಯ ಮಾಡಿಕೊಂಡು, ಆ ನಂಬರ್​ ನಿಂದ ಮೆಸೇಜ್​ ಮಾಡುತ್ತಿರುವ ವ್ಯಕ್ತಿ, ತನಗೆ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬಂದಿರುತ್ತದೆ. ನಿಮಗೆ ಬಂಗಾರ ಮತ್ತು ಹಣವನ್ನು ಗಿಫ್ಟ್ ಮೂಲಕ ನಿಮಗೆ ಕಳುಹಿಸುತ್ತೇನೆ ಎಂದಿದ್ಧಾನೆ. 

ಕೊರಿಯರ್ ಹೆಸರಲ್ಲಿ ಲೂಟಿ

ಇದಕ್ಕೆ ಮಹಿಳೆ ಸಹ ಒಪ್ಪಿದ್ಧಾರೆ. ಆನಂತರ ಕೊರಿಯರ್ ಏಜೆಂಟ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ನಿಮಗೆ ಪಾರ್ಸೆಲ್​ ಬಂದಿದೆ. ಇದರ ಸರ್ವಿಸ್ ಹಾಗೂ ಕಸ್ಟಮ್ಸ್​ ಚಾರ್ಜ್​ ಎಂದು 3,59,200/- ರೂ ಹಣವನ್ನು ತನ್ನ ಅಕೌಂಟ್​ಗೆ ಹಾಕಿಸಿಕೊಂಡಿದ್ದಾನೆ. ಇದಾದ ಬಳಿಕವಷ್ಟೆ ಮಹಿಳೆಗೆ ಮೋಸ ಹೋಗಿರುವುದು ಗೊತ್ತಾಗಿದ್ದು,ಸಿಇಎನ್ ಪೊಲೀಸ್ ಸ್ಟೇಷನ್​ಗೆ  (cyber crime complaint portal)ತೆರಳಿ ದೂರು ನೀಡಿದ್ದಾರೆ. 

ಪ್ರತಿಯೊಬ್ಬರ ಮೊಬೈಲ್​ಗೂ ನೀವು ಕೋಟಿ ಗೆದ್ದೀದ್ದೀರಾ! ನಿಮ್ಮ ಮೊಬೈಲ್​ ನಂಬರ್ ಲಕ್ಷದಲ್ಲಿ ಒಂದು ಎಂಬಂತೆ ಆಯ್ಕೆಯಾಗಿದೆ. ನಿಮ್ಮ ಮೇಲೆ ದೇವರ ಕೃಪೆಯಾಗಿದೆ! ಇಂಗ್ಲೆಂಡ್​ನ ಚರ್ಚ್​​ನಿಂದ ಕೋಟ್ಟಿಗಟ್ಟಲೇ ಸಾಮಗ್ರಿಗಳನ್ನು ಗಿಫ್ಟ್ ಆಗಿ ಕಳುಹಿಸಲಾಗುತ್ತಿದೆ! ಹೀಗೆ ಹಲವು ರೀತಿಯಲ್ಲಿ ಆನ್​ಲೈನ್​ ಪ್ರಾಡ್​ಗಳು ಕರೆ ಮಾಡುತ್ತವೆ. ಅಂತಹ ಕರೆಗಳನ್ನ ನಂಬಬೇಡಿ! ಹಾಗೆ ನಂಬಿದರೂ ಅವರ ಮಾತು ಕೇಳಿ ದುಡ್ಡು ಯಾವುದೇ ಕಾರಣಕ್ಕೂ ಹಾಕಬೇಡಿ! ಯಾಮಾರಿದರೇ, ಹಣ ಕಳೆದುಕೊಳ್ಳುವುದು ಗ್ಯಾರಂಟಿ. 

ಊಟಕ್ಕೆ ಅಂತಾ ಬಾರ್​ ಆ್ಯಂಡ್ ರೆಸ್ಟೋರೆಂಟ್​ಗೆ ಹೋಗಿ ಬರುವಷ್ಟರಲ್ಲಿ , ಹೊರಗಡೆ ಕಾದಿತ್ತು ಶಾಕ್​!

ಊಟಕ್ಕೆಂದು ಬಾರ್​ & ಎಂಡ್ ರೆಸ್ಟೋರೆಂಟ್​ ಎದುರು ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಬೈಕ್​ ಕಳ್ಳತನವಾದ ಘಟನೆಯೊಂದು ವಿನೋಬನಗರ ಪೊಲೀಸ್ ಸ್ಟೇಷನ್​ ಲಿಮಿಟ್ನಲ್ಲಿ ನಡೆದಿದೆ. ‘

ಈ ಸಂಬಂಧ ದೂರು ದಾಖಲಾಗಿದ್ದು ಎಫ್ಐಆರ್ ಸಹ ದರ್ಜ್ ಆಗಿದೆ. ಅದರ ಪ್ರಕಾರ, ರವಿ ಎಂಬವರು , ಸಾಗರ ಮೇನ್​ ರೋಡ್ ಗಾಡಿಕೊಪ್ಪದ ಬಳಿ ಇರುವ ಗಂದರ್ವ ಬಾರ್ ಆ್ಯಂಡ್ ರೆಸ್ಟೋರೆಂಟ್​ಗೆ ಮಧ್ಯಾಹ್ನ,  ಊಟಕ್ಕೆ ಎಂದು ತೆರಳಿದ್ದಾರೆ. ಈ ವೇಳೆ ಅವರ ಸ್ಪ್ಲೆಂಡರ್ ಬೈಕ್​ನ್ನ ಅವರು ರೆಸ್ಟೋರೆಂಟ್ ಎದುರಿನ ಪಾರ್ಕಿಂಗ್​ನಲ್ಲಿ ನಿಲ್ಲಿಸಿ ತೆರಳಿದ್ದಾರೆ. ಊಟ ಮುಗಿಸಿಕೊಂಡು ವಾಪಸ್ ಬಂದು ನೋಡಿದರೆ, ಬೈಕ್ ಕಾಣೆಯಾಗಿತ್ತು. ಅಲ್ಲಿದ್ದವರನ್ನ ವಿಚಾರಿಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ರವಿ, ಪೊಲೀಸರಿಗೆ ದೂರು ನೀಡಿದ್ದಾರೆ. 

ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!