ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲು ಭೂ ಸ್ಪರ್ಷ ಮಾಡಿ ದಾಖಲೆ ಬರೆಯುವವರು ಯಾರು ಗೊತ್ತಾ? ಇಲ್ಲಿದೆ ನಿಮ್ಮ ಕುತುಹಲಕ್ಕೆ ನಮ್ಮ ಉತ್ತರ

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಕಾಮಗಾರಿಗಳು ಭರದಿಂದ ಸಾಗಿದ್ದು, ಫೆಬ್ರವರಿ 12 ಕ್ಕೆ ಪ್ರದಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳಿಸಲು ಸಕಲ ಸಿದ್ದತೆಗಳನ್ನು ಬಿಜೆಪಿ ಕೈಗೊಂಡಿದೆ. ಇದಕ್ಕೆ ಸಾಕ್ಷಿಯಾಗಿ ಉಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಏರ್ ಪೋರ್ಟ್ ಉದ್ಘಾಟನೆಗೆ ಲೆಟರ್ ನೀಡಿ ಆಹ್ವಾನಿಸಿದ್ದಾರೆ. ಪ್ರಧಾನಿಯವರು ತಾತ್ವಿಕ ಒಪ್ಪಿಗೆ ನೀಡಿದ್ದು, ಫೆಬ್ರವರಿ 12 ರ ದಿನಾಂಕವನ್ನೇ ಫೈನಲ್ ಎಂಬಂತೆ ನಿಕ್ಕಿ ಮಾಡಿಲ್ಲ ಎನ್ನಲಾಗಿದೆ.ಈ ದಿನದ ಆಸುಪಾಸಿನಲ್ಲೇ ದಿನಾಂಕ ನಿಗದಿಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ವಿಮಾನ ನಿಲ್ದಾಣ ಉದ್ಘಾಟಿಸುವುದು ಬಹುತೇಕ ಖಚಿತವಾಗಿದೆ.

ಫೆಬ್ರವರಿ ಅಂತ್ಯದಲ್ಲಿ ನಡೆಯಲಿರುವ ರಾಜ್ಯ ಬಜೇಟ್ ಅಧಿವೇಶನಕ್ಕೂ ಮೊದಲೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಫೆಬ್ರವರಿಗೂ ಮುನ್ನ ಜನವರಿಯಲ್ಲೇ ಇದೇ ಏರ್ ಪೋರ್ಟ್ ನಲ್ಲಿ ಮೊದಲ ಲ್ಯಾಂಡ್ ಆಗುತ್ತಿರುವವರು ಯಾರು ಎಂಬ ಕುತುಹಲಕ್ಕೆ ಇಲ್ಲಿದೆ ಉತ್ತರ.

ನಾಳೆ ಅಂದ್ರೆ ದಿನಾಂಕ 18-01-23 ರಂದು ಬೆಳಿಗ್ಗೆ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ಸಂಸದ ಬಿ.ವೈ ರಾಘವೇಂದ್ರ ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಬರಲಿದ್ದು, ಸೋಗಾನೆ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಷ ಮಾಡಲಿದ್ದಾರೆ. ವಿಮಾನ ನಿಲ್ದಾಣದ ಪ್ರಗತಿಯ ಕಾಮಗಾರಿಯ ಸಭೆಯನ್ನು ಅಲ್ಲೇ ನಡೆಸಲಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ದಿ ಇಲಾಖೆಯ ಎಂಡಿ ಗೌರವ ಗುಪ್ತ ಇಂದು ರಾತ್ರಿಯೇ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅದೇ ರೀತಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡ ನಾಳಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.