ಶಿಕಾರಿ ಮಾಡಿ, ಜಿಂಕೆ ಮಾಂಸ ಪಾಲು ಮಾಡುತ್ತಿದ್ದಾಗಲೇ ಅರಣ್ಯ ಅಧಿಕಾರಿಗಳು ನೀಡಿದ್ರು ಶಾಕ್​!

Shimoga: Forest officials have arrested two persons for poaching deer in Mandagadde forest range of Shivamogga district ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಅರಣ್ಯ ವಲಯದಲ್ಲಿ ಜಿಂಕೆ ಶಿಕಾರಿ ಮಾಡಿದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ಧಾರೆ

ಶಿಕಾರಿ ಮಾಡಿ, ಜಿಂಕೆ ಮಾಂಸ ಪಾಲು ಮಾಡುತ್ತಿದ್ದಾಗಲೇ ಅರಣ್ಯ ಅಧಿಕಾರಿಗಳು ನೀಡಿದ್ರು ಶಾಕ್​!

KARNATAKA NEWS/ ONLINE / Malenadu today/ Jul 27, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ  ತಾಲ್ಲೂಕು ಕುಳ್ಳುಂಡೆ ಗ್ರಾಮದಲ್ಲಿ ಜಿಂಕೆ ಶಿಕಾರಿ ಮಾಡಿ,  ಮಾಂಸ ಸಿದ್ದಪಡಿಸುತ್ತಿದ್ದ ವೇಳೆ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಡಗದ್ದೆ ವಲಯಾರಣ್ಯಾಧಿಕಾರಿ ಆದರ್ಶ್​​ರವರ ಟೀಂ ದಾಳಿ ನಡೆಸಿ ಜಿಂಕೆ ಮಾಂಸ ಹಾಗೂ ಆರೋಪಿಗಳನ್ನ ಬಂಧಿಸಿದೆ.

ಬಂಧಿತರು?

ಕುಳ್ಳುಂಡೆ ಗ್ರಾಮದ ರಜತ್‌ (23), ವಿನಯ್‌ (19) ಬಂದಿತ ಆರೋಪಿಗಳು ಇನ್ನೂ ದಾಳಿ ವೇಳೆ  ಮನೋಜ್‌ (28), ಚಂದ್ರು (25), ಮಣಿಕಂಠ (26) ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ಜಿಂಕೆ  ಮಾಂಸ, ಕತ್ತಿ, ಕೊಡಲಿ, ಕೋವಿ, ಚಾಕು ಹಾಗೂ, 2 ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಮಾಹಿತಿ ನೀಡಿದೆ


ಲಾಸ್ಟ್ ಡೇಟ್​ ವದಂತಿ! ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಫುಲ್​ ರಶ್! ಏನಿದು?

ಶಿವಮೊಗ್ಗದಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು ಉಂಟಾಗಿದ್ದು, ಮಳೆಯ ನಡುವೆಯೂ  ಮಹಿಳೆಯರ ದೊಡ್ಡ  ಸಾಲು ಸೇವಾಕೇಂದ್ರಗಳ ಬಳಿ ಕಂಡು ಬರುತ್ತಿದೆ. ನಿನ್ನೆ ಸಹ  ವಿನೋಬನಗರದ ಸೂಡಾ ಕಾಂಪ್ಲೆಕ್ಸ್, ಬಸ್ ನಿಲ್ದಾಣ, ದೌಪದಮ್ಮ ವೃತ್ತದಲ್ಲಿ ಇರುವ ಸೇವಾ ಕೇಂದ್ರಗಳು ಮಹಿಳೆಯರಿಂದಲೇ ಭರ್ತಿಯಾಗಿದ್ದವು. ಮೇಲಾಗಿ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಅಂತಾ ಯಾರೋ ಆಗಸ್ಟ್ 15 ದಿನಾಂಕ ಹಬ್ಬಿಸಿದ್ದಾರೆ. ಇದು ಕೂಡ ಆತಂಕಕ್ಕೆ ಕಾರಣವಾಗಿ ಶತಾಯಗತಾಯ ಅರ್ಜಿ ಸಲ್ಲಿಕೆ ಮಾಡಲೇಬೇಕು ಎಂದು ಮಹಿಳೆಯರು ಸರತಿ ಸಾಲಿನಲ್ಲಿ ಪಟ್ಟು ಹಿಡಿದು ನಿಂತಿದ್ದರು. ಒಂದು ಕಡೆ ಮಳೆ, ಇನ್ನೊಂದು ಕಡೆ ಸರ್ವರ್​ ಪ್ರಾಬ್ಲಮ್​ನಿಂದಾಗಿ ಅರ್ಜಿ ಅಲ್ಲಿಕೆ ಇನ್ನಷ್ಟು ವಿಳಂಭವಾಗುತ್ತಿದೆ. ಹಾಗಿದ್ದರೂ ಅರ್ಜಿ ಸಲ್ಲಿಸಲು ದಿನಗಟ್ಟಲೇ ಕಾಯುತ್ತಿದ್ದಾರೆ ಮಹಿಳೆಯರು.  ಈ ಮಧ್ಯೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಯಾವುದೇ ಲಾಸ್ಟ್ ಡೇಟ್ ಇಲ್ಲವೆಂದು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದ್ದಾರೆ. 

 


ಮನೆಯ ಮೇಲೆಯೇ ಕುಸಿದ ಧರೆ! ಆಸರೆ ಕಳೆದುಕೊಂಡ ಕುಟುಂಬಕ್ಕೆ ಅಂಗನವಾಡಿಯ ಆಶ್ರಯ!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಧರೆ ಕುಸಿದು ಕೆಲವೆಡೆ ಮನೆಗಳು ಜಖಂಗೊಂಡಿದೆ. ತಾಲ್ಲೂಕಿನ  ಆನಂದಪುರ ಸಮೀಪದ ನೇದರವಳ್ಳಿ ಗ್ರಾಮದ ರವಿ ಎಂಬುವವರ ಮನೆ  ನೆಲ ಸಮವಾಗಿದೆ. ಧರೆ ಕುಸಿದಿರೋದ್ರಿಂದ ಮನೆ ಕಳೆದುಕೊಂಡಿರುವ ರವಿ ಕುಟುಂಬಕ್ಕೆ ಆಸರೆ ಇಲ್ಲದಂತಾಗಿದೆ. ಸದ್ಯ ಅವರಿಗೆ ಅಂಗನವಾಡಿಯಲ್ಲಿ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಗ್ರಾಮಪಂಚಾಯ್ತಿ ಸದಸ್ಯರು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ಧಾರೆ.  


ವಿಮಾನ ಹಾರಾಟಕ್ಕೆ ಟಿಕೆಟ್ ಬುಕ್ಕಿಂಗ್ ಆರಂಭ! ರೇಟು ಎಷ್ಟು? ಏನಿದು ಸೌಲಭ್ಯ? ಟೈಮಿಂಗ್ಸ್ ಏನು? ಫುಲ್ ಡಿಟೇಲ್ಸ್ ಇಲ್ಲಿದೆ

ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಬುಕ್ಕಿಂಗ್​ ಶುರುವಾಗಿದೆ. ನಿನ್ನೆ ಸಂಜೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಈ ಸಂಬಂಧ ಇಂಡಿಗೋ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಆನ್​ಲೈನ್​ ಬುಕ್ಕಿಂಗ್ ಆರಂಭಿಸಿದ್ದು ಆಗಸ್ಟ್ 31 ರಿಂದ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಿದೆ.   

ವಿಮಾನದ ಟೈಮಿಂಗ್ಸ್

ಇಂಡಿಗೋ ವಿಮಾನ ಆಗಸ್ಟ್​  31ರ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡಲಿದೆ ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಿದೆ.  ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ

ಟಿಕೆಟ್ ವ್ಯವಸ್ಥೆ ಹೇಗೆ?

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ Flight ಟಿಕೆಟ್‌ ನಲ್ಲಿ ಇಂಡಿಗೋ ಸಂಸ್ಥೆ  ಸೇವರ್‌ (SAVER) ಮತ್ತು ಫ್ಲೆಕ್ಸಿ ಪ್ಲಸ್‌ (FLEXI PLUS) ಟಿಕೆಟ್‌ಗಳನ್ನು ಪರಿಚಯಿಸಿದೆ. ಸೇವರ್‌ ಮಾದರಿ ಟಿಕೆಟ್‌ನಲ್ಲಿ ಹೆಚ್ಚುವರಿ ಸೌಲಭ್ಯ ಇರುವುದಿಲ್ಲ.. ಆದರೆ ಫ್ಲೆಕ್ಸಿ ಪ್ಲಸ್‌ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರಿ ಸ್ಕ್ಯಾನ್ಸ್‌ ಲಭ್ಯವಿದೆ. ಎಂದು ತಿಳಿಸಿದೆ.  ಸ್ಟಾಂಡರ್ಡ್‌ ಸೀಟ್‌ ಒದಗಿಸಲಾಗುತ್ತದೆ. ಪ್ರಯಾಣದ ದಿನಾಂಕ ಬದಲಾವಣೆಯಾದರೆ ಹೆಚ್ಚುವರಿ ದರವಿರುವುದಿಲ್ಲ. ಟಿಕೆಟ್‌ ಕ್ಯಾನ್ಸಲ್‌ ಚಾರ್ಜ್‌ ಕೂಡ ಕಡಿಮೆ ಇರಲಿದೆ.

ಟಿಕೆಟ್‌ ರೇಟು 

ಆ.31ರಂದು ಪ್ರಯಾಣ ಬೆಳೆಸಿದರೆ ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕಟ್‌ ದರ  ಸೇವರ್‌ ಟಿಕೆಟ್‌ ದರ 6,647 ರೂ. ಇತ್ತು. ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 7,172 ರೂ. ಇತ್ತು. ಸೆಪ್ಟೆಂಬರ್​ ಒಂದರಿಂದ   ಟಿಕೆಟ್‌ ದರ  ಸೇವರ್‌ ಟಿಕೆಟ್‌ ದರ 3,999 ರೂ, ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 4,393 ರೂ. ಎಂದು ಪ್ರಕಟಿಸಲಾಗಿದೆ. ಈ ದರದಲ್ಲಿ ಮುಂದೆ ಇನ್ನಷ್ಟು ಬದಲಾವಣೆಯು ಆಗುವ ಸಾಧ್ಯತೆ ಇದೆ

ಇನ್ನೂ ಪ್ರಯಾಣಿಕನೊಬ್ಬ 15 ಕೆಜಿ ಮೀರದ ಹಾಗೂ 115 ಸೆಂಮೀಟರ್​ ಸುತ್ತಳತೆಗಿಂತ ಹೆಚ್ಚಿಲ್ಲದ ಲಗೇಜ್ ತೆಗೆದುಕೊಂಡು ಹೋಗಬಹುದು ಎಂದು ಇಂಡಿಗೋ ತಿಳಿಸಿದೆ. ಒಟ್ಟಾರೆ. ಈ ರೀತಿ ಬುಕ್ಕಿಂಗ್ ಆರಂಭವಾಗಿರುವುದು ವಿಮಾನ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಶಿವಮೊಗ್ಗದ ಜನರು ವಿಮಾನದ ಟಿಕೆಟ್ ಬುಕ್ಕಿಂಗ್​ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.  

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​