KSRTC ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಸಾವು | ಕೈ ಮೇಲಿತ್ತು ಮಂಜುಳಾ ಹೆಸರಿನ ಹಚ್ಚೆ , ದೇವರ ಚಿತ್ರ
dead body of an unidentified man, aged about 40-45 years, was found at the government bus stand under Doddapete police station limits in Shivamogga.

SHIVAMOGGA | MALENADUTODAY NEWS | May 29, 2024 ಮಲೆನಾಡು ಟುಡೆ
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಬಸ್‍ನಿಲ್ದಾಣದಲ್ಲಿ ಸುಮಾರು 40-45 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಆತನ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದಾರೆ. ಅಲ್ಲದೆ ಆತನ ಗುರುತು ಪತ್ತೆಗಾಗಿ ಪ್ರಕಟಣೆ ಹೊರಡಿಸಿದ್ದಾರೆ. ಅದರ ವಿವರ ಹೀಗಿದೆ.
ಮೃತವ್ಯಕ್ತಿಯು 5.8 ಅಡಿ ಎತ್ತರವಿದ್ದು, ದುಂಡುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಮೃತನ ಎಡಗೈ ಮುಂಗೈನ ಒಳಭಾಗದಲ್ಲಿ ಮಂಜುಳಾ ಎಂಬ ಇಂಗ್ಲೀಷ್ ಪದಗಳ ಹಚ್ಚೆ ಗುರುತು ಮತ್ತು ಬಲಗೈನ ಮುಂಗೈ ಒಳಭಾಗದಲ್ಲಿ ತಾಯಿ, ತಂಗಿ ಎಂಬ ಪದದ ಹಚ್ಚೆ ಗುರುತು ಹಾಗೂ ರೇಣುಕಾದೇವಿ ದೇವರ ಚಿತ್ರದ ಹಚ್ಚೆ ಗುರುತು ಇರುತ್ತದೆ. ಈತನ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ.
ಈ ಮೃತ ವ್ಯಕ್ತಿ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡ ಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
A dead body of an unidentified man, aged about 40-45 years, was found at the government bus stand under Doddapete police station limits in Shivamogga.