ಶಿವಮೊಗ್ಗ ಜಿಲ್ಲೆಯಲ್ಲಿ ಲಂಚ ಕೇಳ್ತಿದ್ದಾರಾ? ಲೋಕಾಯುಕ್ತಕ್ಕೆ ದೂರು ಕೊಡಬೇಕಾ!? ನಿಮ್ಮೂರಿಗೆ ಬರ್ತಿದ್ದಾರೆ ಅಧಿಕಾರಿಗಳು! ಯಾವಾಗ? ಎಲ್ಲೆಲ್ಲಿ? ವಿವರ ಓದಿ

Officials of Karnataka Lokayukta's Shimoga division are holding a public grievances meeting in the district.

ಶಿವಮೊಗ್ಗ ಜಿಲ್ಲೆಯಲ್ಲಿ  ಲಂಚ ಕೇಳ್ತಿದ್ದಾರಾ? ಲೋಕಾಯುಕ್ತಕ್ಕೆ ದೂರು ಕೊಡಬೇಕಾ!? ನಿಮ್ಮೂರಿಗೆ ಬರ್ತಿದ್ದಾರೆ ಅಧಿಕಾರಿಗಳು! ಯಾವಾಗ? ಎಲ್ಲೆಲ್ಲಿ? ವಿವರ ಓದಿ
ಶಿವಮೊಗ್ಗ ಜಿಲ್ಲೆಯಲ್ಲಿ ಲಂಚ ಕೇಳ್ತಿದ್ದಾರಾ? ಲೋಕಾಯುಕ್ತಕ್ಕೆ ದೂರು ಕೊಡಬೇಕಾ!? ನಿಮ್ಮೂರಿಗೆ ಬರ್ತಿದ್ದಾರೆ ಅಧಿಕಾರಿಗಳು! ಯಾವಾಗ? ಎಲ್ಲೆಲ್ಲಿ? ವಿವರ ಓದಿ

MALENADUTODAY.COM  |SHIVAMOGGA| #KANNADANEWSWEB

ಕರ್ನಾಟಕ ಲೋಕಾಯುಕ್ತ (karnataka lokayukta) ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಈ ತಿಂಗಳಲ್ಲಿ ಶಿವಮೊಗ್ಗದ ವಿವಿಧ ತಾಲ್ಲೂಕುಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸ್ತಿದ್ದಾರೆ. ಈ ಸಭೆಯಲ್ಲಿ ತಮ್ಮ ಅಳಲನ್ನ ತೋಡಿಕೊಂಡು ಅಹವಾಲು ನೀಡಬಹುದಾಗಿದೆ. 

ಎಲ್ಲೆಲ್ಲಿ? ಯಾವಾಗ? 

  • ಮಾ.09 ರಂದು ಹೊಸನಗರ ತಾಲೂಕು ಕಚೇರಿ ಸಭಾಂಗಣ,
  • ಮಾ.13 ರಂದು ಭದ್ರಾವತಿ ತಾಲೂಕು ಕಚೇರಿ ಸಭಾಂಗಣ,
  • ಮಾ.15 ರಂದು  ಶಿವಮೊಗ್ಗ ಮಹಾನಗರ ಪಾಲಕೆ ಸಭಾಂಗಣ,
  • ಮಾ.18 ರಂದು ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ,
  • ಮಾ.21 ರಂದು ಶಿಕಾರಿಪುರ ತಾಲೂಕು ಕಚೇರಿ ಸಭಾಂಗಣ,
  • ಮಾ.28 ರಂದು ಸಾಗರ ತಾಲೂಕು ಕಚೇರಿ ಸಭಾಂಗಣ 
  • ಮಾ.30 ರಂದು ಸೊರಬ ತಾಲೂಕು ಕಚೇರಿ ಸಭಾಂಗಣ

READ : ಸಾವಿರ ಜನರು ಓಡಾಡ್ತಿದ್ರು ಬಸ್​ಸ್ಟ್ಯಾಂಡ್​ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು?

ಸಮಯ :   ನಿಗದಿತ ದಿನದ ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಲಿದೆ. 

ಏನೇನೆಲ್ಲಾ ದೂರು ಹೇಳಿಕೊಳ್ಳಬಹುದು? 

ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಸಾವು

ನಗರದ ಬುದ್ದ ನಗರ ಮುಖ್ಯ ರಸ್ತೆಯ ಇಂದಿರಾ ಕ್ಯಾಂಟೀನ್ ಹತ್ತಿರ ಮಲಗಿದಂತೆ ಬಿದ್ದಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿ, ವೈದ್ಯರು ಅಪರಿಚತ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಮೃತನು ಸುಮಾರು 25 ರಿಂದ 30 ವರ್ಷದ ಪುರುಷನಾಗಿದ್ದು, ಸುಮಾರು 05 ಅಡಿ 06 ಇಂಚು ಎತ್ತರ ಗೋಧಿ ಮೈ ಬಣ್ಣ, ಮೊಟ್ಟೆಯಾಕಾರದ ಮುಖ, ತೆಳುವಾದ ಮೈಕಟ್ಟು  ಹೊಂದಿರುತ್ತಾನೆ. ತಲೆಯಲ್ಲಿ 03 ಇಂಚು ಉದ್ದದ ಕೂದಲು, 02 ಇಂಚು ಉದ್ದ ಗಡ್ಡ ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ 08182-261414/9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!