Shivamogga | ATM ನಲ್ಲಿ ದುಡ್ಡು ಬಿಡಿಸುವಾಗ, ಹಣಕ್ಕೆ ಡಿಮ್ಯಾಂಡ್‌ ಮಾಡಿ ಅಟ್ಟಾಡಿಸಿ ಹಲ್ಲೆ | ಸಾಗರ ರೋಡ್‌ನಲ್ಲಿ ಇದೇನು ಘಟನೆ

man was brutally assaulted while trying to withdraw money from an ATM in Shivamogga. The incident took place around 8 pm on May 26th.  

Shivamogga | ATM ನಲ್ಲಿ ದುಡ್ಡು ಬಿಡಿಸುವಾಗ, ಹಣಕ್ಕೆ ಡಿಮ್ಯಾಂಡ್‌ ಮಾಡಿ  ಅಟ್ಟಾಡಿಸಿ ಹಲ್ಲೆ | ಸಾಗರ ರೋಡ್‌ನಲ್ಲಿ ಇದೇನು ಘಟನೆ
Shivamogga Smart City, Mahanagara Palike , Rain Problem

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಎಟಿಎಂನಲ್ಲಿ ಹಣ ಬಿಡಿಸಲು ಹೋದ ವ್ಯಕ್ತಿಯನ್ನು ಹಿಡಿದು ಎಳೆದಾಡಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ. ಘಟನೆಯ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಐಪಿಸಿ : IPC 1860 (U/s-323,324,504,506,307,394,149)  ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಆದರೆ ಪ್ರಕರಣ ಸಿಟಿ ಲಿಮಿಟ್‌ನಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. 

ನಡೆದಿದ್ದೇನು? 

ಕಳೆದ 26 ನೇ ತಾರೀಖು ರಾತ್ರಿ ಎಂಟು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ್ರ ವ್ಯಕ್ತಿಯು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನವರು. ಶಿವಮೊಗ್ಗಕ್ಕೆ ಬಂದಿದ್ದ ಅವರು ವೆಹಿಕಲ್‌ಗೆ ಇಂಧನ ತುಂಬಿಸುವ ಸಲುವಾಗಿ ಸರ್ಕಿಟ್‌ ಹೌಸ್‌ನಿಂದ ಹೊರಟು ಎಸ್‌ಬಿಐ ಬ್ಯಾಂಕ್‌ ಎಟಿಎಂವೊಂದರಲ್ಲಿ ಹಣ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ 2000 ರೂಪಾಯಿ ಕ್ಯಾಶ್‌ ಬಿಡಿಸುವಂತೆ ಹೇಳಿದ್ದಾನೆ. ಇದಕ್ಕೆ ಸಂತ್ರಸ್ತ ನನಗೆ ಬೇಕಿರುವುದು 500 ರೂಪಾಯಿ ನಾನ್ಯಾಕೆ 2000 ರೂಪಾಯಿ ಬಿಡಿಸಲಿ ಎಂದು ಕೇಳಿದ್ದಾನೆ. ಆಗ 2000 ರೂಪಾಯಿ ಕೇಳಿದ ವ್ಯಕ್ತಿ ಮಾತಿಗೆ ಮಾತು ಬೆಳಸಿ ಬೆದರಿಕೆ ಹಾಕಿ , ನಿಂದನೆ ಮಾಡಿ ಹಲ್ಲೆ ಮಾಡಲು ಆರಂಭಿಸಿದ್ಧಾನೆ. ಅಲ್ಲದೆ ಆತನ ಜೊತೆಗೆ ಸೇರಿದ ನಾಲ್ವರು ಸಹ ದೂರುದಾರರ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಅವರಿಂದ ತಪ್ಪಿಸಿಕೊಂದ ದೂರುದಾರರ ಸಾಗರ ರೋಡ್‌ನ ಸ್ಮಶಾನದ ಸಮೀಪ ಓಡಿ ಬಂದಿದ್ದಾರೆ. ಅಲ್ಲಿಗೂ ಬಂದು ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಆಟೋದವರು ದೌಡಾಯಿಸಿ ಗಲಾಟೆ ಬಿಡಿಸಿದ್ದಾರೆ. ಇದಿಷ್ಟು ನಡೆದ ಘಟನೆ ಎಂದು ದೂರುದಾರರು ಆರೋಪಿಸಿದ್ದೂ, ಪೊಲೀಸರು ಸಾಲು ಸಾಲು ಸೆಕ್ಷನ್‌ ಅಡಿಯಲ್ಲಿ ಕೇಸ್‌ ಹಾಕಿದ್ದಾರೆ. ಆದಾಗ್ಯು ಎಲ್‌ಆಂಡ್‌ಓ ವ್ಯವಸ್ಥೆಯ ಬಗ್ಗೆ ಪ್ರಸ್ತುತ ಘಟನೆ ಆತಂಕ ಮೂಡಿಸಿದೆ. 

A man was brutally assaulted while trying to withdraw money from an ATM in Shivamogga. The incident took place around 8 pm on May 26th.