DCC Bank | ಬಡ್ಡಿಮನ್ನಾದ ಜೊತೆ ಸಾಲ ತೀರಿಸಲು ಇಲ್ಲಿದೆ ಅವಕಾಶ! ಯಾರಿಗೆ ಸಿಗಲಿದೆ ಈ ಸೌಲಭ್ಯ! ಇಲ್ಲಿದೆ ವಿವರ

Here's a chance to repay the loan with an interest waiver! Who will get this facility? Here's the details of DCC Bank

DCC Bank | ಬಡ್ಡಿಮನ್ನಾದ ಜೊತೆ ಸಾಲ ತೀರಿಸಲು ಇಲ್ಲಿದೆ ಅವಕಾಶ! ಯಾರಿಗೆ ಸಿಗಲಿದೆ ಈ ಸೌಲಭ್ಯ! ಇಲ್ಲಿದೆ ವಿವರ

SHIVAMOGGA  |  Jan 25, 2024  | ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ  ರವರು ಇವತ್ತು ಸುದ್ದಿಗೋಷ್ಟಿ ನಡೆಸಿ ಬ್ಯಾಂಕ್​ನ ಗ್ರಾಹಕರಿಗೆ ರಾಜ್ಯ ಸರ್ಕಾರ ಬಿಗ್ ಆಫರ್​ವೊಂದನ್ನ ನೀಡಿದೆ ಎಂದು ಮಾಹಿತಿ ನೀಡಿದೆ. . ಅದರ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ಅವರು,  ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲ ಪಡೆದು ಸುಸ್ತಿಯಾಗಿರುವ ರೈತರು ಅಸಲನ್ನು ಫೆಬ್ರವರಿ ಅಂತ್ಯದೊಳಗೆ ಮರುಪಾವತಿ ಮಾಡಬೇಕು. ಹಾಗೆ ಮಾಡಿದ ಪಕ್ಷದಲ್ಲಿ   ಬಡ್ಡಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಆರ್​ ಎಂ ಮಂಜುನಾಥ್ ಗೌಡ 

ರಾಜ್ಯ ಸರ್ಕಾರ ರೈತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,  ಲ್ಯಾಂಪ್ಸ್ ಸಹಕಾರ ಮಹಾಮಂಡಳ, ಡಿಸಿಸಿ ಬ್ಯಾಂಕ್, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಗಳಿಂದ ಸಾಲ ಪಡೆದು 2023ರ ಡಿ.31ಕ್ಕೆ ಸುಸ್ತಿಯಾಗಿರುವ ಗ್ರಾಹಕರಿಗೆ ಈ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ರೈತರು ಫೆ.29ರೊಳಗೆ ಸುಸ್ತಿಯಾಗಿ ರುವ ಕಂತುಗಳ ಅಸಲನ್ನು ಏಕಕಂತಿನಲ್ಲಿ ಕಟ್ಟಬೇಕು ಎಂದು ತಿಳಿಸಿದ ಆರ್.ಎಂ ಮಂಜುನಾಥ್ ಗೌಡರು ಬರಗಾಲ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸುಸ್ತಿದಾರ ರೈತರನ್ನು ಋಣಮುಕ್ತರ ನ್ನಾಗಿರುಸಲು ಈ ಯೋಜನೆ ತಂದಿದೆ ಎಂದು ತಿಳಿಸಿದ್ರು. 

 

ಕೃಷಿಯೇತರ ಸಾಲ ಪಡೆದವರಿಗೂ ಬಡ್ಡಿ ಮನ್ನಾ ಯೋಜನೆಯನ್ನು ರಾಜೀ ಸಂದಾನದ ಇತ್ಯಾರ್ಥದ ಮೂಲಕ ಬಗೆಹರಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಸೂಲಾಗದಿರುವ ಅನುತ್ಪಾದಕ ಸಾಲಗಳನ್ನು ರಾಜಿ ಸಂಧಾನದ ಇತ್ಯಾರ್ಥದ ಮೂಲಕ ವಸೂಲಾತಿ ಮಾಡಲು ಕೆಲವೊಂದು ನಿಯಮಗಳ ಅಡಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ ಎಂದಿದ್ದಾರೆ.