ಸಿದ್ದರಾಮಯ್ಯರ ಸರ್ಕಾರದಲ್ಲಿ ಸಂಗಮೇಶ್ವರ್​ಗೆ ಸಚಿವ ಸ್ಥಾನ ಸಿಗಲಿ! ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಕಾರ್ಯಕರ್ತನ ಮೊರೆ

Let Sangameshwar get a ministerial berth in Siddaramaiah's government! Activist's appeal to Lord Ayyappa in Sabarimala

ಸಿದ್ದರಾಮಯ್ಯರ ಸರ್ಕಾರದಲ್ಲಿ ಸಂಗಮೇಶ್ವರ್​ಗೆ ಸಚಿವ ಸ್ಥಾನ ಸಿಗಲಿ! ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಕಾರ್ಯಕರ್ತನ ಮೊರೆ

KARNATAKA NEWS/ ONLINE / Malenadu today/ May 19, 2023 SHIVAMOGGA NEWS 

ಭದ್ರಾವತಿ/ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಹಾಗೂ ಹೀಗೂ ಸಿಎಂ ಯಾರು ಎಂಬುದು ಸಹ ಫಿಕ್ಸ್​ ಆಗಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಮಧ್ಯೆ ಶಿವಮೊಗ್ಗದಿಂದ ಯಾರಾಗ್ತಾರೆ ಸಚಿವರು ಎಂಬುದು ಕುತೂಹಲ ಮೂಡಿಸ್ತಿದೆ. ಅದಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ರವರ ಬಳಿಯಲ್ಲಿ ಒತ್ತಡ ಹೇರುವ ತಂತ್ರಗಾರಿಕೆಗಳು ಆರಂಭವಾಗಿದೆ. 

ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಮಹಿಳೆ ಕಣ್ಮರೆ! ಇವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ! ವಿವರ ಇಲ್ಲಿದೆ

ಸದ್ಯ ಶಿವಮೊಗ್ಗದಲ್ಲಿ ಗೆದ್ದಿರುವ ಮೂವರು ಶಾಸಕರು ಸಹ ಸಚಿವಸ್ಥಾನ ಸಿಗಲಿ ಎಂಬ ಬಯಕೆಯಲ್ಲಿದ್ದಾರೆ. ಈ ಪೈಕಿ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್​ಗೆ ಸಚಿವ ಸ್ಥಾನ ಸಿಗಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. 

ತೀರ್ಥಹಳ್ಳಿ ಜೋಡಿ ಕೊಲೆ! ಎಸ್​ಪಿ ಮಿಥುನ್​ ಕುಮಾರ್ ಸ್ಥಳಕ್ಕೆ ಭೇಟಿ ! ಅಸಲಿಗೆ ನಡೆದಿದ್ದೇನು? ಆರೋಪಿ ಯಾರು!?

ಈ ಮಧ್ಯೆ ಭದ್ರಾವತಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೈ. ನಟರಾಜ್ ವೈ. ನಟರಾಜ್‌ರವರು ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ  ಶಬರಿಮಲೆ ಪ್ರವಾಸ ಕೈಗೊಂಡು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿ ಹಾಗು  ಬಿ.ಕೆ ಸಂಗಮೇಶ್ವರ್‌ರವರು ಸಚಿವರಾಗಲಿ ಎಂದು ಶಬರಿಮಲೆಯಲ್ಲಿ ಪ್ರಾರ್ಥಿಸಿದ್ದಾರೆ.ಈ ಮೂಲಕ ಭದ್ರಾವತಿಗೆ ಸರ್ಕಾರದಲ್ಲಿ ಉತ್ತಮ ಸ್ಥಾನ ಸಿಗಲಿ  ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನೂ ಸಿದ್ದರಾಮಯ್ಯನವರು ಮೇ.20 ರಂದು  ಪ್ರಮಾಣವಚನ ಸ್ವೀಕರಿಸುತ್ತಿದ್ದು, ಬಿ.ಕೆ ಸಂಗಮೇಶ್ವರ್‌ರವರು ಸಹ ಅಂದು ಸಚಿವರಾಗಿ ಪದಗ್ರಹಣ ಸ್ವೀಕರಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.


ಭದ್ರಾವತಿಯಲ್ಲಿಯು ದಿ ಕೇರಳ ಸ್ಟೋರಿ (The kerala story) ಸದ್ದು!

ಭದ್ರಾವತಿ/ ತಾಲ್ಲೂಕಿನಲ್ಲಿಯು ಕೇರಳ ಸ್ಟೋರಿ (Kerala Story) ಸಖತ್​ ಸದ್ದು ಮಾಡುತ್ತಿದೆ. ಇಲ್ಲಿನ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ  ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. 

ಜೆಡಿಎಸ್​ ಕಾರ್ಯಕರ್ತರ ರೌಡಿಸಂ? ಮಾಜಿ ಶಾಸಕರ ಆರೋಪಕ್ಕೆ ಹಾಲಿ ಶಾಸಕಿ ನೀಡಿದ್ರು ಉತ್ತರ!

ಈ ಮಧ್ಯೆ  ಬಜರಂಗದಳ ವತಿಯಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.ಕೇರಳ ಸ್ಟೋರಿ ಚಲನಚಿತ್ರ ವೀಕ್ಷಣೆಗೆ ಹೆಚ್ಚಿನ ಜನರು ಆಗಮಿಸುತ್ತಿದ್ದು, ಬಜರಂಗದಳ ವತಿಯಿಂದ ಗುರುವಾರ ಮೊದಲ ಪ್ರದರ್ಶನದಲ್ಲಿ ವಿವಿಧ ಕಾಲೇಜುಗಳ ಸುಮಾರು 150 ವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.

ಕಾಳಿಂಗಕ್ಕೆ ಮುತ್ತುಕೊಟ್ಟ ಯುವಕ! ವೈರಲ್ ಆಗ್ತಿದೆ ವಿಡಿಯೋ

 ಮೇ.12 ರಿಂದ ಪ್ರತಿದಿನ ಚಲನಚಿತ್ರ 4 ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಬಜರಂಗದಳ ವಿದ್ಯಾರ್ಥಿನಿಯರಿಗೆ ಚಲನಚಿತ್ರವನ್ನ ಉಚಿತವಾಗಿ ತೋರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.