ಮೊರಾರ್ಜಿ ವಸತಿ ಶಾಲೆಯ ನೂರಕ್ಕು ಅಧಿಕ ಮಕ್ಕಳು ಅಸ್ವಸ್ಥರಾಗಲು ಕಾರಣವಾಯ್ತಾ ..ಆ ಸರ್ಕಾರಿ ಕಾರ್ಯಕ್ರಮ ? ಘಟನೆ ಬಗ್ಗೆ ಅವಲೋಕಿಸಿದ್ರೆ ಅನುಮಾನಕ್ಕೆ ಕಾರಣವಾಗೋ ಅಂಶಗಳೇ ಬೇರೆ? .ಹಾಗಾದ್ರೆ ಫುಡ್ ಪಾಯಿಸನಿಂಗ್ ಗೆ ಕಾರಣವಾಗಿದ್ದು ಯಾವುದು? ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಮೊರಾರ್ಜಿ ವಸತಿ ಶಾಲೆಯ ನೂರಕ್ಕು ಅಧಿಕ ಮಕ್ಕಳು ಅಸ್ವಸ್ಥರಾಗಲು ಕಾರಣವಾಯ್ತಾ ..ಆ ಸರ್ಕಾರಿ ಕಾರ್ಯಕ್ರಮ ? ಘಟನೆ ಬಗ್ಗೆ ಅವಲೋಕಿಸಿದ್ರೆ ಅನುಮಾನಕ್ಕೆ ಕಾರಣವಾಗೋ ಅಂಶಗಳೇ ಬೇರೆ? .ಹಾಗಾದ್ರೆ ಫುಡ್ ಪಾಯಿಸನಿಂಗ್ ಗೆ ಕಾರಣವಾಗಿದ್ದು ಯಾವುದು? ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಮೊರಾರ್ಜಿ ವಸತಿ ಶಾಲೆಯ ನೂರಕ್ಕು ಅಧಿಕ  ಮಕ್ಕಳು ಅಸ್ವಸ್ಥರಾಗಲು ಕಾರಣವಾಯ್ತಾ ..ಆ ಸರ್ಕಾರಿ ಕಾರ್ಯಕ್ರಮ ?  ಘಟನೆ ಬಗ್ಗೆ ಅವಲೋಕಿಸಿದ್ರೆ ಅನುಮಾನಕ್ಕೆ ಕಾರಣವಾಗೋ ಅಂಶಗಳೇ ಬೇರೆ? .ಹಾಗಾದ್ರೆ ಫುಡ್ ಪಾಯಿಸನಿಂಗ್ ಗೆ ಕಾರಣವಾಗಿದ್ದು ಯಾವುದು?  ಟುಡೆ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

16-01-23 ರ ಸಂಜೆ ನಾಲ್ಕು ಗಂಟೆಯಿಂದ ಹಿಡಿದು ಇಂದು ಮದ್ಯಾಹ್ನದವರೆಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕದತಟ್ಟುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಸ್ವಸ್ಥ ಮಕ್ಕಳ ಸಂಖ್ಯೆಗೇನು ಕಡಿಮೆಯಿರಲಿಲ್ಲ. ಮಕ್ಕಳ ಆಕ್ರಂಧನ ಮುಗಿಲು ಮುಟ್ಟಿತ್ತು.. ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬರಿಗೂ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಿದೆ. ಕಳೆದ ರಾತ್ರಿ ಅಡ್ಮಿಟ್ ಆದವರಲ್ಲಿ ಬಹಳಷ್ಟು ಮಂದಿ ಚಿಕಿತ್ಸೆ ಪಡೆದು ವಾಪಇಂದು  ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಸಲಿಗೆ ಕಳೆದ ಸಂಜೆ ನಾಲ್ಕು ಗಂಟೆಗೆ ದಾಖಲಾದ ಇಬ್ಬರು ವಿದ್ಯಾರ್ಥಿನಿಯರಿಂದ ಆರಂಭವಾದ ದಾಖಲು ಪರ್ವ ಇಂದು ಮದ್ಯಾಹ್ನದವರೆಗೂ ಮುಂದುವರೆದಿತ್ತು.. ದಾಖಲಾದವರ ಸಂಖ್ಯೆ 130 ರ ಗಡಿ ದಾಟಿತ್ತು. ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ನೋವು ತಾಳಲಾರದೆ ಪರಿತಪಿಸುತ್ತಿದ್ದರು. ಮಾರು 130 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಅವರು ಹೇಳಿದ ವಿಷಯವೇ ಬೇರೆಯಾಗಿತ್ತು.

ಯೋಗಥಾನ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲೇ ಕಂಡುಬಂತು ವಾಂತಿ ಮತ್ತು ಹೊಟ್ಟೆನೋವು

ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾದ ವಿದ್ಯಾರ್ಥಿನಿಯರಲ್ಲಿ ಶೇಕಡಾ 100 ರಷ್ಟು ವಿದ್ಯಾರ್ಥಿಗಳು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜನವರಿ 15 ರಂದು  ಆಯೋಜಿಸಿದ್ದ ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದಾರೆ. 15 ರ ಬೆಳಿಗ್ಗೆ ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಅಂದು ಸಂಜೆ ವಾಂತಿ ಹೊಟ್ಟೆನೋವು ತಲೆನೋವು ಬೆನ್ನುನೋವು ಕಾಣಿಸಿಕೊಂಡಿದೆ.

ಕೇವಲ ಕಲುಷಿತ ನೀರು ಆಹಾರ ಸೇವನೆ ಎಂದಾದರೆ..ಕೇವಲ ಒಂದು ಹಾಸ್ಟೆಲ್ ನಲ್ಲಿ ನಡೆಯಬಹುದಾದ ಘಟನೆ ಎಂದು ಅಂದಾಜಿಸಬಹುದು. ಆದ್ರೆ ಮೇಲಿನ ಹನಸವಾಡಿ, ಹೊಳಲೂರು,ಕುಂಸಿ, ಮಲವಗೊಪ್ಪ ಗಾಜನೂರು ವಿದ್ಯಾನಗರದ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಎಲ್ಲಾ ಮೊರಾರ್ಜಿ ಶಾಲೆಗಳಿಗೂ ಒಂದು ಅಡುಗೆಮನೆಯಿಂದ ಆಹಾರ ನೀರು ಸರಬರಾಜಾಗಿದ್ದರೆ..ಹೌದು ಇದೊಂದು ರೀತಿಯಲ್ಲಿ ವ್ಯವಸ್ಥೆಯಲ್ಲಾದ ಲೋಪ ಎನ್ನಬಹುದಿತ್ತು. ಆದ್ರೆ ಪ್ರತಿ ಹಾಸ್ಟೆಲ್ ನಲ್ಲೂ ಪ್ರತ್ಯೇಕ ಅಡುಗೆ ವ್ಯವಸ್ಥೆ ಇರುವಾಗ, ಈ ಎಲ್ಲಾ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾಗಲು ಹೇಗೆ ಸಾಧ್ಯ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಅಲ್ಲದೆ ಆದಿ ಚುಂಚನಗಿರಿ ಕಾಲೇಜು ಮಕ್ಕಳ ಆರೋದ್ಯದಲ್ಲೂ ವ್ಯತ್ಯಾಸ ಕಂಡು ಬಂದಿದೆ.

ಆದರೆ ಯೋಗಥಾನ್ ನಲ್ಲಿ ಭಾಗವಹಿಸದ ಇರೋ ವಸತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ ವಾಂತಿ ಹೊಟ್ಟೆನೋವು ಕಾಣಿಸಿಕೊಂಡಿಲ್ಲ. ಅವರೆಲ್ಲಾ ಆರೋಗ್ಯವಾಗಿದ್ದಾರೆ. ಹಾಸ್ಟೆಲ್ ಊಟದಲ್ಲಿ ವ್ಯತ್ಸಾಸವಾಗಿದ್ರೆ..ಈ ಸಣ್ಣ ಮಕ್ಕಳು ಕೂಡ ಅಸ್ವಸ್ಥರಾಗಿರಬೇಕಿತ್ತು.

 ಯೋಗಥಾನ್ ನಲ್ಲಿ ಭಾಗವಹಿಸಿದ ಮಕ್ಕಳಿಗೆ ಅಂದು ಸಂಕ್ರಾಂತಿಯ ಎಳ್ಳುಬೆಲ್ಲದ ಪ್ಯಾಕೇಟ್ ನೀಡಲಾಗಿದೆ. ಅಲ್ಲದೆ ಮಜ್ಜಿಗೆಯನ್ನು ವಿತರಿಸಲಾಗಿದೆ.ಎಲ್ಲಾ ಮಕ್ಕಳು ಖುಷಿಯಾಗಿಯೇ ಹಾಸ್ಟೆಲ್ ಸೇರಿದ್ದಾರೆ. ಇದಾದ ನಂತರ ವಸತಿ ಶಾಲೆಯ ಊಟ ನೀರು ಸೇವಿಸಿದ್ದಾರೆ. ತದನಂತರದಲ್ಲಿ ಕಾಣಿಸಿಕೊಂಡ ವಾಂತಿ ಮತ್ತು ಹೊಟ್ಟೆ ನೋವು ವಿದ್ಯಾರ್ಥಿಗಳನ್ನು ಹೈರಾಣಿಸಿದೆ.

ಆಸ್ಪತ್ರೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಯೋಗಾಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೇ ಆಗಿದ್ದು, ಇಲ್ಲೇ ಎಲ್ಲೋ  ವ್ಯತ್ಯಾಸವಾದಂತೆ ಕಾಣುತ್ತಿದೆ. ವೈದ್ಯರು ವಾಂತಿ ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ಮಾದರಿಯನ್ನು  ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿ ಮಜ್ಜಿಗೆ ಕೈ ಕೊಟ್ಟಿದೆಯೋ .ಎಳ್ಳುಬೆಲ್ಲದಿಂದ ತೊಂದರೆಯಾಗಿದೆಯೋ ಅಥವಾ ಹಾಸ್ಟೆಲ್ ಊಟ ನೀರಿನಲ್ಲಿ ವ್ಯತ್ಯಾಸವಾಗಿದೆಯೋ ಎಂಬುದು ವರದಿ ಬಂದ ನಂತರವಷ್ಟೆ ಸತ್ಯಾಂಶ ಗೊತ್ತಾಗಬೇಕಿದೆ.