ಶಿವಮೊಗ್ಗ- ಭದ್ರಾವತಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯುತ್ತೆ! ಶಿವಮೊಗ್ಗದಲ್ಲಿ ವಂದೆ ಭಾರತ್​ ಟ್ರೈನ್​ ನಿರ್ವಹಣೆ?

When will the work of Shivamogga-Bhadravathi railway overbridge be completed? Vande Bharat Train Maintenance in Shimoga?

ಶಿವಮೊಗ್ಗ- ಭದ್ರಾವತಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಯಾವಾಗ ಮುಗಿಯುತ್ತೆ! ಶಿವಮೊಗ್ಗದಲ್ಲಿ ವಂದೆ ಭಾರತ್​ ಟ್ರೈನ್​ ನಿರ್ವಹಣೆ?

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸುತುವೆ ,ರೈಲ್ವೆ ಅಂಡರ್ ಬ್ರಿಡ್ಜ್​ ಕಾಮಗಾರಿಗಳಿಗೆ ಇನ್ನಷ್ಟು ವೇಗ ನೀಡಲು ಸಂಸದರ ಬಿ.ವೈ ರಾಘವೇಂದ್ರ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ನಿನ್ನೆ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಅವರು ಚರ್ಚಿಸಿದ್ಧಾರೆ. 

ಭದ್ರಾವತಿಯ ಕಡದಕಟ್ಟೆ ಹತ್ತಿರ ರೈಲ್ವೆ LC 33, ಶಿವಮೊಗ್ಗ ನಗರದ ಸವಳಂಗ ರಸ್ತೆಯ LC 49 ಹಾಗೂ ಕಾಶಿಪುರ ಗೇಟ್ ಬಳಿಯ LC 52 ರ ಬದಲಿಗೆ ನಿರ್ಮಿಸಲಾಗುತ್ತಿರುವ ROB/RUB ಗಳ ಕಾಮಗಾರಿಗಳು ಭರದಿಂದ ಸಾಗುತ್ತಿದೆ.

ಆದಾಗ್ಯು  ಅವಳಿ ನಗರಗಳ ವಾಹನಗಳ ದಟ್ಟಣೆಯ ಸಮಸ್ಯೆಗೆ ಈ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯತೆ ಸಂಸದರು ಅಧಿಕಾರಿಗಳಿಗೆ ತಿಳಿಸಿದ್ಧಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಿಸೆಂಬರ್ 2023, ಅಕ್ಟೋಬರ್ 2023 ಹಾಗೂ ಜೂನ್ 2023ರ ಒಳಗೆ ಪೂರ್ಣಗೊಳಿಸುವುದಾಗಿ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ಧಾರೆ. 

ಶಿವಮೊಗ್ಗದಲ್ಲಿಯೇ ವಂದೆ ಭಾರತ್​ ಟ್ರೈನ್​ ನಿರ್ವಹಣೆ! 

 ಶಿವಮೊಗ್ಗ ಜಿಲ್ಲೆಯ ಮೊದಲ ಕೋಚಿಂಗ್ ಡೀಪೋ ಆಗಲಿರುವ  ಕೋಟೆಗಂಗೂರು ರೈಲ್ವೆ ಕೋಚಿಂಗ್ ಡೀಪೋ ಅನ್ನು 2020-21ರ ಮುಂಗಡ ಪತ್ರದಲ್ಲಿ ಸುಮಾರು 100.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ. 

ಇದಕ್ಕಾಗಿ ಭೂಮಿಯನ್ನ ಸ್ವಾಧೀನ ಪಡಿಸಿಕೊಂಡಿದ್ದು, ಇಲಾಖೆಗೆ ಹಸ್ತಾಂತರವೂ ಆಗಿದೆ.  2024ರ ಮೇ ಅಥವಾ ಜೂನ್ ಗೂ ಮೊದಲು ಇದರ   ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆಯ ಸಭೆಯಲ್ಲಿ ತಿಳಿಸಿದ್ಧಾರೆ.

ಇದೇ ವೇಳೆ ಸಂಸದರು ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಾಡಿಯನ್ನು ಸಹ ಇಲ್ಲಿ ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಿದ್ದಾರೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು,  ನೂತನ ಯೋಜನಾ ವರದಿಯನ್ನು ಸಿದ್ದಪಡಿಸಿ ರೈಲ್ವೆ ಮಂಡಳಿಯಿಂದ ಮಂಜೂರಾತಿ ಪಡೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ಧಾರಂತೆ. 

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ 

ಶಿವಮೊಗ್ಗ/ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸಂಪರ್ಕಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿಯ ಮೊದಲ ಹಂತವನ್ನು ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. 

ಈ ಸಂಬಂಧ  ನಿನ್ನೆ ಅಂದರೆ, ದಿನಾಂಕ:22.05.2023 ರಂದು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ  ಸಂಜೀವ್ ಕಿಶೋರ್   ರೈಲ್ವೆ ಅಧಿಕಾರಿಗಳಾದ ಹೆಚ್.ಎಂ. ದಿನೇಶ್, CPTM,  ಶ್ರೀಧರ್ ಮೂರ್ತಿ, IDD, GoK,  ಸಂತೋಷ್ ಹೆಗಡೆ, ಸೆಕ್ರೆಟರಿ,   ಆಶೀಷ್ ಪಾಂಡೆ, GM, ನೈರುತ್ಯ ರೈಲ್ವೆ, ಹುಬ್ಬಳ್ಳಿ ಹಾಗೂ  ಆನಂದ ಭಾರತಿ, CE, SWR  ಒಳಗೊಂಡ ಅಧಿಕಾರಿಗಳ ಜೊತೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. 

ಈ ವೇಳೆ ಡಿಸೆಂಬರ್ 2025ರ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು  ತಳಿಸಿದ್ಧಾರೆ. ಅಲ್ಲದೆ ಸಭೆಯಲ್ಲಿ  ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ರೈಲ್ವೆ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಗಿದೆ. .

2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ ರೂ.1,200 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆ ಮಂಜೂರಾಗಿತ್ತು. 

ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗಧಿಪಡಿಸಲಾಗಿದೆ. ದಿನಾಂಕ: 27.02.2023 ರಂದು  ನರೇಂದ್ರ ಮೋದಿಯರವರು ಯೋಜನೆಗೆ ಶಿಲಾನ್ಯಾಸ ಕೈಗೊಂಡಿದ್ದರು.  ಈ ಯೋಜನೆಯ ಕಾಮಗಾರಿಯ ಪೂರ್ವಭಾವಿ ಸಿದ್ದತೆಗಳು ಆರಂಭ ಗೊಂಡಿದ್ದು ಮುಂದಿನವಾರದಿಂದ ಕಾಮಗಾರಿಯನ್ನು ಪ್ರಾರಂಭವಾಗಲಿದೆ.